ರಾಜ್ಯದ 9 ತಾಲೂಕುಗಳಲ್ಲಿ ಬೆಳೆ ಸಮಗ್ರ ಉತ್ತೇಜನಕ್ಕೆ ಪ್ಲಾನ್ ಬೆಳೆಗಾರರಿಗೆ ವೈಜ್ಞಾನಿಕ ಸಲಹೆ, ಮಾರಾಟ ಸೌಲಭ್ಯಕ್ಕೂ ಕ್ರಮ
ವಿಜಯವಾಣಿ ಸುದ್ದಿಜಾಲ ಚಿತ್ರದುರ್ಗ
ಕೇಂದ್ರ ಸರ್ಕಾರ ದಾಳಿಂಬೆ ಕ್ಲಸ್ಟರ್ ಅಭಿವೃದ್ಧಿ ಯೋಜನೆಯಡಿ ದಾಳಿಂಬೆ ಬೆಳೆ ಸಮಗ್ರ ಉತ್ತೇಜನಕ್ಕಾಗಿ ದೇಶಾದ್ಯಂತ 53 ಕ್ಲಸ್ಟರ್‌ಗಳ ನ್ನು ಗುರುತಿಸಿದೆ ಎಂದು ಚಿತ್ರದುರ್ಗ ತೋಟಗಾರಿಕೆ ಇಲಾಖೆ ಡಿಡಿ ಶರಣಬಸಪ್ಪ ಬೋಗಿ ಅವರು ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ತುಮಕೂರು ಜಿಲ್ಲೆಯ ಶಿರಾ, ಚಿತ್ರದುರ್ಗ ಜಿಲ್ಲೆ ಯ ಎಲ್ಲ 6 ತಾಲೂಕುಗಳು ಹಾಗೂ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಮತ್ತು ಕೂಡ್ಲಿಗೆ ತಾಲೂಕುಗಳ ಸೇರಿವೆ.
ಮುಂದಿನ 5 ವರ್ಷಗಳಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಸ್ತುತ ಅಂದಾಜು 9 ಸಾವಿರ ಹೆಕ್ಟೇರ್ ದಾಳಿಂಬೆ ವಿಸ್ತೀರ್ಣವನ್ನು 19 ಸಾವಿರ ಹೆ ಕ್ಟೇರ್‌ಗೆ ವಿಸ್ತರಿಸುವ ಗುರಿ ಇದೆ. ರಾಜ್ಯದ ಈ ಒಂಬತ್ತು ತಾಲೂಕುಗಳ ಬೆಳೆಗಾರರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಬೆಂಗ ಳೂರು ಅಸೋಸಿಯೇಟೆಡ್ ಇಂಡಸ್ಟ್ರೀಯಲ್ ಕಾಪೋರೇಷನ್(ಎಐಸಿ) ಅನುಷ್ಠಾನ ಸಂಸ್ಥೆಯಾಗಿ ಕಾರ‌್ಯನಿರ್ವಹಿಸಲಿದೆ.
ರಾಷ್ಟ್ರೀಯ ತೋಟಗಾರಿಕೆ ಮಂಡಳಿ, ಕರ್ನಾಟಕ ರಾಜ್ಯಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ(ಕೆಪೆಕ್)ಹಾಗೂ ಎಐಸಿ ಸಹ ಯೋಗದಲ್ಲಿ ಯೋಜನೆ ಅನುಷ್ಠಾನವಾಗಲಿದೆ. ಮಳೆ ಕಡಿಮೆ ಬೀಳುವ ಪ್ರದೇಶಗಳು ದಾಳಿಂಬೆಗೆ ಸೂಕ್ತವೆಂದು ಪರಿಗಣಿಸಲಾಗಿದೆ. ಮ ಣ್ಣಿನ ಗುಣವೂ ಅನುಕೂಲವಾಗಿದೆ.
