ಜಿಲ್ಲೆ

ದಸರಾ ವೆಬ್‌ಸೈಟ್ ಅನಾವರಣ

ಮಂಜುನಾಥ ತಿಮ್ಮಯ್ಯ

ಮೈಸೂರು: ಪ್ರಸ್ತಕ ಸಾಲಿನ ಮೈಸೂರು ದಸರಾ ಮಹೋತ್ಸವದ ವೆಬ್‌ಸೈಟ್ ಅನ್ನು ಶುಕ್ರವಾರ ಅನಾವರಣಗೊಳಿಸಲಾಗಿದೆ.

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಮಾಹಿತಿಗಳನ್ನು ಸಾರ್ವಜನಿಕರಿಗೆ ಒದಗಿಸುವ ಉದ್ದೇಶಕ್ಕಾಗಿ ಇದನ್ನು ದಸರಾ ಕಾರ್ಯಕಾರಿ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಿದ್ದಾರೆ.

ಮೈಸೂರು ದಸರಾ ಕುರಿತು ಅಧಿಕೃತ ಜಾಲತಾಣ  https://mysoredasara.gov.in ಅನ್ನು ಸಾರ್ವಜನಿಕರು ವೀಕ್ಷಿಸಬಹುದು.

ವೆಬ್‌ಸೈಟ್‌ನಲ್ಲಿ ದಸರಾ ಕಾರ್ಯಕಾರಿ ಸಮಿತಿ, ದಸರಾ ಉಪ ಸಮಿತಿಗಳು, ದಸರಾ ಕಾರ್ಯಕ್ರಮಗಳ ವಿವರ ಮತ್ತು ಜಂಬೂ ಸವಾರಿ, ಪಂಜಿನ ಕವಾಯತು,

ಕಾರ್ಯಕ್ರಮಗಳ ಟಿಕೆಟ್ ಖರೀದಿಗಾಗಿ ಸಾರ್ವಜನಿಕರು ಅಧಿಕೃತ ದಸರಾ ಜಾಲತಾಣಕ್ಕೆ ಭೇಟಿ ನೀಡಿ ಸದುಪಯೋಗ ಪಡೆದುಕೊಳ್ಳುವಂತೆ ದಸರಾ ವಿಶೇಷಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ತಿಳಿಸಿದ್ದಾರೆ.