ಜಿಲ್ಲೆ

ದಸಂಸಗೆ ಪದಾಧಿಕಾರಿಗಳ ಆಯ್ಕೆ

ಗುಂಡ್ಲುಪೇಟೆ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪ್ರೊಫೆಸರ್ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮೈಸೂರು ವಿಭಾಗೀಯ ಸಂಚಾಲಕ ಡಿ.ಕೆ.ಅಂಕಯ್ಯ, ಜಿಲ್ಲಾ ಸಂಚಾಲಕ ಬೆಳ್ಳಿಯಪ್ಪ ನೇತೃತ್ವದಲ್ಲಿ ತಾಲೂಕು ಹಾಗೂ ಹೋಬಳಿ ಮಟ್ಟದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಜಿಲ್ಲಾ ಸಂಚಾಲಕ ಬೆಳ್ಳಿಯಪ್ಪ ಮಾತನಾಡಿ, ತಾಲೂಕಿನಲ್ಲಿ ಬಡವರ ನೊಂದವರ ಹಾಗೂ ದಲಿತರ ಧ್ವನಿಯಾಗಲಿದೆ. ತಾಲೂಕಿನ ಹಲವು ಭಾಗಗಳಲ್ಲಿ ಕುಂದು ಕೊರತೆಗಳಿದ್ದು ಅವುಗಳನ್ನು ಬಗೆಹರಿಸುವಲ್ಲಿ ನಮ್ಮ ಸಂಘಟನೆ ಶ್ರಮಿಸುತ್ತದೆ. ಆದ್ದರಿಂದ ಪ್ರತಿ ಹೋಬಳಿ ಮಟ್ಟದಲ್ಲಿ ನಮ್ಮ ಸಂಘಟನೆಯ ಘಟಕಗಳು ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸಲಹೆಗಾರರಾಗಿ ವಕೀಲ ಹಂಗಳ ರಾಜೇಶ್, ತಾಲೂಕು ಸಂಚಾಲಕ ನಾಗಮಲ್ಲು ಭೀಮನಬೀಡು, ಸಹ ಸಂಚಾಲಕರಾಗಿ ನಾರಾಯಣಸ್ವಾಮಿ, ಮಡಹಳ್ಳಿ ಸಂತೋಷ್, ರೇಚಯ್ಯ, ಸತ್ಯ, ಪ್ರಧಾನ ಕಾರ್ಯದರ್ಶಿಗಳಾಗಿ ಶಿವಕುಮಾರ್, ನಂಜಪ್ಪ, ಸಿದ್ದರಾಜು, ಖಜಾಂಚಿಯಾಗಿ ಶಿವಸ್ವಾಮಿ, ಸಹಕಾರ್ಯದರ್ಶಿ ಗೋಪಾಲ್, ಕಾನೂನು ಸಲಹೆಗಾರರಾಗಿ ಗಂಗಾಧರ್ ಅವರನ್ನು ಆಯ್ಕೆ ಮಾಡಲಾಯಿತು.