ಜಿಲ್ಲೆ

ದಾದಿಯರ ಸೇವೆ ಆದರಣೀಯ

ಸುಭಾಸ ಹೆಗಡೆ ಧೂಪದಹೊಂಡ

ಹಳಿಯಾಳ: ತಮ್ಮ ಬದುಕನ್ನು ಪಣಕ್ಕಿಟ್ಟು ರೋಗಿಗಳ ಶುಶ್ರೊಷೆಯಲ್ಲಿ ತೊಡಗಿರುವ ದಾದಿಯರು ಸೇವೆ ಪವಿತ್ರ, ಪೂಜ್ಯ ಆದರಣೀಯವಾಗಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.

ಬೆಂಗಳೂರಿನಿಂದ ಮಂಗಳವಾರ ಮಧ್ಯಾಹ್ನ ಆಗಮಿಸಿದ ಅವರು ಇಲ್ಲಿಯ ತಾಲೂಕು ಆಸ್ಪತ್ರೆಯಲ್ಲಿ ಕೋವಿಡ್-19 ಪ್ರಾಥಮಿಕ ಚಿಕಿತ್ಸೆಗೊಳಗಾದ ನಂತರ ವೈದ್ಯರು ಮತ್ತು ದಾದಿಯರ ಸೇವೆಯನ್ನು ಅಭಿನಂದಿಸಿದರು.

ತಾಲೂಕು ವೈದ್ಯಾಧಿಕಾರಿ ಡಾ. ರಮೇಶ ಕದಂ, ಡಾ. ಜಿ. ಆಚಾರಿ, ವಿಆರ್​ಡಿ ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು, ರುಡಸೆಟಿ ಸಂಯೋಜಕ ವಿನಾಯಕ ಚವ್ಹಾಣ, ದೇಶಪಾಂಡೆ ಭವನದ ಸಂಪರ್ಕ ಅಧಿಕಾರಿ ಎಸ್.ಜಿ. ಮಾನಗೆ ಇತರರು ಇದ್ದರು.

ಗೃಹರಕ್ಷಕ ದಳ ಸಿಬ್ಬಂದಿಗೆ ಕಿಟ್ ವಿತರಣೆ: ಇಲ್ಲಿಯ ಮಿನಿವಿಧಾನ ಸೌಧದಲ್ಲಿ ಮಂಗಳವಾರ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಗೃಹರಕ್ಷಕ ದಳದವರಿಗೆ, ಬ್ಯೂಟಿ ಪಾರ್ಲರ್ ಸಿಬ್ಬಂದಿಗೆ ಅಗತ್ಯ ದಿನಸಿ ಕಿಟ್​ಗಳನ್ನು ಶಾಸಕ ಆರ್.ವಿ. ದೇಶಪಾಂಡೆ ವಿತರಿಸಿದರು.

ಈ ವೇಳೆ ಮಾತನಾಡಿದ ಅವರು, ಮುಂಬರುವ ಎಸ್​ಎಸ್​ಎಲ್​ಸಿ ಪರೀಕ್ಷೆಯನ್ನು ಬರೆಯಲಿರುವ ಪರೀಕ್ಷಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಹಳಿಯಾಳ, ದಾಂಡೇಲಿ ಮತ್ತು ಜೊಯಿಡಾ ತಾಲೂಕಿನ ಎಸ್​ಎಸ್​ಎಲ್​ಸಿ ಮಕ್ಕಳಿಗೆ ಮಾಸ್ಕ್​ಗಳನ್ನು ವಿತರಿಸಲಾಗುವುದು ಎಂದರು.

ಜಿ.ಪಂ. ಉಪಾಧ್ಯಕ್ಷ ಸಂತೋಷ ರೇಣಕೆ, ತಾ.ಪಂ. ಅಧ್ಯಕ್ಷೆ ರೀಟಾ ಸಿದ್ದಿ ಇತರರು ಉಪಸ್ಥಿತರಿದ್ದರು. ಜಿ.ಪಂ. ಉಪಾಧ್ಯಕ್ಷ ಸಂತೋಷ ರೇಣಕೆ, ತಾ.ಪಂ. ಅಧ್ಯಕ್ಷೆ ರೀಟಾ ಸಿದ್ದಿ ಇದ್ದರು.