ತುಮಕೂರು: ತ್ರಿವಿಧ ದಾಸೋಹಿ ಶಿವಕುಮಾರ ಶ್ರೀಗಳ ಪುಣ್ಮಸ್ಮರಣೆ ದಿನವಾದ ಜ.21ರಂದು "ದಾಸೋಹ ದಿನ' ಆಚರಣೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಎಡವಿರುವುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಆಕ್ಷೇಪ ವ್ಯಕ್ತಪಡಿಸಿದರು.
ಶ್ರೀ ಶಿವಕುಮಾರ ಮಹಾಶಿವಯೋಗಿಗಳ 6ನೇ ಪುಣ್ಯಸಂಸ್ಮರಣೋತ್ಸವ ಅಂಗವಾಗಿ ಮಂಗಳವಾರ ಶ್ರೀಠಮಕ್ಕೆ ಭೇಟಿ ನೀಡಿದ ಬಿ.ವೈ.ವಿಜಯೇಂದ್ರ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಯಡಿಯೂರಪ್ಪ ಅವರ ಅಪೇಕ್ಷಯಂತೆ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ದಾಸೋಹ ದಿನ ಘೋಷಣೆ ಮಾಡಿದ್ದರು. ಆದರೆ, ಈ ರಾಜ್ಯ ಸರ್ಕಾರ ದಾಸೋಹ ದಿನವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡುತ್ತಿಲ್ಲ. ಸರ್ಕಾರಕ್ಕೆ ಯಾವಾಗ ಬುದ್ಧಿ ಬರುತ್ತೋ ಆವಾಗ ದಾಸೋಹ ದಿನ ಆಚರಿಸಲಿ ಎಂದರು.
ಈ ಪವಿತ್ರ ಕ್ಷೇತ್ರ ಸಿದ್ಧಗಂಗಾ ಮಠ ನಾಡಿನ ಲಾಂತರ ಬಡಮಕ್ಕಳಿಗೆ ಅನ್ನ, ಜ್ಞಾನ, ಆಶ್ರಯ ದಾಸೋಹ ನೀಡಿಕೊಂಡು ಬಂದಿದೆ. ದಾಸೋಹ ದಿನ ಘೋಷಣೆ ಮಾಡಿದರೆ ಸಾಲದು. ಅರ್ಥಪೂರ್ಣವಾಗಿ ನಡೀಬೇಕು. ಇದು ಜಾರಿಯಾಗಬೇಕು ಎಂಬುದು ಕೋಟ್ಯಂತರ ಭಕ್ತರ ಆಶಯವಾಗಿದೆ. ಸರ್ಕಾರದ ಬಗ್ಗೆ ಟೀಕೆ ಮಾಡಲಿಕ್ಕೆ ಹೋಗುವುದಿಲ್ಲ. ಭಗವಂತ ಬುದ್ಧಿ ಕೊಟ್ಟಾಗ ಮಾಡಲಿ ಎಂದು ಬೇಸರಿಸಿದರು.
ಇನ್ನೂ ಪುಣ್ಯಸಂಸ್ಮರಣೋತ್ಸವ ವೇದಿಕೆ ಕಾರ್ಯಕ್ರಮದಲ್ಲೇ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ದಾಸೋಹ ದಿನವನ್ನು ನಮ್ಮ ಬಿಜೆಪಿ ಸರ್ಕಾರ ಘೋಷಣೆ ಮಾಡಿದ್ದು, ಅದು ಘೋಷಣೆಯಾಗೇ ಉಳಿದಿದೆ. ಈ ಸರ್ಕಾರ ಶ್ರೀಗಳ ಪುಣ್ಮಸ್ಮರಣೆ ದಿನವನ್ನು ದಾಸೋದ ದಿನವನ್ನಾಗಿ ಅರ್ಥಪೂರ್ಣವಾಗಿ ಆಚರಿಸಲು ಮನಸು ಮಾಡುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಸಿಎಂ ಸಿದ್ದರಾಮಯ್ಯ, ಜಿಲ್ಲೆಯ ಪ್ರಭಾವಿ ಸಚಿವರಾದ ಡಾ.ಜಿ.ಪರಮೇಶ್ವರ, ಕೆ.ಎನ್.ರಾಜಣ್ಣ ಅವರಿಗೆ ಪತ್ರ ಬರೆದು ದಾಸೋಹ ದಿನವನ್ನು ಇಡೀ ರಾಜ್ಯದಲ್ಲಿ ಆಚರಿಸುವಂತೆ ಆದೇಶ ಹೊರಡಿಸುವಂತೆ ಒತ್ತಾಯಿಸುತ್ತೇನೆ ಎಂದರು.
ಶಿವಕುಮಾರ ಶ್ರೀಗಳ ಪೂರ್ವಾಶ್ರಮದ ಹುಟ್ಟೂರು ವೀರಾಪುರದಲ್ಲಿ 111 ಅಡಿ ಎತ್ತರದ ಶ್ರೀಗಳ ಪ್ರತಿಮೆ ನಿರ್ಮಾಣಕ್ಕೆ ಯಡಿಯೂರಪ್ಪ ಸರ್ಕಾರ ಅನುದಾನ ಬಿಡುಗಡೆ ಮಾಡಿತ್ತು. ಆ ಕೆಲಸ ಇನ್ನೂ ಪೂರ್ಣಗೊಂಡಿಲ್ಲ. ಭಕ್ತರ ಆಶಯ ಈಡೇರಿಸಲು ಸಹಕಾರ ನೀಡುವಂತೆ ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡುವೆ. ಇನ್ನೂ ಪರಮಪೂಜ್ಯರಿಗೆ ಭಾರತರತ್ನ ಕೊಡುವ ಒಳ್ಳೆದಿನ ಬರಲಿದೆ ಎಂಬ ನಿರೀೆಯಲ್ಲಿ ನಾವಿದ್ದೇವೆ.
| ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