ಚಿತ್ರದುರ್ಗ: ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹಿಂದಿನಿಂದಲೂ ಮಾಜಿ ಶಾಸಕಿ ಪೂರ್ಣಿಮಾಶ್ರೀನಿವಾಸ್ ಹಾಗೂ ಅವರ ಪತಿ ಎಂಎಲ್‌ಸಿ ಡಿ.ಟಿ.ಶ್ರೀನಿವಾಸ್ ನೆರವಾಗುತ್ತಿದ್ದಾರೆ ಎಂದು ಶ್ರೀ ಬಸವ ಮೇದಾರ ಕೇತೇಶ್ವರ ಸ್ವಾಮೀಜಿ ಹೇಳಿದರು. 8ರಿಂದ 10ನೇ ತರ ಗತಿವರೆಗಿನ 150 ವಿದ್ಯಾರ್ಥಿಗಳಿಗೆ ನಗರದ ಹೊರ ವಲಯ ಶ್ರೀ ಮೇದಾರ ಕೇತೇಶ್ವರ ಮಠದಲ್ಲಿ ಬುಧವಾರ ಏರ್ಪಡಿಸಿದ್ದ ಉಚಿತ ಸಮ ವಸ್ತ್ರ ವಿತರಣೆ ಕಾರ‌್ಯಕ್ರಮ ಸಾನಿಧ್ಯವಹಿಸಿ ಮಾತನಾಡಿದ ಅವರು,ಪೂರ್ಣಿಮಾಶ್ರೀನಿವಾಸ್ ಅವರು ಮಠದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರ ವಾಗುತ್ತಿದ್ದಾರೆ. ದಂಪತಿಗೆ ಶ್ರೀಮಠದೊಂದಿಗೆ ಅವಿನಾಭಾವ ಒಡನಾಟವಿದೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸರ್ಕಾರದೊಂದಿಗೆ ದಾನಿಗಳು ಕೈ ಜೋಡಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಲೇಖಕ ಎಚ್.ಆನಂದ್‌ಕುಮಾರ್ ಅವರು ಮಾತನಾಡಿ,ಮೇದಾರ ಬುಡಕಟ್ಟು ಸಮುದಾಯ ಅತ್ಯಂತ ಕಡು ಬಡತನದಲ್ಲಿದ್ದು, ಶಿಕ್ಷ ಣದ ಮೂಲಕ ಬದುಕನ್ನು ಹಸನು ಮಾಡಿಕೊಳ್ಳಬೇಕು.ಬುದ್ದ,ಬಸವ, ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು. ಚಿತ್ರದುರ್ಗದ ಶ್ರೀ ಕಣಿವೆ ಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿಬೆಳಗಟ್ಟ,ಪೊಲೀಸ್ ವೃತ್ತ ನಿರೀಕ್ಷಕ ತಿ ಪ್ಪೇಸ್ವಾಮಿ,ನಗರಸಭೆ ಮಾಜಿ ಅಧ್ಯಕ್ಷ ಎಚ್.ಮಂಜಪ್ಪ, ವೇಮನರೆಡ್ಡಿ ಮತ್ತಿತರರು ಇದ್ದರು.