ಜಿಲ್ಲೆ

ದಶ ಕೋಟಿ ರಾಮ ಜಪಯಜ್ಞಕ್ಕೆ ಪೇಜಾವರ ಶ್ರೀ ಕರೆ

ಮೈಸೂರು: ಅಧಿಕ ಮಾಸದ ಅಂಗವಾಗಿ ಮಂಗಳವಾರದಿಂದ ಒಂದು ತಿಂಗಳ ಕಾಲ ನಾಡಿನಾದ್ಯಂತ ದಶ ಕೋಟಿ ರಾಮ ಜಪಯಜ್ಞಕ್ಕೆ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಕರೆ ನೀಡಿದ್ದಾರೆ.
ಈ ವರ್ಷ ಅಧಿಕಮಾಸ ಬಂದಿದ್ದು, ಶ್ರಾವಣ ಮಾಸವೇ ಬಂದಿರುವುದು ವಿಶೇಷ ಆಗಿದೆ. ಜು.18ರಿಂದ ಆಗಸ್ಟ್ 15ರ ವರೆಗೆ ಒಂದು ತಿಂಗಳ ಕಾಲ ಇರುವ ಅಧಿಕ ಶ್ರಾವಣ ಮಾಸದಲ್ಲಿ ದೇವತಾ ಪ್ರೀತ್ಯರ್ಥವಾಗಿ ಮಾಡುವ ಯಾವುದೇ ಸತ್ಕರ್ಮಗಳಿಗೆ ಅತ್ಯಧಿಕ ಫಲವೆಂದು ಶಾಸ್ತ್ರಗಳು ಹೇಳುತ್ತವೆ ಎಂದು ನಗರದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪುರುಷೋತ್ತಮ ಮಾಸವೆಂದೇ ಕರೆಯಲ್ಪಡುವ ಈ ಅಧಿಕ ಮಾಸದಲ್ಲಿ ನಾಡಿನಾದ್ಯಂತ ಅಯೋಧ್ಯಾಪತಿ ಶ್ರೀರಾಮನ ಕೃಪೆಗಾಗಿ, ಲೋಕ ಕ್ಷೇಮಕ್ಕಾಗಿ ಪ್ರಾರ್ಥಿಸಿ ದಶಕೋಟಿ ರಾಮ ಜಪಯಜ್ಞ ನಡೆಯಬೇಕು ಎನ್ನುವ ಆಶಯ ವ್ಯಕ್ತಪಡಿಸಿದ್ದಾರೆ.
ಪ್ರತಿಯೊಬ್ಬರೂ ಶ್ರೀರಾಮನಾಮ ಜಪ ಮಾಡುವುದಲ್ಲದೇ ಅದರ ಮಹತ್ವವನ್ನು ಕರಪತ್ರದ ಮೂಲಕ ಇತರರಿಗೂ ತಿಳಿಸಬೇಕು. ಒಂದು ತಿಂಗಳು ಪೂರ್ತಿ ಜಪ ಮಾಡಲು ಸಾಧ್ಯವಾಗದಿದ್ದರೆ ಕನಿಷ್ಠ ಮೂರರಿಂದ ಐದು ದಿನಗಳ ಮಾಡುವ ಕಾರ್ಯ ನಡೆಯಬೇಕು ಎಂದು ತಿಳಿಸಿದ್ದಾರೆ.