ಜಿಲ್ಲೆ

ದಾವಣಗೆರೆ ಸೇರಿ ರಾಜ್ಯದ ಏಳು ಜೈಲುಗಳಿಗೆ ಹೊಸ ಕಟ್ಟಡ


ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ
ರಾಜ್ಯದಲ್ಲಿರುವ ಕೇಂದ್ರ, ಜಿಲ್ಲಾ ಹಾಗೂ ಉಪಕಾರಾಗೃಹಗಳ ಪೈಕಿ ಹಲವು ಜೈಲುಗಳಿಗೆ ನೂತನ ಕಟ್ಟಡ ಮತ್ತು ಹೆಚ್ಚುವರಿ ಬ್ಯಾರಕ್ ಗಳು ಹಾಗೂ ಒಂದು ಹೊಸ ಬಯಲು ಕಾರಾಗೃಹ ನಿರ್ಮಾಣಕ್ಕೆ ರಾಜ್ಯಸರ್ಕಾರ ಹಸಿರು ನಿಶಾನೆ ತೋರಿಸಿದೆ.
10 ಕೇಂದ್ರ ಕಾರಾಗೃಹ ಸೇರಿ ಕೇಂದ್ರ, ಜಿಲ್ಲಾ, ತಾಲೂಕು, ಬಯಲು ಹಾಗೂ ವಿಶೇಷ ಉಪಕಾರಾಗೃಹ ಸಹಿತ ರಾಜ್ಯದಲ್ಲಿ 66 ಜೈಲುಗಳಿವೆ. ಇವುಗಳ ಪೈಕಿ ಹಲವೆಡೆ ಸಾಮರ್ಥ್ಯ ಮೀರಿ ವಿಚಾರಣಾಧೀನ/ಸಜಾಬಂಧಿಗಳ ಸಂಖ್ಯೆ ಇದೆ. ಹೀಗಾಗಿ ಹೊಸ ಕಟ್ಟಡ, ಹೆಚ್ಚುವರಿ ಬ್ಯಾರಕ್ ಹಾಗೂ 75 ಬಂಧಿಗಳ ಸಾಮರ್ಥ್ಯದ ಒಂದು ಹೊಸ ಬಯಲು ಕಾರಾಗೃಹ ನಿರ್ಮಾಣವಾಗಬೇಕಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯು, ರಾಜ್ಯಪೊಲೀಸ್ ವಸತಿ ಮತ್ತು ಮೂಲ ಸೌಲಭ್ಯ ಅ ಭಿವೃದ್ಧಿ ನಿಗಮದ ಅಧ್ಯಕರಿಗೆ ಪತ್ರ ಬರೆದಿದೆ. ಎಲ್ಲಿ ಹೊಸ ಕಾರಾಗೃಹಗಳು, ಹೆಚ್ಚುವರಿ ಬ್ಯಾರಕ್‌ಗಳ ಹಾಗೂ ಹೊಸ ಬಯಲು ಕಾರಾಗೃಹ ನಿರ್ಮಾಣವಾಗುತ್ತಿದೆ ಎಂಬುದರ ಮಾಹಿತಿಯನ್ನು ನಿಗಮಕ್ಕೆ ತಿಳಿಸಿದೆ.
ಹೊಸ ಕಟ್ಟಡಗಳಿಗೆ ಆಗುವ ವೆಚ್ಚ ಹಾಗೂ ನೀಲಿನಕ್ಷೆಯನ್ನು ಶೀಘ್ರ ಕೊಡುವಂತೆ, ಕಾರಾಗೃಹ ಇಲಾಖೆ ಮಹಾನಿರ್ದೇಶಕಿ ಮಾಲಿನಿ ಕೃಷ್ಣಮೂರ್ತಿ ಅವರು ನಿಗಮದ ಅಧ್ಯಕ್ಷರಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಹೊಸ ಕಾರಾಗೃಹಗಳು
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿ 600 ಬಂಧಿಗಳ ನೂತನ ಕೇಂದ್ರ ಕಾರಾಗೃಹ ನಿರ್ಮಾಣ. ಹಾಸನದಲ್ಲಿ 1000 ಕೈ ದಿಗಳ ಸಾಮರ್ಥ್ಯದ ಹೊಸ ಜಿಲ್ಲಾ ಕಾರಾಗೃಹ. ರಾಯಚೂರು ಹಾಗೂ ದಾವಣಗೆರೆಯಲ್ಲಿ ತಲಾ 500 ಬಂಧಿಗಳ ಹೊಸ ಜಿಲ್ಲಾ ಜೈಲು ಗಳು. ಯಾದಗಿರಿ, ಗದಗ ಹಾಗೂ ಹೊಸಪೇಟೆಯಲ್ಲಿ ತಲಾ 300 ಕೈದಿಗಳ ಸಾಮರ್ಥ್ಯದ ಹೊಸ ಜಿಲ್ಲಾ ಕಾರಾಗೃಹಗಳ ಕಟ್ಟಡ ಹಾಗೂ ಕಡೂರಲ್ಲಿ 75 ಬಂಧಿಗಳ ಸಾಮರ್ಥ್ಯದ ಹೊಸ ಬಯಲು ಕಾರಾಗೃಹ ನಿರ್ಮಾಣವಾಗಲಿವೆ.

