ಹುಕ್ಕೇರಿ: ಭಾವೈಕ್ಯಕ್ಕೆ ಹೆಸರಾದ ಹುಕ್ಕೇರಿ ಹಿರೇಮಠದ ದಸರಾ ಮಹೋತ್ಸವ ಈ ಬಾರಿಯೂ ಅದ್ದೂರಿಯಾಗಿ ಆಚರಿಸೋಣ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.
ಪಟ್ಟಣದ ಗುರುಶಾಂತೇಶ್ವರ ಹಿರೇಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ದಸರಾ ಮಹೋತ್ಸವ 2023ರ ೂರ್ವಭಾವಿ ಸಭೆ ಅಧ್ಯತೆ ವಹಿಸಿ ಅವರು ಮಾತನಾಡಿದರು. ಕಳೆದ ವರ್ಷ ಕರೊನಾ, ನೆರೆ ಪ್ರವಾಹ ಮತ್ತು ತಂದೆ ನಿಧನದಿಂದ ಹಿರೇಮಠದ ದಸರಾ ಮಹೋತ್ಸವ ಸರಳವಾಗಿ ಆಚರಿಸಲಾಗಿತ್ತು. ಆದರೆ, ಈ ಬಾರಿ ಹಿರೇಮಠದ ಸಂಪ್ರದಾಯದಂತೆ ರೇಣುಕ ಶ್ರೀ ಪ್ರಶಸ್ತಿ ವಿತರಣೆ, ಯುವ ದಸರಾ, ಮಹಿಳಾ ದಸರಾ, ಸಾಂಸತಿಕ ದಸರಾ, ರೈತ(ಕೃಷಿಕ) ದಸರಾ, ಮಕ್ಕಳ ದಸರೆ ನಿಮಿತ್ತ 9 ದಿನ ವಿವಿಧ ಸಾಂಸತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ದಸರಾ ಮಹೋತ್ಸವದಲ್ಲಿ ಹೆಸರಾಂತ ಮಠಾಧೀಶರು, ಉಪ ಮುಖ್ಯಮಂತ್ರಿ, ಸಚಿವರು, ಶಾಸಕರು, ಸಂಸದರು, ಜನಪ್ರತಿನಿಧಿಗಳು, ಸಾಹಿತಿಗಳು, ಕಲಾವಿದರು ಆಗಮಿಸಲಿದ್ದಾರೆ ಎಂದರು.
ಹಿರೇಮಠದ ಪೀಠಾಧ್ಯಕ್ಷ ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ, 30 ವರ್ಷಗಳಿಂದ ದಿ.ಉಮೇಶ ಕತ್ತಿ ಅಧ್ಯತೆಯಲ್ಲಿ ದಸರಾ ಮಹೋತ್ಸವ ನಡೆಯುತ್ತಿತ್ತು. ಈ ಬಾರಿ ನಿಖಿಲ ಕತ್ತಿ ಅಧ್ಯತೆ ವಹಿಸಿಕೊಂಡು ಮಹೋತ್ಸವದ ಯಶಸ್ಸಿಗಾಗಿ ಶ್ರಮಿಸುತ್ತಿದ್ದಾರೆ. ಸಾರ್ವನಿಕರು ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕರೆ ನೀಡಿದರು.
ಪುರಸಭೆ ಸದಸ್ಯ ರಾಜೇಶ ಮುನ್ನೋಳಿ, ಎಸ್.ಕೆ.ಪಬ್ಲಿಕ್ ಸ್ಕೂಲ್ ಚೇರ್ಮನ್ ಪಿಂಟು ಶೆಟ್ಟಿ, ನಿವೃತ್ತ ಶಿಕ ಶ್ರೀಶೆಲ ಸಂಬಾಳ, ಶಿವರಾಜ ನಾಯಿಕ, ತಮ್ಮಣ್ಣಗೌಡ ಪಾಟೀಲ, ನಿವೃತ್ತ ಉಪನ್ಯಾಸಕ ಪಿ.ಜಿ.ಕೊಣ್ಣೂರ, ಬಿ.ಎಸ್.ಮುನ್ನೋಳಿ, ಚನ್ನಪ್ಪ ಗಜಬರ, ಬಸವರಾಜ ನಾಯಿಕ, ಅಣ್ಣಯ್ಯ ಸಂಬಾಳ, ಕಾಡಗೌಡ ಪಾಟೀಲ, ಸುರೇಶ ಜಿನರಾಳಿ, ಅಶೋಕ ಪಾಟೀಲ ಇತರರಿದ್ದರು.