ಜಿಲ್ಲೆ

ದಲೈಲಾಮ ಶಾಂತಿ, ಸೌಹಾರ್ದತೆ ಸಂಕೇತ

ಲಲಾಟಾಕ್ಷ ಎಸ್

ಬೈಲುಕುಪ್ಪೆ: ಬೌದ್ಧ ಗುರು ದಲೈಲಾಮ ಅವರು ಶಾಂತಿ, ಸೌಹಾರ್ದತೆ ಸಂಕೇತವಾಗಿದ್ದಾರೆ ಎಂದು ರೇಷ್ಮೆ ಮತ್ತು ಪಶು ಸಂಗೋಪನೆ ಸಚಿವ ಕೆ.ವೆಂಕಟೇಶ್ ತಿಳಿಸಿದರು.

ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಟಿಡಿಎಲ್ ಕ್ಯಾಂಪ್‌ನ ಬೌದ್ಧ ಹಾಗೂ ಟಿಬೇಟಿಯನ್ ಸಮುದಾಯದವರು ಭಾನುವಾರ ಆಯೋಜಿಸಿದ್ದ ದಲೈ ಲಾಮಾ ಅವರ 90ನೇ ವರ್ಷದ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ದಲೈಲಾಮ ಅವರು ಶ್ರೇಷ್ಠ ಧಾರ್ಮಿಕ ನಾಯಕರು. ಅವರ ನಾಲ್ಕು ಪ್ರಮುಖ ಬದ್ಧತೆಗಳು ಮಾನವ ಮೌಲ್ಯಗಳು ಪ್ರಸಾರ ಧಾರ್ಮಿಕ ಸಾಮರ್ಥ್ಯ ಟಿಬೆಟ್ ಧರ್ಮ ಮತ್ತು ಸಾಂಸ್ಕೃತಿಯ ಸಂರಕ್ಷಣೆ ಹಾಗೂ ಭಾರತೀಯ ಪ್ರಾರ್ಥನೆ ದಾನಗಳ ಪುನರುತ್ಥಾನ ಎಂದು ಹೇಳಿದರು.

ಟಿಬೆಟ್ ಸಮುದಾಯವು ವಿಶ್ವದಲ್ಲಿ ಅತ್ಯುತ್ತಮ ಶರಣಾರ್ಥಿ ಸಮುದಾಯವೆಂದು ಗುರುತಿಸಲ್ಪಟ್ಟಿದೆ. ಇದು ದಲೈಲಾಮ ಕರುಣೆಯ ಶಾಸ್ತ್ರದ ಶಕ್ತಿ ಮತ್ತು ಮಾರ್ಗದರ್ಶನ ಪರವಾಗಿದೆ. ಚೀನಾ ಸರ್ಕಾರ ತಮ್ಮ ಸಹೋದರರನ್ನು ಅವರ ಧರ್ಮ ಆಚರಣೆಗೆ ಅವಕಾಶ ನೀಡದೆ ತಡೆಯುತ್ತಿದೆ. ಆದರೆ, ಭಕ್ತರ ಹೃದಯದಲ್ಲಿ ಗುರು, ಶಿಷ್ಯ ಸಂಬಂಧವು ಯಾವ ಒತ್ತಡಕ್ಕೂ ಶರಣಾಗುವುದಿಲ್ಲ ಎಂದು ನಾವು ಆಶಿಸುತ್ತೇವೆ. ಬೋಧನೆಗಳನ್ನು ಅನುಸರಿಸಿ ಪ್ರೀತಿ, ಏಕತೆಯಿಂದ ದೇಶದಲ್ಲಿ ಬಾಳೋಣ. ಮುಂದಿನ ಪೀಳಿಗೆಗೆ ಶಾಂತಿ ಸಂದೇಶವನ್ನು ಬಳುವಳಿ ನೀಡೋಣ ಎಂದರು.

ಮೈಮುಲ್ ನಿರ್ದೇಶಕ ಬಿ.ಎ.ಪ್ರಕಾಶ್, ಈರಯ್ಯ, ಜೆಪಿ ಅರಸ್, ಸಚಿನ್, ವಕೀಲರಾದ ಭಾಸ್ಕರ್, ದಿನೇಶ್, ನವಿಲೂರು ಚೆನ್ನಪ್ಪ, ವಲಯ ಅರಣ್ಯ ಅಧಿಕಾರಿ ಪದ್ಮಶ್ರೀ, ಜಯಚಂದ್ರ, ಕರ್ನಲ್ ಅಮಜಿತ್ ಸಿಂಗ್, ಟಿಡಿಎಲ್ ಸಂಸ್ಥೆ ಅಧಿಕಾರಿಗಳಾದ ಚಿಮಿ, ಗೋಲಿಕ್ ಜಂಗನೇರಿ ಇದ್ದರು.