ಜಿಲ್ಲೆ

ದರ್ಶನ್ ಭೇಟಿ ಮಾಡಿದ ತಾಯಿ, ಅಕ್ಕ

ಬಳ್ಳಾರಿ : ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಭೇಟಿ ಮಾಡಲು ಇಲ್ಲಿನ ಕೇಂದ್ರ ಕಾರಾಗೃಹಕ್ಕೆ ತಾಯಿ ಮೀನಾ ತೂಗುದೀಪಾ, ಅಕ್ಕ ದಿವ್ಯ ಹಾಗೂ ಬಾವ ಮಂಜುನಾಥ, ಅಳಿಯ ಸೇರಿ ಐದು ಜನರು ಆಗಮಿಸಿದ್ದರು.
ಜೈಲಿಗೆ ಗುರುವಾರ ಬೆಳಗ್ಗೆ ಆಗಮಿಸಿದ ತಾಯಿ ಮೀನಾ ತೂಗುದೀಪಾ ಬೇಕರಿ , ಹಣ್ಣುಗಳ, ಡ್ರೈ ಫ್ರೂಟ್ಸ್, ಬಟ್ಟೆ ಹಾಗೂ ತಿಂಡಿ ತಿನಿಸುಗಳ ಸೇರಿ ಎರಡು ಬ್ಯಾಗ್ ತಂದಿದ್ದರು. ಕುಟುಂಬಸ್ಥರು ಜೈಲಿನೊಳಗೆ ಪ್ರವೇಶಿಸುತ್ತಿದ್ದಂತೆ ಜೈಲು ಸಿಬ್ಬಂದಿ ಐವರ ಆಧಾರ್ ಕಾರ್ಡ್ ಪರಿಶೀಲಿಸಿ ಬಳಿಕ ಸಂದರ್ಶಕರ ಕೊಠಡಿಗೆ ಕಳುಹಿಸಿದರು. ಹೈ ಸೆಕ್ಯೂರಿಟಿ ಸೆಲ್ ನಿಂದ ಹೊರ ಬಂದ ದರ್ಶನ್ ಕೈ ಯಲ್ಲಿ ಬ್ಯಾಗ್ ಹಿಡಿದು ಹೊರ ಬಂದರು. ದರ್ಶನ್ ಕಂಡು ತಾಯಿ ಮೀನಾ ಹಾಗೂ ಸಹೋದರಿ ದಿವ್ಯಾ ಬಾವುಕರಾದರು. ಬಳಿಕ ತಾಯಿ‌ ಹಾಗೂ ಸಹೋದರಿಯನ್ನು ಸ್ವತಃ ಸಮಾಧಾನ ಪಡಿಸಿದರು‌. ಅಲ್ಲದೆ, ಕೆಲ ದಿನಗಳಲ್ಲಿಯೇ ಜೈಲಿನಿಂದ ಹೊರಗಡೆ ಬರುವೆ ಎಂದು ದರ್ಶನ್ ಆಶಾಭಾವನೆ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿದವು. ಸುಮಾರು ಅರ್ಧ ಗಂಟೆ ಕುಟುಂಬದ ಜತೆ ಮಾತನಾಡಿದರು. ಬಳಿಕ ಕುಟುಂಬಸ್ಥರು ದರ್ಶನ್ ಗಾಗಿ ತಂದಿದ್ದ ತಿಂಡಿ ಹಾಗೂ ಬಟ್ಟೆಗಳ ಬ್ಯಾಗ್ ನೀಡಲಾಯಿತು. ಕುಟುಂಬಸ್ಥರ ನೋಡಿದ ಸಂತೋಷದಲ್ಲಿ ಮರಳಿ ಸೆಲ್ ಗೆ ತೆರೆಳುವ ವೇಳೆ ದರ್ಶನ್ ಮಂದಹಾಸದಲ್ಲಿಯೇ ತೆರಳಿದರು. ಜೈಲಿನಿಂದ ಹೊರಗಡೆ ಕುಟುಂಬದವರು ಕಾರಿನಲ್ಲಿ ಮರೆತಿದ್ದ ಹಣ್ಣಿನ ಬಾಕ್ಸ್ ಹಾಗೂ ನಗರದ ಬೇಕರಿಯಿಂದ ತಂದಿದ್ದ ನಿಪ್ಪಾಟ್ಟು ಪ್ಯಾಕೆಟ್ ಗಳನ್ನು ದರ್ಶನ್ ಸೆಲ್ ಗೆ ನೀಡುವಂತೆ ಜೈಲು ಸಿಬ್ಬಂದಿ ಬಳಿ ಅಳಿಯ‌ ಮನವಿ ಮಾಡಿಕೊಂಡರು.