ದೋರನಹಳ್ಳಿ: ಪ್ರತಿ ವರ್ಷದ ಪದ್ಧತಿಯಂತೆ ಈ ವರ್ಷವೂ ದಸರಾ ಆಚರಿಸೋಣ. ಆದರೆ ಸಕಾಲಕ್ಕೆ ಮಳೆ ಬಾರದೆ ರೈತರು ಸಂಕಷ್ಟದಲ್ಲಿದ್ದು ದಸರಾ ಉತ್ಸವವನ್ನು ಸರಳವಾಗಿ ಆಚರಣೆ ಮಾಡೋಣ ಎಂದು ಶ್ರೀ ಶಾಂಭವಿಮಾತಾ ಚಿಕ್ಕಮಠದ ಪೀಠಾಧಿಪತಿ ಶ್ರೀ ಶಿವಲಿಂಗ ರಾಜೇಂದ್ರ ಶಿವಾಚಾರ್ಯರು ತಿಳಿಸಿದರು.
ಗ್ರಾಮದ ಶಾಂಭವಿಮಾತಾ ಚಿಕ್ಕಮಠದಲ್ಲಿ ದಸರಾ ಉತ್ಸವ ನಿಮಿತ್ತ ಭಾನುವಾರ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ದಸರಾ ನಮ್ಮ ದೇಶದ ಬಹು ಪ್ರಮುಖವಾದ ಉತ್ಸವವಾಗಿದೆ. ಈವರೆಗೆ ದೋರನಹಳ್ಳಿ ಸೇರಿ ಸುತ್ತಮುತ್ತಲಿನ ಶ್ರೀಮಠದ ಭಕ್ತರು, ಜನರು, ರೈತರು ತನು, ಮನ ಮತ್ತು ಧನ ಸಹಕಾರದಿಂದ ಅದ್ದೂರಿಯಾಗಿ ಆಚರಿಸುತ್ತಾ ಬರಲಾಗಿದೆ. ಆದರೆ ಈ ಬಾರಿ ರಾಜ್ಯದಲ್ಲಿ ಸಕಾಲಕ್ಕೆ ಮುಂಗಾರು ಆರಂಭಿಕ ಮಳೆ ಬಾರದ ಕಾರಣ ರೈತರು ತೊಂದರೆಯಲ್ಲಿದ್ದಾರೆ. ಅಲ್ಲದೆ ಈಗ ವಾಯುಭಾರ ಕುಸಿತದಿಂದ ಅತಿಯಾದ ಮಳೆಯಿಂದ ತೇವಾಂಶ ಹೆಚ್ಚಾಗಿ ಬೆಳೆಗಳು ಹಾಳಾಗಿವೆ. ಶ್ರೀಮಠದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ರೈತರೇ ಆಗಿದ್ದರಿಂದ ಅವರಿಗೆ ಹೊರೆಯಾಗದಂತೆ ಅವರ ಭಕ್ತಿಗನುಸಾರ ಕೊಡುವ ದೇಣಿಗೆ ಮಾತ್ರ ಸ್ವೀಕರಿಸಿ ಉತ್ಸವ ಆಚರಿಸೋಣ ಎಂದರು.
ಈ ವರ್ಷವೂ ಕೂಡ ವಿವಿಧ ಮಠಾಧೀಶರು, ಜನಪ್ರತಿನಿಧಿಗಳು, ಸಾಹಿತಿಗಳನ್ನು ಆಹ್ವಾನಿಸಲಾಗುತ್ತದೆ. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಹಾಸ್ಯ ಸಂಜೆ, ಧರ್ಮಸಭೆ, ಮುತ್ತೆÊದೆಯರಿಗೆ ಉಡಿ ತುಂಬುವ ಕರ‍್ಯಕ್ರಮ, ಮಹಾಚಂಡಿಕಾಯಾಗ, ಹೋಮ, ಹವನ, ಅಭಿಷೇಕ, ಸಹಸ್ರ ಬಿಲ್ವಾರ್ಚನೆ ಸೇರಿ ಇತರೆ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.
ಈ ವೇಳೆ ಡಾ.ವಿಜಯಾನಂದ ಹಿರೇಮಠ, ಗಣಪತರಾವ ಜೋಳದ, ನಿಂಗಣ್ಣಗೌಡ ಪೊಲೀಸ್ ಪಾಟೀಲ್, ವೀರಸಂಗಣ್ಣ ದೇಸಾಯಿ, ಈಶ್ವರಪ್ಪ ಲಕ್ಕಶೆಟ್ಟಿ, ಪ್ರಭುರಾಯ ಮಲಗೊಂಡ, ಮಲ್ಲಿನಾಥ ಮಲಗೊಂಡ, ಅಬ್ದುಲ್ ಕರಿಂ ಮಠ್, ಗೊಲ್ಲಾಳಪ್ಪ ಗೋಲಗೇರಿ, ವೀರೇಂದ್ರ ಹುಡೇದ, ಯಮನಪ್ಪ ಪೂಜಾರಿ, ಜಟ್ಟೆಪ್ಪ ಬಿರಾಳ, ಮೌನೇಶ ಕಂಚಗಾರ, ಮಂಜುನಾಥ ಕಂಚಗಾರ, ನಿಂಗಣ್ಣ ಮುರದೊಡ್ಡಿ, ಖಂಡಪ್ಪ ಗುಂಟನೂರ, ಯಮನಪ್ಪ ಹುಡೇದ್, ಮಾನಪ್ಪ ಹುಲಸೂರ, ಲಾಲೂ ಗ್ಯಾರೇಜ್, ಬಾಲಪ್ಪ ಕಶೇಟ್ಟಿ, ತಿಪ್ಪೋಜಿ ಸುಗಂಧಿ, ಮಹಮ್ಮದ ಮೊಸಬಾಯಿ, ಬಸವರಾಜ ಕಂಬಾರ, ಶರಣಪ್ಪ ಹೂಗಾರ, ಪರಮಾನಂದ ಹೂಗಾರ, ಮಾನಪ್ಪ ಮೂಲಿ, ಸುರೇಶ ಪಸ್ಪೂಲ್, ಅಬ್ದುಲ್ ಬಾಷಾ ಜೇವರ್ಗಿ, ಮೌನೇಶ ಕೊಂತಲ್ ಇತರರಿದ್ದರು.