ಗುಂಡ್ಲುಪೇಟೆ: ತಾಲೂಕಿನ ಚಿಕ್ಕಾಟಿ ಗ್ರಾಮದ ಅತಿ ಕಡಿಮೆ ಭೂ ಹಿಡುವಳಿದಾರನ ಜಮೀನಿನಲ್ಲಿ ದಾರಿ ಮಾಡಲು ಅವಕಾಶ ಮಾಡಿಕೊಟ್ಟಿರುವ ತಾಲೂಕು ಆಡಳಿತದ ವಿರುದ್ಧ ದಲಿತ ಸಂಘರ್ಷ ಸಮಿತಿ ಸದಸ್ಯರು, ಮುಖಂಡ ರಂಗಸ್ವಾಮಿ ನೇತೃತ್ವದಲ್ಲಿ ಪಟ್ಟಣದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಗ್ರಾಮದ ಸನಂ 273/1ರಲ್ಲಿ ಚಿಕ್ಕಮಾದಯ್ಯ ಎಂಬುವರಿಗೆ 0.29 ಗುಂಟೆ ಜಮೀನಿದ್ದು ಇದರಲ್ಲಿ ಜೀವನೋಪಾಯ ಮಾಡುತ್ತಿದ್ದರೂ ಕಂದಾಯ ಇಲಾಖೆಯ ಅಧಿಕಾರಿಗಳು ಸಮರ್ಪಕವಾಗಿ ಸರ್ವೇ ಮಾಡಿಸದೆ ಇದರಲ್ಲಿ ಪಕ್ಕದ ಜಮೀನಿನವರು ಓಡಾಡುವ ದಾರಿ ಮಾಡಿಕೊಳ್ಳಲು ಅನುಮತಿ ನೀಡಿದ್ದಾರೆ. ಆದ್ದರಿಂದ ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಅದಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮಾಡ್ರಹಳ್ಳಿ ಮಹದೇವಸ್ವಾಮಿ, ಪುಟ್ಟ, ಕುಮಾರ್, ಪಿ.ರಾಜು, ಚಿಕ್ಕೂಸಯ್ಯ, ಶಿವನಂಜ, ಸಂಜು ಮತ್ತಿತರರು ಹಾಜರಿದ್ದರು.