ಬಾಗಲಕೋಟೆ: ಹುನಗುಂದ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಗುಗ್ಗಲಮರಿ, ಧನ್ನೂರ ಚೆಕ್‌ಪೋಸ್ಟ ಸೇರಿದಂತೆ ಪ್ಲಾಯಿಂಗ್ ಸ್ಕ್ಯಾಕ್ ತಂಡವು ದಾಖಲೆ ಇಲ್ಲದ ಒಟ್ಟು ೩೫.೪೮ ಲಕ್ಷ ನಗದು ಹಣವನ್ನು ವಶಕ್ಕೆ ಪಡೆದುಕೊಂಡಿದೆ.
ಗುಗ್ಗಲಮರಿ ಚೆಕ್‌ಪೋಸ್ಟನಲ್ಲಿ ಮಾರ್ಚ ೨೯ ರಂದು ರಾತ್ರಿ ಸಮಯದಲ್ಲಿ ತಪಾಸಣೆ ವೇಳೆ ೨೯.೪೫ ಲಕ್ಷ ರೂ, ಧನ್ನೂರ ಚೆಕ್‌ಪೋಸ್ಟನಲ್ಲಿ ೩.೨೩ ಲಕ್ಷ ರೂ ಹಾಗೂ ಪ್ಲಾಯಿಂಗ್ ಸ್ಕ್ವಾಡ ತಂಡದಿಂದ ೨.೭೯ ಲಕ್ಷ ರೂ. ಸೇರಿ ಒಟ್ಟು ೩೫.೪೮ ಲಕ್ಷ ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ. ಸದರಿ ಹಣವನ್ನು ಖಜಾನೆಗೆ ಜಮೆ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ತಿಳಿಸಿದ್ದಾರೆ.
ಇನ್ನು ಲಕ್ಷಾನಟ್ಟಿ ಚೆಕ್‌ಪೋಸ್ಟನಲ್ಲಿ ೩.೪೪ ಲಕ್ಷ ರೂ, ಅಮೀನಗಡ ಜೆ.ಕೆ.ಲಾಡ್ಜನಲ್ಲಿ ಮಾರ್ಚ ೨೯ ರಂದು ರಾತ್ರಿ ಪ್ಲಾಯಿಂಗ್ ಸ್ಕ್ವಾಡ ತಂಡದ ಅಧಿಕಾರಿ ಅರುಣ ಪಾಟೀಲ ತಪಾಸನೆ ಮಾಡುತ್ತಿರುವ ವೇಳೆ ೧ ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಮತಗಿ ಚೆಕ್‌ಪೋಸ್ಟನಲ್ಲಿ ಸ್ತ್ಯಾಟಿಕ್ ಸರ್ವೆಲೆನ್ಸ್ ತಂಡದ ಅಧಿಕಾರಿ ಎಂ.ಎಸ್.ಹಾಲವರ ತಪಾಸಣೆ ವೇಳೆ ದಾಖಲೆ ಇಲ್ಲದ ೫೯ ಸಾವಿರ ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.