ಬಳ್ಳಾರಿ ; ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಪರ ವಕೀಲ ಸುನೀಲ್ ಸೇರಿದಂತೆ ಮೂವರು ಇಲ್ಲಿನ ಕೇಂದ್ರ ಕಾರಾಗೃಹಕ್ಕೆ ಮಂಗಳವಾರ ಭೇಟಿ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ವಕೀಲ ಸುನೀಲ್ ಸುದ್ದಿಗಾರರೊಂದಿಗೆ ಮಾತನಾಡಿ, ಜೈಲಿನ ಹೊಸ ಕೈಪಿಡಿಯಂತೆ ಸೌಲಭ್ಯ ಕಲ್ಪಿಸಬೇಕು ಎಂದು ಜೈಲು ಅಧಿಕಾರಿಗಳ ಬಳಿ ಮನವಿ ಮಾಡಲಾಗಿದೆ. ಹೊಸ ಕೈಪಿಡಿಯಲ್ಲಿ ತಲೆ ದಿಂಬು ಹಾಗೂ ಹಾಸಿಗೆ ನೀಡಲು ಅವಕಾಶವಿದೆ. ನ್ಯಾಯಾಲಯದಿಂದ ಆದೇಶ ಬಂದಿರುವ ಬಗ್ಗೆ ಜೈಲು ಅಧೀಕ್ಷಕರಿಗೆ ಮನವರಿಕೆ ಮಾಡಲಾಗಿದೆ. ಈ ಎಲ್ಲ ಸೌಲಭ್ಯಗಳು ಎರಡ್ಮೂರು ದಿನಗಳಲ್ಲಿ ನೀಡದಿದ್ದರೆ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಲಾಗುವುದು ಎಂದರು. ಸೆಷನ್ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಿಚಾರಣೆ ಸೆ. 27 ರಂದು ನಡೆಯಲಿದ್ದು, ನೂರಕ್ಕೆ ನೂರಷ್ಟು ಜಾಮೀನು ಸಿಗುವ ವಿಶ್ವಾಸವಿದೆ. ಜಾಮೀನು ರಿಜೆಕ್ಟ್ ಆದರೆ, ಹೈ ಕೋರ್ಟ್‌ಗೆ ಮೊರೆ ಹೋಗಲಾಗುವುದು. ಕೊಲೆ ಪ್ರಕರಣದಲ್ಲಿ ಕೆಲವೊಂದು ಅನುಮಾನಗಳನ್ನು ಬಗೆಹರಿಸಿಕೊಳ್ಳಲಾಗಿದೆ. ದರ್ಶನ್ ಬೆನ್ನು ನೋವು ಹೆಚ್ಚಾಗಿದ್ದು, ಹೀಗಾಗಿ ಆರೋಗ್ಯದ ಬಗ್ಗೆ ಗಮನಹರಿಸಿ ಎಂದು ಜೈಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ಜೈಲು ಸಿಬ್ಬಂದಿ ದರ್ಶನ್‌ಗೆ ಸೌಲಭ್ಯ ನೀಡಲು ನಿರಾಕರಿಸಿದರೆ, ನ್ಯಾಯಾಧೀಶರ ಗಮನಕ್ಕೆ ತರಲಾಗುವುದು. 2021ರ ಕೈಪಿಡಿಯಂತೆ ಕೈದಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಕೊಡಬೇಕಾಗುತ್ತದೆ ಮನವಿ ಮಾಡಲಾಗಿದೆ ಎಂದರು. ಸುಮಾರು ಅರ್ಧಗಂಟೆವರೆಗೆ ದರ್ಶನ್ ಜತೆ ಚಾರ್ಜ್‌ಶೀಟ್ ಹಾಗೂ ಜಾಮೀನಿಗೆ ಅರ್ಜಿ ಸಲ್ಲಿಸುವುದರ ಬಗ್ಗೆ ವಕೀಲರು ಚರ್ಚಿಸಿದರು, ಅಲ್ಲದೆ ಕೆಲವೊಂದು ಪತ್ರಗಳಿಗೆ ಸಹಿ ಪಡೆದುಕೊಂಡರು.