ಈ ಯೋಜನೆಯಡಿ ಒಳಪಟ್ಟ ಜಿಲ್ಲೆಗಳ ದಾಳಿಂಬೆ ಬೆಳೆಗಾರರಿಗೆ ಶೇ.40 ಸಬ್ಸಿಡಿ ದರದಲ್ಲಿ ಸೌಲಭ್ಯಗಳನ್ನು ಈ ವರ್ಷದಿಂದಲೇ ಒದಗಿ ಸಲಾಗುತ್ತದೆ. ಕೇಂದ್ರ ಅಭಿವೃದ್ಧಿ ಪಡಿಸಿರುವ ಸುರಕ್ಷಾ ಆ್ಯಪ್ ಮೂಲಕ ದಾಳಿಂಬೆ ಬೆಳೆಗಾರರು ಹಾಗೂ ಹೊಸದಾಗಿ ಬೆಳೆಯಲು ಮುಂ ದಾಗುವ ರೈತರು ಹೆಸರು ನೋಂದಾಯಿಸಿಕೊಳ್ಳಬಹುದಾಗಿದ್ದು, ಇದರ ಕೃಷಿಗೆ ಸಂಬಂಧಿಸಿದಂತೆ ಆರಂಭದಿಂದ ಕೊನೆಯವರೆಗೂ ವಿವಿಧ ಸೌಲಭ್ಯಗಳನ್ನು ಒದಗಿಸುವುದು ಯೋಜನೆ ಉದ್ದೇಶವಾಗಿದೆ ಎಂದರು.
ದಾಳಿಂಬೆ ಬೆಳೆಗಾರರಿಗೆ ವೈಜ್ಞಾನಿಕ ಸಲಹೆಗಳೊಂದಿಗೆ ಮಾರುಕಟ್ಟೆ ಸವಲತ್ತನ್ನೂ ಒದಗಿಸಲಾಗುವುದೆಂದು ಎಐಸಿ ಯೋಜನಾ ನಿರ್ದೇ ಶಕ ಮನೋಜ್‌ಕುಶಾಲಪ್ಪ ತಿಳಿಸಿದರು. ಜಿಲ್ಲೆಯಲ್ಲಿ ಕಂಪನಿಯ 70 ಎಕರೆ ಜಮೀನಿದ್ದು, ಇಲ್ಲಿ ಅಥವಾ ಸೂಕ್ತವೆನಿಸುವ ಸ್ಥಳಗಳಲ್ಲಿ ದಾಳಿಂ ಬೆ ಖರೀದಿಗೆ ಮಿನಿ ಎಪಿಎಂಸಿಗಳನ್ನು ಸ್ಥಾಪಿಸಲಾಗುವುದು. ಚಿತ್ರದುರ್ಗದಲ್ಲಿ ಕಂಪನಿಯ ಕೇಂದ್ರ ಆರಂಭಿಸಲಾಗುವುದು. ರೈತರು ಸ್ವ ಇಚ್ಛೆಯಿಂದ ಬೇರೆಡೆ ಕೂಡ ಬೆಳೆ ಮಾರಾಟಕ್ಕೂ ಅವಕಾಶವಿದೆ ಎಂದರು.
ಯೋಜನೆ ಚಾಲನೆಗಾಗಿ ಸದ್ಯದಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಸಮಾರಂಭ ಏರ್ಪಡಿಸಲಾಗುವುದು. ಸಚಿವರಾದ ಎಸ್. ಎಸ್.ಮಲ್ಲಿಕಾರ್ಜುನ್, ಡಿ.ಸುಧಾಕರ್, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಎಐಸಿ ಚೇರ್ಮನ್ ಬಿ.ಎಂ.ಫಾರೂಕ್ ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಸದ್ಯದಲ್ಲೇ ದಿನಾಂಕ ತಿಳಿಸುವುದಾಗಿ ಹೇಳಿದರು.ಎಐಸಿ ಟೀಮ್‌ಲೀಡರ್ ಎಂ.ಚಂದ್ರಶೇಖರ್ ಇದ್ದರು.