ಶೃಂಗೇರಿ: ಸರ್ವರಿಗೂ ಸಮಬಾಳು-ಸಮಪಾಲು ಎಂಬ ಧ್ಯೇಯದಿಂದ ದಲಿತ ಸಂಘರ್ಷ ಸಮಿತಿ ಕಾರ್ಯನಿರ್ವಹಿಸುತ್ತಿದೆ. ನಾಲ್ಕು ಗೋಡೆಗಳ ನಡುವೆಗೆ ಶೋಷಿತ ವರ್ಗದವರ ಬದುಕನ್ನು ಸೀಮಿತಗೊಳಿಸದೆ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ರಾಜ್ಯ ದಲಿತ ಮಹಿಳಾ ಒಕ್ಕೂಟದ ಸಂಘಟನಾ ಸಂಚಾಲಕಿ ಎಂ.ವಿ.ಭವಾನಿ ತಿಳಿಸಿದರು.
ಮೆಣಸೆ ಗ್ರಾಪಂ ಕಲ್ಕಟ್ಟೆ ಗ್ರಾಮದಲ್ಲಿ ಮಂಗಳವಾರ ಸಂಘಟನೆಯ ನೂತನ ಗ್ರಾಮಶಾಖೆ ರಚನಾ ಸಭೆಯಲ್ಲಿ ಮಾತನಾಡಿ,
ಸಂಘಟನೆಗಳಲ್ಲಿ ಸಾಂಘಿಕ ಮನೋಭಾವ ಹಾಗೂ ಭಾವನಾತ್ಮಕ ಸಂಬಂಧಗಳು ಪ್ರಮುಖ ಪಾತ್ರ ವಹಿಸುತ್ತವೆ. ಸಂಘಟನೆಗಳು ನಿಂತ ನೀರಾಗದೆ ಸಮಾಜದ ಜತೆ ಬೆರೆತು ಸರ್ಕಾರದ ಸವಲತ್ತುಗಳನ್ನು ಪಡೆಯುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸಬೇಕು. ಆರ್ಥಿಕ ಸಬಲತೆ ಸ್ವಾಭಿಮಾನದ ಸಂಕೇತವಾಗಿದ್ದು, ಸಂತೃಪ್ತ ಬದುಕು ನಮ್ಮದಾಗಬೇಕು. ಈ ಉದ್ದೇಶದಿಂದ ನೂತನ ಶಾಖೆ ರಚಿಸಲಾಯಿತು ಎಂದರು.
ನಾಗೇಶ್(ಗ್ರಾಮಶಾಖಾ ಸಂಚಾಲಕ), ನವೀನ್, ಜೆ.ಅಣ್ಣಪ್ಪ (ಸಂಘಟನಾ ಸಂಚಾಲಕರು), ಪ್ರಕಾಶ್(ಕೋಶಾಧ್ಯಕ್ಷ), ರತ್ನಮ್ಮ(ಮಹಿಳಾ ಒಕ್ಕೂಟದ ಶಾಖಾ ಸಂಚಾಲಕಿ), ಲಕ್ಷ್ಮೀದೇವಿ, ಉಷಾ,ರೀತಾ (ಸಂಘಟನಾ ಸಂಚಾಲಕರು), ಧನಲಕ್ಷ್ಮೀ(ಕೋಶಾಧ್ಯಕ್ಷೆ) ಆಯ್ಕೆಗೊಂಡರು.