ಜಿಲ್ಲೆ

ದಾಸೋಹ ಮನೆಯಲ್ಲಿ ಮೂರು ಗ್ರಂಥ ಬಿಡುಗಡೆ

ಜಯತೀರ್ಥ ಪಾಟೀಲ

ಕಲಬುರಗಿ: ಶರಣರ ಜೀವನ ಕುರಿತ ಗ್ರಂಥ ಓದುವುದರಿಂದ ಜೀವನದ ಮೌಲ್ಯಗಳನ್ನು ಅರಿತುಕೊಳ್ಳಬಹುದು ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಎಸ್.ಅಪ್ಪ ಹೇಳಿದರು.

ಶರಣಬಸವೇಶ್ವರ ಸಂಸ್ಥಾನದ ದಾಸೋಹ ಮಹಾಮನೆಯಲ್ಲಿ ಸೋಮವಾರ ಸಂಜೆ ಜರುಗಿದ ಸಮಾರಂಭದಲ್ಲಿ ಮೂರು ಗ್ರಂಥಗಳನ್ನು ಬಿಡುಗೊಡೆ ಮಾಡಿದ ಅವರು, ಈ ಗ್ರಂಥಗಳು ಶರಣಬಸವೇಶ್ವರ ಸಂಸ್ಥಾನದ ೭, ೮ ಮತ್ತು ೯ನೇ ಪೀಠಾಧಿಪತಿಗಳ ಶಿವಜೀವನ ಮತ್ತು ಸಾಧನೆ ಒಳಗೊಂಡಿವೆ ಎಂದರು.

ಮಹಾದಾಸೋಹಿ ಶರಣಬಸವೇಶ್ವರರ ೨೦೩ನೇ ಯಾತ್ರೋತ್ಸವ ಸಂದರ್ಭದಲ್ಲಿ ಶರಣಬಸವೇಶ್ವರ ವಿಶ್ವವಿದ್ಯಾಲಯ ಡೀನ್ ಡಾ.ಲಕ್ಷಿö್ಮÃ ಪಾಟೀಲ ಮಾಕಾ ಗೌರವ ಸಂಪಾದಕಿ, ಡಾ.ಶಿವರಾಜ ಶಾಸ್ತಿç ಹೇರೂರ್ ಪ್ರಧಾನ ಸಂಪಾದಕ ಹಾಗೂ ಡಾ.ಸಾರಿಕಾದೇವಿ ಕಾಳಗಿ ಸಂಪಾದಕರಾಗಿ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪ ಜೀವನ ಮತ್ತು ಸಾಧನೆ ಕುರಿತ ಗ್ರಂಥ, ಖ್ಯಾತ ಸಾಹಿತಿ ಎ.ಕೆ. ರಾಮೇಶ್ವರ ರಚಿಸಿದ ಪೂಜ್ಯ ದೊಡ್ಡಪ್ಪ ಅಪ್ಪ ಅವರ ಚಾರಿತ್ರಿಕ ಶತಕ ಹಾಗೂ ಪ್ರಾಧ್ಯಾಪಕ, ಸಾಹಿತಿ ಡಾ.ಶಿವರಾಜ ಶಾಸ್ತಿç ಹೇರೂರ್ ಬರೆದ ಅನುಭವ ದಾಸೋಹಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾ ಗ್ರಂಥಗಳು ಬಿಡುಗಡೆಗೊಂಡವು.

ಶರಣಬಸವ ವಿಶ್ವವಿದ್ಯಾಲಯ ಕುಲಪತಿ ಡಾ.ಅನಿಲಕುಮಾರ ಬಿಡವೆ ಅಧ್ಯP್ಷÀತೆ ವಹಿಸಿದ್ದರು. ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಸಾದಿಕ್ ಖಾನ್ ಮತ್ತು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿದರು.

ಡಾ.ನೀಲಾಂಬಿಕಾ ಶೇರಿಕಾರ, ಪ್ರೊ.ಕ್ಷೇಮಲಿಂಗ ಬಿರಾದಾರ ಮತ್ತು ಪ್ರೊ.ವೆಂಕಣ್ಣ ಡೊಣ್ಣೆಗೌಡರ ಕೃತಿಗಳ ಪರಿಚಯ ಮಾಡಿದರು.

ಸಹೋದರಿಯರಾದ ಕೋಮಲ, ಶಿವಾನಿ, ಮಹೇಶ್ವರಿ ಪ್ರಾರ್ಥನೆ ಗೀತೆ ಹಾಡಿದರು. ಡಾ.ಅಲ್ಲಮಪ್ರಭು ದೇಶಮುಖ ಇತರರಿದ್ದರು.