ಹೊಸ ಹೆಚ್ಚುವರಿ ಬ್ಯಾರಕ್‌ಗಳ ನಿರ್ಮಾಣ
ಶಿವಮೊಗ್ಗ, ಮಂಡ್ಯ ಮತ್ತು ಚಿಕ್ಕಮಗಳೂರು ಜಿಲ್ಲಾ ಕಾರಾಗೃಹಗಳಲ್ಲಿ 200 ಬಂಧಿಗಳ ಸಾಮರ್ಥ್ಯದ ಹೆಚ್ಚುವರಿ ಬ್ಯಾರಕ್‌ಗಳು, ತು ಮಕೂರು ಜಿಲ್ಲಾ ಕಾರಾಗೃಹ, ಹುಮನಾಬಾದ್ ಸಬ್‌ಜೈಲು ಹಾಗೂ ದೇವನಹಳ್ಳಿ ಬಯಲು ಕಾರಾಗೃಹದಲ್ಲಿ 50 ಬಂಧಿಗಳ ಸಾಮರ್ಥ್ಯ ದ ಹೆಚ್ಚುವರಿ ಬ್ಯಾರಕ್ ನಿರ್ಮಾಣಕ್ಕೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.

17500 ಕೈದಿಗಳ ಸಾಮರ್ಥ್ಯ
ತುಮಕೂರು, ಶಿವಮೊಗ್ಗದಲ್ಲಿ ಪ್ರತ್ಯೇಕ 2 ಮಹಿಳಾ ಕಾರಾಗೃಹಗಳು ಸೇರಿ ರಾಜ್ಯದಲ್ಲಿ 10 ಕೇಂದ್ರ ಕಾರಾಗೃಹಗಳು, 21 ಜಿಲ್ಲಾ, 33 ಉಪ ಕಾರಾಗೃಹಗಳು ಹಾಗೂ ಕೆಜಿಎಫ್‌ನಲ್ಲಿ ಒಂದು ವಿಶೇಷ ಉಪ ಕಾರಾಗೃಹ, ದೇವನಹಳ್ಳಿ ಒಂದು ಬಯಲು ಕಾರಾಗೃಹಗಳಿವೆ. ಪ್ರ ಸ್ತುತ ಈ ಎಲ್ಲ ಕಾರಾಗೃಹಗಳ ಬಂಧಿಗಳ ಸಾಮರ್ಥ್ಯ ಅಂದಾಜು 17500 ಇದೆ.

ಹೊಸಪೇಟೆಗೆ ಜಿಲ್ಲಾ ಕಾರಾಗೃಹ
ಈಗ ಹೊಸ ಕಟ್ಟಡ ಪಡೆಯುತ್ತಿರುವ ಹಾಸನ(259),ರಾಯಚೂರು(160)ದಾವಣಗೆರೆ(170)ಯಾದಗಿರಿ(80),ಗದಗ(48)ಜೈಲುಗಳಲ್ಲಿ ಹಾಗೂ ಜಿಲ್ಲಾ ಕಾರಾಗೃಹವಾಗಲಿರುವ ಹೊಸಪೇಟೆ ಸಬ್‌ಜೈಲ್‌ನಲ್ಲಿ(747)ಹಾಗೂ ಈಗಾಗಲೇ ಇರುವ ಕಡೂರು ಸಬ್‌ಜೈಲಿನಲ್ಲಿ 225 ಕೈದಿಗಳ ಸಾಮರ್ಥ್ಯವಿದೆ.

ಕೋಟ್
ರಾಜ್ಯದ ಕೆಲವು ಕಾರಾಗೃಹಗಳಿಗೆ ಹೊಸ ಕಟ್ಟಡ, ಹೆಚ್ಚುವರಿ ಬ್ಯಾರಕ್‌ಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಒಂದು ವಾರದೊಳಗೆ ನಿಗ ಮದಿಂದ ನೀಲಿನಕ್ಷೆ ಮತ್ತು ಅಂದಾಜು ಪಟ್ಟಿಯನ್ನು ಕಾರಾಗೃಹ ಇಲಾಖೆಗೆ ಕಳಿಸಿಕೊಡಲಾಗುವುದು.
ಡಾ.ಕೆ.ರಾಮಚಂದ್ರರಾವ್, ಡಿಜಿಪಿ, ಅಧ್ಯಕ್ಷರು,ವ್ಯವಸ್ಥಾಪಕ ನಿರ್ದೇಶಕರು, ರಾಜ್ಯಪೊಲೀಸ್ ವಸತಿ ಮತ್ತು ಮೂಲ ಸೌಲಭ್ಯ ಅಭಿ ವೃದ್ಧಿ ನಿಗಮ, ಬೆಂಗಳೂರು.