ಮಂಗಳೂರು: ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಬರೆಯುವ ಉದ್ದೇಶದಿಂದ ಬಂಟ್ವಾಳದ ಶಿಕ್ಷಕ ನಾಗರಾಜ ಖಾರ್ವಿ ಅವರು ಕಾಲಿಗೆ ಸರಪಳಿ ಬಿಗಿದು ಬೀಗ ಹಾಕಿ ಪದ್ಮಾಸನ ಭಂಗಿಯಲ್ಲಿ ಈಜಿ ಸಾಧನೆ ಮಾಡಿದ್ದಾರೆ.
ಶುಕ್ರವಾರ ಬೆಳಗ್ಗೆ ಮಂಗಳೂರು ತಣ್ಣೀರುಬಾವಿ ಬೀಚ್‌ನಲ್ಲಿ ಈ ಸಾಹಸ ಪ್ರದರ್ಶನ ಮಾಡಿದ್ದಾರೆ. 25:16:63 ನಿಮಿಷದಲ್ಲಿ 1 ಕಿಮೀ ಈಜಿದ್ದಾರೆ. ಇದರ ಸಂಪೂರ್ಣ ವೀಡಿಯೋ ರೆಕಾರ್ಡ್ ಮಾಡಲಾಗಿದ್ದು, ಇಂಡಿಯಾ ಬುಕ್ ಸಂಸ್ಥೆಗೆ ಕಳುಹಿಸಲಾಗುತ್ತದೆ. ಜ್ಯೂರಿಗಳು ಪರಿಶೀಲನೆ ನಡೆಸಿ ದಾಖಲೆಯನ್ನು ದೃಢಪಡಿಸಲಿದ್ದಾರೆ.