ಜಿಲ್ಲೆ

ದಾಸೋಹ ಮನೆಗೆ 218 ಕ್ವಿಂಟಾಲ್ ಆಹಾರ ಧಾನ್ಯ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಶ್ರೀ ಶರಣಬಸವೇಶ್ವರ ಮಹಾದಾಸೋಹ ಜಾತ್ರಾ ಮಹೋತ್ಸವ ನಿಮಿತ್ತ ನೆಹರು ಗಂಜ್ ವ್ಯಾಪಾರಿಗಳು ಸೋಮವಾರ ಅದ್ದೂರಿ ಮೆರವಣಿಗೆಯೊಂದಿಗೆ ಶರಣ ಸಂಸ್ಥಾನಕ್ಕೆ ಆಗಮಿಸಿ, ೨೧೮ ಕ್ವಿಂಟಾಲ್ ಆಹಾರ ಧಾನ್ಯ ತಂದು ಸಮರ್ಪಣೆ ಮಾಡಿ ಸಂಸ್ಥಾನದಿAದ ಆಶೀರ್ವಾದ ಪಡೆದರು.
ದಾಲ್‌ಮಿಲ್ ಅಸೋಸಿಯೇಷನ್, ಆಹಾರ ಧಾನ್ಯ ಮತ್ತು ಬೀಜ ವ್ಯಾಪಾರಿಗಳ ಸಂಘ, ರೈಸ್ ಮರ್ಚಂಟ್ ಅಸೋಸಿಯೇಷನ್, ಪೆಸ್ಟಿಸೈಡ್ಸ್ ಅಸೋಸಿಯೇಷನ್ಸ್, ಮುನೀಮ್ ಸಂಘ ಸೇರಿ ಗಂಜ್ ವ್ಯಾಪಾರಿಗಳು, ಕೆಲಸಗಾರರು ಅದ್ದೂರಿ ಮೆರವಣಿಗೆಯೊಂದಿಗೆ ಆಗಮಿಸಿದರು.
ಬೆಳಗ್ಗೆ ಗಂಜ್ ಹನುಮಾನ ದೇವಸ್ಥಾನದಿಂದ ಶ್ರೀ ಶರಣಬಸವೇಶ್ವರ ಬೃಹತ್ ಭಾವಚಿತ್ರ, ಆಹಾರ ಧಾನ್ಯ, ಕಿರಾಣಿ ಸಾಮಗ್ರಿಗಳನ್ನು ಹೊತ್ತು ಎರಡು ಲಾರಿಗಳೊಂದಿಗೆ ಮೆರವಣಿಗೆ ಆರಂಭವಾಯಿತು. ಡೊಳ್ಳು, ಭಜನಾ ತಂಡಗಳು, ಸೌಂಡ್‌ಬಾಕ್ಸ್ನೊAದಿಗೆ ಶರಣಬಸವೇಶ್ವರ ಜೈಕಾರ ಮೊಳಗಿಸುತ್ತಾ ಮೆರವಣಿಗೆ ಶರಣಬಸವೇಶ್ವರ ದೇವಸ್ಥಾನ ತಲುಪಿತು.
ಅಕ್ಕಿ, ಬೇಳೆ, ಎಣ್ಣೆ, ಬೆಲ್ಲ, ಗೋಧಿ, ಸಕ್ಕರೆ, ಜೋಳ ಸೇರಿ ದಾಸೋಹಕ್ಕೆ ಬೇಕಾದ ೨೧೮ ಕ್ವಿಂಟಾಲ್ ಆಹಾರ ಧಾನ್ಯಗಳನ್ನು ಸಂಸ್ಥಾನಕ್ಕೆ ಅ ರ್ಪಿಸಲಾಯಿತು. ನೂರಾರು ಜನರು ಆಗಮಿಸಿ, ಶರಣಬಸವೇಶ್ವರ ಗದ್ದುಗೆಗೆ ನಮಸ್ಕರಿಸಿ, ಸಂಸ್ಥಾನ ಪೀಠಾಧಿಪತಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪ , ಮಾತೋಶ್ರೀ ಡಾ.ದಾಕ್ಷಾಯಣಿ ಅಪ್ಪ, ಪೂಜ್ಯಶ್ರೀ ಚಿ.ದೊಡ್ಡಪ್ಪ ಅಪ್ಪ ಅವರ ದರ್ಶನಾಶೀರ್ವಾದ ಪಡೆದರು.
ಸಂಸ್ಥಾನದ ಬಸವರಾಜ ದೇಶಮುಖ ಮೆರವಣಿಗೆಗೆ ಸ್ವಾಗತಿಸಿದರು. ವಿಧಾನ ಪರಿಷತ್ ಸದಸ್ಯಡಾ.ಬಿ.ಜಿ.ಪಾಟೀಲ್, ಶಾಸಕಿ ಕನೀಜ್ ಫಾತಿಮಾ, ಪ್ರಮುಖರಾದ ಅಲ್ಲಮಪ್ರಭು ಪಾಟೀಲ್, ನೀಲಕಂಠರಾವ ಮೂಲಗೆ, ಶರಣಕುಮಾರ ಮೋದಿ, ಸಂಘದ ಅಧ್ಯಕ್ಷ ಶ್ರೀಮಂತ ಉದನೂರ, ಸಂತೋಷ ಲಂಗಾರ, ಸಂತೋಷ ನೀನಗಡೆ, ಸಾದೇವ ಬಿರಾದಾರ, ಅಂಬಾರಾಯ ಜೀವಣಗಿ, ಬಸವರಾಜ ಪ್ಯಾಟಿ, ಮಲ್ಲಿಕಾರ್ಜುನ ಕೆ, ಸಂಗಣ್ಣ ಹಿರೇಗೌಡ, ಸಂತೋಷ ಬಾಳಿ, ಸಂಜಯ ಮುಗಳಿ, ಶಂಕ್ರಪ್ಪಗೌಡ ಪಾಟೀಲ್, ಟಿ.ಎಸ್‌ಪಾಟೀಲ್, ಹಣಮಂತರಾಯ ಉದಗಿ, ಮೋಹನ್ ಪಂಡಿತ, ಭೀಮಶಾ ಜೀವಣಗಿ, ನಾಗಣ್ಣ ಸುಲ್ತಾನಪುರ, ಉಮಾಕಾಂತ ವಾಡಿ, ವಿಜಯಕುಮಾರ ಪಾಟೀಲ್, ಭೋಜರಾಜ ಪಾಟೀಲ್, ಮಹಾಂತೇಶ ರೋಜೆ ಇತರರಿದ್ದರು.