ಜಿಲ್ಲೆ

ದಲಿತ ಕುಟುಂಬದ ಮೇಲೆ ಹಲ್ಲೆ

ಬಸವಕಲ್ಯಾಣ: ಪತರ್ಾಪುರದಲ್ಲಿ ಶುಕ್ರವಾರ ರಾತ್ರಿ ದಲಿತ ಸಮುದಾಯದ ಕುಟುಂಬದವರ ಮೇಲೆ ಹಲ್ಲೆ ನಡೆದಿದೆ. ದತ್ತಾತ್ರಿ ಸೋನಕಾಂಬಳೆ ಮತ್ತು ಅವರ ಪತ್ನಿ ಪುತ್ರ ಸೇರಿ ನಾಲ್ವರ ಮೇಲೆ ಹಲ್ಲೆ ನಡೆಸಿದ್ದು, ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ಆಕಾಶ ಕುದರೆ ಸೇರಿ 8 ಯುವಕರ ವಿರುದ್ಧ ಹಲ್ಲೆ, ಜಾತಿನಿಂದನೆ ಪ್ರಕರಣ ದಾಖಲಾಗಿದೆ. ಗಾಯಗೊಂಡವರಿಗೆ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಶುಕ್ರವಾರ ರಾತ್ರಿ 10.30ರ ಸುಮಾರಿಗೆ ಮನೆ ಎದುರು ಗಲಾಟೆ ಶಬ್ದ ಕೇಳಿ ಮಗನೊಂದಿಗೆ ಹೊರಬಂದಾಗ ಆಕಾಶ ಕುದುರೆ ರಾಡ್ನಿಂದ ನನ್ನ ತಲೆಗೆ ಹೊಡೆದಿದ್ದಾನೆ. ಬಿಡಿಸಲು ಬಂದ ಪತ್ನಿ ಮತ್ತು ಅಣ್ಣನ ಮೇಲೂ ಇತರರು ಹಲ್ಲೆ ನಡೆಸಿದ್ದಾರೆ ಎಂದು ದತ್ತಾತ್ರಿ ಶನಿವಾರ ದೂರು ನೀಡಿದ್ದರು.