ಮುರಗೋಡ: ಸಂಸತ್ತಿನಲ್ಲಿ ಸಂವಿಧಾನ ಶಿಲ್ಪಿಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತಾಗಿ ಹಗುರವಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜೀನಾಮೆಗೆ ಆಗ್ರಹಿಸಿ ಸ್ಥಳೀಯ ದಲಿತ ಸಂಘಟನೆಗಳ ವತಿಯಿಂದ ಉಪತಹಸೀಲ್ದಾರ್ ಡಿ.ಬಿ.ಅಲ್ಲಯ್ಯನವರಮಠ ಅವರ ಮೂಲಕ ರಾಷ್ಟ್ರಪತಿ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ದಲಿತ ಸಂಘಟನೆ ಮುಖಂಡ ಸಂತೋಷ ಹಟ್ಟಿಹೊಳಿ ಮಾತನಾಡಿ, ಸಂಸತ್ತಿನ ಅಧಿವೇಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಹಗುರವಾಗಿ ಮಾತನಾಡಿ ಅಂಬೇಡ್ಕರ್ ಅವರನ್ನು ಅವಮಾನಿಸಿರುವುದು ಖಂಡನೀಯ. ಕೂಡಲೇ ಅವರು ರಾಜೀನಾಮೆ ನೀಡಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು.
ಸಂಘಟನೆ ತಾಲೂಕಾಧ್ಯಕ್ಷ ಶ್ರವಣಕುಮಾರ ಹಟ್ಟಿಹೊಳಿ, ಉಪಾಧ್ಯಕ್ಷ ಹರೀಶ ಪೂಜಾರಿ, ಅನಿಲ ಮೇಗೇರಿ, ಸಾಗರ ಹರಿಜನ. ಶ್ಯಾಮ ಮಾದರ, ವಿಠ್ಠಲ ಕೆಳಗೇರಿ, ಪ್ರಕಾಶ ಚನ್ನಣ್ಣವರ, ರವಿ ಹಟ್ಟಿಹೊಳಿ, ಮುದುಕಪ್ಪ ಸೋಮಾಪುರ, ಮುತ್ತು ಚಿನ್ನಣ್ಣವರ, ಸಾಯಿಲ್ ಮೇಗೇರಿ ಇತರರಿದ್ದರು.