ಕನಕದಾಸರ ಭಾವಚಿತ್ರಕ್ಕೆ ಪುಪ್ಷಾಂಜಲಿ ಸಲ್ಲಿಸಿ ಗೌರವ ನಮನ ಸಲ್ಲಿಸಲಾಯಿತು. 
ಜಿಲ್ಲೆ

ದಾಸರ ಕೀರ್ತನೆಗಳಲ್ಲಿ ಸಮಾನತೆಯ ತತ್ವ ಅಡಗಿ

ಬಾಗಲಕೋಟೆ: ಕನಕದಾಸರು ದಾರ್ಶನಿಕರಲ್ಲದೆ ಸಮಾಜಸುಧಾರಕರಾಗಿದ್ದರು ಅವರ ಕೀರ್ತನೆಗಳಲ್ಲಿ ಸಮಾನತೆಯ ತತ್ವ ಅಡಗಿದೆ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ಅವರು ನಗರದ ಶಿವಾನಂದ ಜೀನ್ ನಲ್ಲಿ ಭಾರತೀಯ ಜನತಾ ಪಾರ್ಟಿ ನಗರ ಮಂಡಲವತಿಯಿAದ ಹಮ್ಮಿಕೊಂಡ ದಾಸಶ್ರೇಷ್ಠ
ಕನಕದಾಸರ ಜಯಂತ್ಸೋತ್ಸವ ಕಾರ್ಯಕ್ರಮದಲ್ಲಿ ಕನದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಭಕ್ತಿ ಪರಂಪರೆ ಭಾರತ ಅಸ್ಮೀತೆಯ ಪ್ರತಿಕವಾಗಿದ್ದು, ಅನೇಕ ದಾರ್ಶನಿಕರು ಭಕ್ತಿ ಪರಂಪರೆ ಮೂಲಕ ಭಾರತದ ಏಕತೆಯನ್ನು ಗಟ್ಟಿಗೋಳಿಸಿದರು.ಅಂಥವರಲ್ಲಿ ದಾಸಪರಂಪರೆಯಲ್ಲಿ ದಾಸಶ್ರೇಷ್ಠ ಕನಕದಾಸರು ಒಬ್ಬರು, ಅವರ ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿರುವುದಲ್ಲದೆ, ಸಂಗೀತ ಪ್ರಪಂಚಕ್ಕೆ ತನ್ನದೇ ಆದಂತಹ ಕೊಡುಗೆಯನ್ನು ಮುಂಡಿಗೆಗಳ ರೂಪದಲ್ಲಿ ನೀಡಿದ್ದಾರೆ. ಸುಮಾರು ೩೧೬ ಕೀರ್ತನೆಗಳು ಹಾಗೂ ಇನ್ನಿತರ ಸಾಹಿತ್ಯ ಮಾತ್ರ ಲಭ್ಯವಾಗಿರುವುದನ್ನು ಕಾಣಬಹುದಾಗಿದೆ. "ಮೋಹನತರಂಗಿಣ,ನಳಚರಿತ್ರೆ,ರಾಮಧಾನ್ಯ ಚರಿತೆ. ಹರಿಭಕ್ತಿಸಾರ,ನೃಸಿಂಹಸ್ತವ" ಇವು ಅವರ ಐದು ಮುಖ್ಯ ಕಾವ್ಯಕೃತಿಗಳಾಗಿವೆ.

ಜ್ಞಾನಿಗಳು ಕೈಗೆತ್ತಿಕೊಳ್ಳುವ ಸಮಾಜ ಸುಧಾರಣೆಗೆ ಮೂಲವೇ ಅವರ ಅಂತರAಗದ ಬೆಳಕು. ಅದೇ ಅವರ ಶಕ್ತಿ. ಆಧ್ಯಾತ್ಮಿಕತೆಯೇ ಈ ಶಕ್ತಿಯ ಮೂಲಸತ್ತ್ವವಾಗಿದೆ, ಈ ವಚನಸಾಹಿತ್ಯ,ದಾಸಸಾಹಿತ್ಯ,ಜನಪದ ಸಾಹಿತ್ಯದಿಂದ ಕನ್ನಡ ಭಾಷೆಗೆ ಬಹುದೊಡ್ಡಶಕ್ತಿ ತುಂಬಿವೆ, ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾನತೆಯ ತತ್ವಸಾರಿ ಸಮಾಜ ಸುದಾರಣೆಗೆ
ಶ್ರಮಿಸಿದವರು, ಅವರ ಜೀವನ ಆದರ್ಶ ತತ್ವಗಳು ಇಂದಿಗೂ ಪ್ರಸ್ತೂತವಾಗಿವೆ ಎಂದರು.

ಸಮಾರAಭದಲ್ಲಿ ಬಿಜೆಪಿ ಮುಖಂಡ ಡಾ.ಎಂ.ಎಸ್.ದಡ್ಡೆನ್ನವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ,ಜಿಲ್ಲಾ ಮಾದ್ಯಮ ವಕ್ತಾರ ಸತ್ಯನಾರಾಯಣ ಹೆಮಾದ್ರಿ, ನಗರಮಂಡಲ ಅಧ್ಯಕ್ಷ ಸದಾನಂದ ನಾರಾ, ನಗರಸಭೆ ಸದಸ್ಯೆ ಜ್ಯೋತಿ ಭಜಂತ್ರಿ,ಸರಸ್ವತಿ ಕುರಬರ,ಶೋಭಾ ರಾವ್, ಶಿವಲೀಲಾ ಪಟ್ಟಣಶೆಟ್ಟಿ, ನಗರಸಭೆ ಮಾಜಿ ಅಧ್ಯಕ್ಷ ದ್ಯಾವಪ್ಪ ರಾಯಕುಂಪಿ, ಶಿವಾನಂದ ಟವಳಿ.ಗುಂಡುರಾವ ಶಿಂದೆ,ಬಸವರಾಜ ಅವರಾದಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.