ದಾಂಡೇಲಿ: ನಗರದಲ್ಲಿ ಕಂಡಕಂಡಲ್ಲಿ ನಿಲ್ಲಿಸಲಾಗುತ್ತಿದ್ದ ಉಪಯೋಗಕ್ಕೆ ಬಾರದ ಗುಜರಿ ವಾಹನಗಳನ್ನು ನಗರಸಭೆ ಜಪ್ತಿ ಮಾಡಿದೆ.ವಾಹನ ಮಾಲೀಕರಿಗೆ ತೆರವು ಗೊಳಿಸುವ ಕುರಿತು ನೋಟಿಸ್ ಜಾರಿ ಮಾಡಲಾಗಿತ್ತು. ನೋಟಿಸ್ಗೆ ಸ್ಪಂದಿಸದ ಮಾಲೀಕರ ವಾಹನಗಳನ್ನು ಪಟೇಲನಗರದ ಪಂಪ್ಹೌಸ್ ಆವರಣಕ್ಕೆ ಸ್ಥಳಾಂತರ ಮಾಡಿದೆ. ಶುಕ್ರವಾರ 1 ಟ್ರ್ಯಾಕ್ಟರ್ ಹಾಗೂ 2 ಟಾಟಾ ಎಸ್ ಗುಜರಿ ವಾಹನಗಳನ್ನು ನಗರಸಭೆ ವಶಪಡಿಸಿಕೊಂಡಿದೆ.