ಹೊಸಪೇಟೆ: ದಸರಾ ಹಬ್ಬದ ನಿಮಿತ್ತ ಬೆಂಗಳೂರಿನಿAದ ನಗರಕ್ಕೆ ಸೆ.26ರಿಂದ ವಿಶೇಷ ವಿಶೇಷ ರೈಲು ಸಂಚಾರ ಆರಂಭ ಆಗಲಿದೆ ಎಂದು ವಿಜಯನಗರ ರೈಲ್ವೆ ಸಲಹಾ ಸಮಿತಿ ಅಧ್ಯಕ್ಷ ಯಮುನೇಶ್ ಹಾಗೂ ಕಾರ್ಯದರ್ಶಿ ಕುಡುತಿನಿ ಮಹೇಶ್ ಪ್ರಕಟಣೆಯಲ್ಲಿ ತಿಳಿಸಿದರು.
ದಸರಾ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಜನದಟ್ಟಣೆ ಗಮನಿಸಿ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳ ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೇ ವಲಯದಿಂದ ಬೆಂಗಳೂರಿನ ವಿಶ್ವೇಶ್ವರಯ್ಯ ರೈಲ್ವೇ ನಿಲ್ದಾಣ ಹಾಗೂ ನಗರದ ನಡುವೆ ಹೆಚ್ಚುವರಿಯಾಗಿ ಹಬ್ಬದ ವಿಶೇಷ ರೈಲು ಆರಂಭಿಸಿದೆ.
ರೈಲು ಸಂಖ್ಯೆ 06215/06216 ಸೆ.26 ಹಾಗೂ 28 ರ ರಾತ್ರಿ 07ಕ್ಕೆ ಬೆಂಗಳೂರಿನ ವಿಶ್ವೇಶ್ವರಯ್ಯ ನಿಲ್ದಾಣದಿಂದ ನಿರ್ಗಮಿಸಿ ತುಮಕೂರು, ಅರಸಿಕೆರೆ, ರಾಯದುರ್ಗ, ಬಳ್ಳಾರಿ ಕಂಟೋನ್‌ಮೆAಟ್ ಮಾರ್ಗವಾಗಿ ಮರುದಿನ ಬೆಳಿಗ್ಗೆ 4.15ಕ್ಕೆ ನಗರಕ್ಕೆ ತಲುಪಲಿದೆ. ಸೆ.27 ಹಾಗೂ 29 ರಂದು ನಗರದಿಂದ ರಾತ್ರಿ 8.45ಕ್ಕೆ ನಿರ್ಗಮಿಸಿ ಅದೇ ಮಾರ್ಗವಾಗಿ ಮರುದಿನ ಬೆಳಿಗ್ಗೆ 8.10ಕ್ಕೆ ವಿಶ್ವೇಶ್ವರಯ್ಯ ರೈಲ್ವೇ ನಿಲ್ದಾಣ ತಲುಪಲಿದೆ. ಈ ರೈಲು 4 ಎಸಿ ಕೋಚ್, 10 ಸ್ಲೀಪರ್ ಕ್ಲಾಸ್, 5 ಸಾಮಾನ್ಯ ದರ್ಜೆಯ ಕೋಚ್‌ಗಳನ್ನು ಹೊಂದಿದೆ. ಬಸ್‌ಗಳಲ್ಲಿ ದುಪಟ್ಟು ಹಣ ವಸೂಲಿ ಮಾಡಲಾಗುತ್ತಿದೆ. ಎರಡು ಬಾರಿ ವಿಶೇಷ ರೈಲು ಸಂಚಾರದಿAದ ಬೆಂಗಳೂರು ಸೇರಿ ಇತರೆ ಕಡೆ ಕೆಲಸ ಮಾಡುವ ವಿಜಯನಗರ ಹಾಗೂ ಬಳ್ಳಾರಿ ಉದ್ಯೋಗಿಗಳಿಗೆ ಹೆಚ್ಚಿನ ಅನುಕೂಲ ಆಗಲಿದೆ.
ದಸರಾ ಹಬ್ಬದ ವಿಶೇಷ ರೈಲು ಆರಂಭ ಸಂಸದ ಈ.ತುಕಾರಾಂ ಹಾಗೂ ನೈರುತ್ಯ ರೈಲ್ವೇ ವಲಯ ಬಳಕೆದಾರರ ಸಲಹಾ ಸಮಿತಿ ಸದಸ್ಯ ಬಾಬುಲಾಲ್ ಜಿ ಜೈನ್ ನೇತೃತ್ವದಲ್ಲಿ ನೈಋತ್ಯ ರೈಲ್ವೇ ವಲಯದ ಪ್ರಧಾನ ವ್ಯವಸ್ಥಾಪಕರಿಗೆ ಮನವಿ ಮಾಡಲಾಗಿತ್ತು. ಅದೇ ರೀತಿ ಮುಂಬರುವ ದೀಪಾವಳಿ ಹಬ್ಬದ ಸಂದರ್ಭದಲ್ಲೂ ಬಳ್ಳಾರಿ, ವಿಜಯನಗರ, ಮತ್ತು ಕೊಪ್ಪಳ ಜಿಲ್ಲೆ ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ರೈಲು ಆರಂಭಿಸಬೇಕು ಎಂದು ಒತ್ತಾಯಿಸಿದರು.
============