ಹುಬ್ಬಳ್ಳಿ: ಶಕ್ತಿ ಕಾಲನಿ ಸಂತೋಷ ನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಡಿ. 19ರಂದು ಸಂಜೆ 6ರಿಂದ ರಾತ್ರಿ 7.30 ಗಂಟೆಯವರೆಗೆ ದೀಪಕ ಶಾನಭಾಗ ಅವರ ದಾಸವಾಣಿ ಮತ್ತು ಭಕ್ತಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.
ತಬಲಾದಲ್ಲಿ ಮನುಕುಮಾರ ಹಿರೇಮಠ ಮತ್ತು ಹಾರ್ವೇನಿಯಂನಲ್ಲಿ ಪಂ. ಅರುಣ ದೇಸಾಯಿ ಸಾಥ್ ನೀಡುವರು ಎಂದು ರಾಘವೇಂದ್ರ ಸ್ವಾಮಿ ಮಠದ ಅಧ್ಯಕ್ಷ ಗೋವಿಂದಾಚಾರ್ಯರು ತಿಳಿಸಿದ್ದಾರೆ.