ಗುಳೇದಗುಡ್ಡ: ಮನುಷ್ಯ ಭಕ್ತಿಯಿಂದ ದೇವರನ್ನು ನಿತ್ಯ ಪೂಜಿಸಬೇಕು. ನಮ್ಮಲ್ಲಿರುವ ಕೆಟ್ಟ ಮನಸ್ಥಿತಿಗಳನ್ನು ತೊರೆದು ದೇವರನ್ನು ಭಕ್ತಿ ಭಾವದಿಂದ ಆರಾಧಿಸಿದಾಗ ಮಾತ್ರ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗಲು ಸಾಧ್ಯ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ಸಮೀಪದ ಸಬ್ಬಲಹುಣಸಿ ಗ್ರಾಮದ ಮಾರುತೇಶ್ವರ ಸದ್ಭಕ್ತ ಮಂಡಳಿಯಿಂದ ಹಮ್ಮಿಕೊಂಡಿದ್ದ ನೂತನ ಮಾರುತೇಶ್ವರ ದೇವಸ್ಥಾನದ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಬೇಕು, ಗ್ರಾಮಗಳಲ್ಲಿ ಧಾರ್ಮಿಕ ಚಟುವಟಿಕೆ ನಿರಂತರ ನಡೆಯಲಿ. ಗ್ರಾಮದ ಅಭಿವೃದ್ಧಿಗೆ ಯಾವುದೇ ಕೆಲಸ ಕಾರ್ಯವಿದ್ದರೂ ನಾನು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.
ಸಿಕ್ಕೇರಿಯಿಂದ ಮಾರುತೇಶ್ವರ ಮೂರ್ತಿ ಗ್ರಾಮಕ್ಕೆ ಆಗಮಿಸಿದ ಬಳಿಕ ರುದ್ರಾಭಿಷೇಕ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಅ್ನಸಂತರ್ಪಣೆ ನಡೆಯಿತು.
ಮರಡಿಮಠದ ಅಭಿನವ ಕಾಡಸಿದ್ಧೇಶ್ವರ ಮಹಾಸ್ವಾಮಿಗಳು, ಒಪ್ಪತ್ತೇಶ್ವರ ಮಠದ ಮಹಾಸ್ವಾಮಿಗಳು, ಹಂಸನೂರಿನ ಬಸವರಾಜೇಂದ್ರ ಮಹಾಸ್ವಾಮಿಗಳು, ಸಬ್ಬಲಹುಣಸಿಯ ಕಾಂತವೀರ ಮಹಾಸ್ವಾಮಿಗಳು, ಹಂಸನೂರಿನ ಬಸವರಾಜೇಂದ್ರ ಮಹಾಸ್ವಾಮಿಗಳು, ಬಸವರಾಜ ಸಾರಂಗಮಠ, ಬಸವಂತಪ್ಪ ಬಡಿಗೇರ, ದೇವಾನಂದ ಬನ್ನಿ ಶಾಸಿಗಳು ಸಾನ್ನಿಧ್ಯ ವಹಿಸಿದ್ದರು.
ಗ್ರಾಪಂ ಅಧ್ಯಕ್ಷ ರಾಮಣ್ಣ ವಾಲೀಕಾರ, ಉಪಾಧ್ಯಕ್ಷ ಯಲ್ಲಪ್ಪ ಹಿರಿಯಾಳ, ಸಿ.ಬಿ. ಹಿರೇಕುರುಬರ, ಪಕೀರಪ್ಪ ತಳವಾರ, ಹನುಮಂತ ವೈದ್ಯ, ಚನ್ನಪ್ಪ ಗೌಡರ, ಆಸಂಗೆಪ್ಪ ಬಂಡಿವಡ್ಡರ, ಗೋಪಾಲ ಜಕ್ಕಪ್ಪನವರ, ಭೀಮನಗೌಡ ಗೌಡರ, ಹನುಮಪ್ಪ ನಡಶೇಸಿ, ಭೀಮಪ್ಪ ನಡಶೇಸಿ, ಸಂಗಪ್ಪ ಶಿರಹಟ್ಟಿ ಇತರರಿದ್ದರು.