ಜಿಲ್ಲೆ

ದಸರಾ ಜಂಬೂಸವಾರಿ ಸ್ತಬ್ಧಚಿತ್ರಗಳಿಗೆ ಬಹುಮಾನ ಪ್ರಕಟ

ಮೈಸೂರು: ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಉತ್ತಮ ಸ್ತಬ್ಧಚಿತ್ರಗಳಿಗೆ ಬಹುಮಾನ ಪ್ರಕಟಿಸಲಾಗಿದೆ. ಫಲಿತಾಂಶವನ್ನು ಶನಿವಾರ ಬಿಡುಗಡೆ ಮಾಡಲಾಗಿದೆ.

ರಾಜ್ಯದ 4 ಕಂದಾಯ ವಿಭಾಗ ಮತ್ತು ವಿವಿಧ ನಿಗಮಗಳ ವಿಭಾಗದಲ್ಲಿ ಪ್ರತ್ಯೇಕವಾಗಿ ಪ್ರಶಸ್ತಿ ನೀಡಲಾಗಿದೆ. ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಅ.2ರಂದು ನಡೆದ ಜಂಬೂಸವಾರಿ ಮೆರವಣಿಗೆಯಲ್ಲಿ 62 ಸ್ತಬ್ಧಚಿತ್ರಗಳು ಭಾಗವಹಿಸಿದ್ದವು.

ಬೆಂಗಳೂರು ವಿಭಾಗ:

ಚಿತ್ರದುರ್ಗದ ರಾಜ ವೀರಮದಕರಿ ನಾಯಕ ಸ್ತಬ್ಧಚಿತ್ರದ ಮಾದರಿಗೆ ಪ್ರಥಮ, ಬೆಂಗಳೂರಿನ(ನಗರ) ಬ್ರಾೃಂಡ್ ಬೆಂಗಳೂರಿನತ್ತ ದಿಟ್ಟ ಹೆಜ್ಜೆ ಸ್ತಬ್ಧಚಿತ್ರ ದ್ವಿತೀಯ, ತುಮಕೂರಿನ ನವ್ಯ ಮತ್ತು ಪ್ರಾಚೀನ ಶಿಲ್ಪಕಲಾ ಸಂಕೀರ್ಣ; ನಮ್ಮ ತುಮಕೂರು ಜಿಲ್ಲೆ ತೃತೀಯ ಸ್ಥಾನ ಪಡೆದಿದೆ.

ಕಲಬುರಗಿ ವಿಭಾಗ:

ಬೀದರ ಜಿಲ್ಲೆಯ ಬೀದರ ಕೋಟೆ ಸ್ತಬ್ಧಚಿತ್ರ ಪ್ರಥಮ, ಕೊಪ್ಪಳ ಜಿಲ್ಲೆಯ ಕಿನ್ನಾಳ ಕೋಟೆ ದ್ವಿತೀಯ, ವಿಜಯನಗರ ಜಿಲ್ಲೆಯ ‘ವಿಜಯನಗರ ಜಿಲ್ಲೆಯ ವೈಶಿಷ್ಟಗಳು’ ತೃತೀಯ ಸ್ಥಾನ ಗಿಟ್ಟಿಸಿಕೊಂಡಿದೆ.

ಬೆಳಗಾವಿ ವಿಭಾಗ:

ಗದಗ ಜಿಲ್ಲೆಯ ಜೋಡು ಕಳಸದ ಗುಡಿ ಸ್ತಬ್ಧಚಿತ್ರಕ್ಕೆ ಪ್ರಥಮ, ಧಾರವಾಡದ ರಾಷ್ಟ್ರಧ್ವಜ ತಯಾರಿಕಾ ಕೇಂದ್ರ ಗರಗ, ಕಲಘಟಗಿ ಬಣ್ಣದ ತೊಟ್ಟಿಲು ಮತ್ತು ನವಲಗುಂದ ಜಮಖಾನ ಟ್ರಾಬ್ಲೋಗೆ ದ್ವಿತೀಯ, ಬೆಳಗಾವಿಯ ಶ್ರೀ ಮಹಾಕಾಳಿ ಮಾಯಾಕ್ಕಾ ದೇವಿ ಪ್ರಗತಿಯತ್ತ ಸಾಗೋಣ ಮಾದರಿಗೆ ತೃತೀಯ ಸ್ಥಾನ ಬಂದಿದೆ.

ಮೈಸೂರು ವಿಭಾಗ:

ಚಾಮರಾಜನಗರ ಜಿಲ್ಲೆಯ ಪ್ರಕೃತಿಯ ಸೌಹಾರ್ದತೆಯೊಂದಿಗೆ ಪ್ರಗತಿಯತ್ತ ಸಾಗೋಣ ಸ್ತಬ್ಧಚಿತ್ರ ಪ್ರಥಮ, ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಬಿಂಬಿಸುವ ಕಲೆ ದೈವಾರಾಧನೆ-ಸಾಂಪ್ರದಾಯಿಕ ಕ್ರೀಡೆ ಸ್ತಬ್ಧಚಿತ್ರ ದ್ವಿತೀಯ, ಚಿಕ್ಕಮಗಳೂರು ಜಿಲ್ಲೆಯ ಜ್ಞಾನಿ ವಿಜ್ಞಾನಿಗಳ ನಾಡು ಸ್ತಬ್ಧಚಿತ್ರಕ್ಕೆ ತೃತೀಯ ಸ್ಥಾನ ದೊರೆತಿದೆ.

ಕೇಂದ್ರ, ರಾಜ್ಯ ಸರ್ಕಾರ ಮತ್ತು ವಿವಿಧ ನಿಗಮಗಳ ವಿಭಾಗ:

ಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್‌ನ(ಎಚ್‌ಎಎಲ್) ವಿಜಯ ರನ್‌ವೇ-ಭಾರತದ ಆಕಾಶಕ್ಕೆ ಎಚ್‌ಎಎಲ್‌ನ ಶಕ್ತಿ ಸ್ತಬ್ಧಚಿತ್ರಕ್ಕೆ ಪ್ರಥಮ, ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಡ್ರಗ್ಸ್‌ಮುಕ್ತ ಕ್ಯಾಂಪಸ್ ಅಭಿಯಾನದ ಸ್ತಬ್ಧಚಿತ್ರಕ್ಕೆ ದ್ವಿತೀಯ, ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣದ ಸುಂದರಿ ಸ್ವಚ್ಛ ಪರಿಸರ ಮಾದರಿ ತೃತೀಯ, ಪ್ರವಾಸೋದ್ಯಮ ಇಲಾಖೆಯ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟ ಸ್ತಬ್ಧಚಿತ್ರ ಮತ್ತು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಸ್ತಬ್ಧಚಿತ್ರಕ್ಕೆ ಸಮಧಾನಕರ ಬಹುಮಾನ ಲಭಿಸಿದೆ.