ಮುಳ್ಳುಸೋಗೆ ಗ್ರಾಮ ಪಂಚಾಯಿತಿಯ ದಾಖಲೆಗಳನ್ನು ಪಿಡಿಒ ಸುಮೇಶ್ ಪುರಸಭೆ ಮುಖ್ಯಾಧಿಕಾರಿ ಶಿವಪ್ಪ ನಾಯಕ್ ಅವರಿಗೆ ಹಸ್ತಾಂತರಿಸಿದರು. ರವೀಶ್, ಜಯಣ್ಣ ಇತರರು ಇದ್ದರು. 
ಜಿಲ್ಲೆ

ದಾಖಲೆ ಹಸ್ತಾಂತರಿಸಿದ ಮುಳ್ಳುಸೋಗೆ ಪಿಡಿಒ

ಕುಶಾಲನಗರ: ಸೋಮವಾರಪೇಟೆ ತಾಲೂಕು ಪಂಚಾಯಿತಿ ಇಒ ಜಯಣ್ಣ ಅವರ ಸೂಚನೆಯಂತೆ ಸೋಮವಾರ ಮುಳ್ಳುಸೋಗೆ ಗ್ರಾಮ ಪಂಚಾಯಿತಿಯ ದಾಖಲೆಗಳನ್ನು ಪಿಡಿಒ ಸುಮೇಶ್ ಪುರಸಭೆ ಮುಖ್ಯಾಧಿಕಾರಿ ಶಿವಪ್ಪ ನಾಯಕ್ ಅವರಿಗೆ ಹಸ್ತಾಂತರಿಸಿದರು.

1993ರಲ್ಲಿ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಅನುಷ್ಠಾನಕ್ಕೆ ಬಂದಿದ್ದು, ಅಲ್ಲಿಂದ ಈವರೆಗೆ ಇದ್ದ ಸರ್ಕಾರಿ ಸ್ವತ್ತು, ದಾಖಲೆಗಳು, ಬ್ಯಾಂಕ್ ಖಾತೆಗಳು, ಗ್ರಾಪಂ ನೌಕರರು ಸೇರಿದಂತೆ ಎಲ್ಲ ರೀತಿಯ ಆಡಳಿತವನ್ನು ಸಂಪೂರ್ಣವಾಗಿ ಪುರಸಭೆ ಸುಪರ್ದಿಗೆ ನೀಡಲಾಯಿತು ಎಂದು ಪಿಡಿಒ ಸುಮೇಶ್ ತಿಳಿಸಿದರು.

ಪಟ್ಟಣ ಪಂಚಾಯಿತಿ ಮತ್ತು ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಸೇರಿದಂತೆ ಕುಶಾಲನಗರವನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸಿ ಇತ್ತೀಚೆಗೆ ಸರ್ಕಾರ ಘೋಷಿಸಿತ್ತು. ಸೋಮವಾರಪೇಟೆ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ರವೀಶ್, ಕುಶಾಲನಗರ ಪುರಸಭೆ ಸಿಬ್ಬಂದಿ, ಮುಳ್ಳುಸೋಗೆ ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು.