ಸೈಯದ್ ಫಕ್ರುದ್ದೀನ್ ಶಾ ಖಾದ್ರಿ (ಅಜ್ಮತ್‌ಪಾಶ) 
ಜಿಲ್ಲೆ

ದರ್ಗಾದ ಪೂಜಾ ವಿಧಾನಗಳ ಬಗ್ಗೆ ಸರ್ಕಾರ ತನ್ನ ನಿಲುವು ತಿಳಿಸಲಿ

ಚಿಕ್ಕಮಗಳೂರು: ಶ್ರೀಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದ ವಿಚಾರ ಮುಂದಿಟ್ಟುಕೊAಡು ಬಿಜೆಪಿ ರಾಜಕೀಯ ಲಾಭ ಪಡೆಯುವ ಕೆಲಸ ಮಾಡುತ್ತಿದ್ದಾರೆ. ಸಂಘಪರಿವಾದವರು ವಿವಾದ ಸೃಷ್ಟಿಸಿ ಕೋಮು ಸಾಮರಸ್ಯ ಹದಗೆಡಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ. ಇದನ್ನು ಕೂಡಲೇ ನಿಲ್ಲಿಸಬೇಕು ಎಂದು ಸೈಯದ್ ಬುಡೇನ್ ಶಾ ಖಾದ್ರಿ ವಂಶಸ್ಥರ ಸಂಘದ ಪ್ರಧಾನ ಕಾರ್ಯದರ್ಶಿ ಸೈಯದ್ ಫಕ್ರುದ್ದೀನ್ ಶಾ ಖಾದ್ರಿ (ಅಜ್ಮತ್‌ಪಾಶ) ಒತ್ತಾಯಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂಸ್ಥೆಯ ವಿಚಾರದಲ್ಲಿ ನ್ಯಾಯಬದ್ಧವಾದ ನಿರ್ಧಾರ ತೆಗೆದುಕೊಳ್ಳುವಲ್ಲಿ ಬಿಜೆಪಿ ಸೇರಿದಂತೆ ಹಿಂದಿನ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ದರ್ಗಾದ ಪೂಜಾ ವಿಧಾನಗಳ ಬಗ್ಗೆ ರಾಜ್ಯ ಸರ್ಕಾರ ತನ್ನ ನಿಲುವು ತಿಳಿಸಬೆಕು. ಸುಪ್ರೀಂಕೋರ್ಟ್ ನಿರ್ದೇಶಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ಹಾಗೂ ಪೂರಕ ದಾಖಲೆಗಳನ್ನು ಪರಿಶೀಲಿಸಿ ನ್ಯಾಯಾಲಯಕ್ಕೆ ತನ್ನ ನಿಲುವು ತಿಳಿಸಬೇಕು ಎಂದರು.

ಬಿಜೆಪಿ ಮತ್ತು ಅದರ ಅಂಗ ಸಂಸ್ಥೆಗಳು ದತ್ತಾತ್ರೇಯರ ಹೆಸರಲ್ಲಿ ಕೋಮು ದ್ವೇಷ ಹುಟ್ಟು ಹಾಕಿ ಶಾಂತಿಯನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ಸಂಘಪರಿವಾರದವರು ಗುಹೆಯ ಒಳ ಭಾಗದಲ್ಲಿರುವ ಸೂಫಿ ಪಂಥದ ಗಾದಿ(ಪೀಠ), ಛಿಲ್ಲಾ(ಧ್ಯಾನ ಸ್ಥಳ), ಚಿರಾಗ್ ಮತ್ತು ಖಡಾವೆ(ಪಾದುಕೆ)ಗಳ ವಿಚಾರ ಮುಂದಿಟ್ಟುಕೊAಡು ದೇಶದ ಮುಜರಾಯಿ ಇಲಾಖೆ ಅಧೀನದಲ್ಲಿರುವ ಮೊಹಮ್ಮದನ್ ಸಂಸ್ಥೆಯ ಧಾರ್ಮಿಕ ಆಚರಣೆಗಳನ್ನು ಸಂಪೂರ್ಣವಾಗಿ ಬದಲಾಯಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ದೂರಿದರು.

ಈ ಸಂಸ್ಥೆಯ ವಿಚಾರದಲ್ಲಿ ಕೆಲ ಪಕ್ಷಗಳು ನಾವು ಅಲ್ಪಸಂಖ್ಯಾತರ ಪರ ಇz್ದೆÃವೆ ಎನ್ನುತ್ತಿದ್ದರೂ ಈ ವಿಚಾರದಲ್ಲಿ ಅಲ್ಪಸಂಖ್ಯಾತರಿಗೆ ನ್ಯಾಯ ಒಸಗಿಸುವಲ್ಲಿ ವಿಫಲವಾಗಿದ್ದಾರೆ. ಬಿಜೆಪಿ ಪಕ್ಷ ಈ ವಿಚಾರದಲ್ಲಿ ಹಿಂದುಗಳ ಪರ ಎಂಬAತೆ ಬಿಂಬಿಸಿಕೊAಡು ರಾಜಕೀಯ ಲಾಭ ಪಡೆಯುವ ಷಡ್ಯಂತ್ರ ನಡೆಸುತ್ತಿದೆ ಎಂದು ಆರೋಪಿಸಿದರು.

ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾವು ಮೊಹಮ್ಮದನ್ ಸಂಸ್ಥೆಯಾಗಿದೆ. ಆದರೂ ಹಿಂದೂ ಹಾಗೂ ಮುಸಲ್ಮಾನ ಎರಡೂ ಸಮುದಾಯದವರು ಹೋಗುವ ಸಂಸ್ಥೆಯಾಗಿದೆ. ಅಲ್ಲಿ ದಾದಾ ಹಯಾತ್ ಮೀರ್ ಖಲಂದರ್ ಅವರ ಪೀಠ ಹಾಗೂ ಧ್ಯಾನ ಸ್ಥಳ ಗುಹೆಯಲ್ಲಿರುವ ಬಗ್ಗೆ ಹಾಗೂ ಅವರ ಶಿಷ್ಯಂದಿರ ಗೋರಿಗಳು ಇರುವ ಬಗ್ಗೆ, ಮಾಮಜುಗ್ನಿ (ಮೊಹಮ್ಮದನ್ ಪ್ರಿನ್ಸ್ಸ್) ಧ್ಯಾನ ಸ್ಥಳ ಇರುವ ಬಗ್ಗೆ ೧೯೩೦ರಲ್ಲಿ ಸಿ.ಹಯವದನರಾವ್ ಸಂಪಾದನೆ ಮಾಡಿರುವ ಮೈಸೂರು ಗೆಜೆಟಿಯರ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿಸಿದರು.

ಗುಹೆಯ ಆವರಣದಲ್ಲಿ ಹಲವಾರು ಗೋರಿಗಳು ಹಾಗೂ ಸಮಾದಿಗಳಿದ್ದು, ಬಿಜೆಪಿ, ಸಂಘಪರಿವಾರ ಹಾಗೂ ಜಿಲ್ಲಾಡಳಿತ ನಮ್ಮ ಜೊತೆ ಬಂದರೆ ೧೦೦ಕ್ಕಿಂತ ಹೆಚ್ಚು ಗೋರಿಗಳು ಹಾಗು ಸಮಾಧಿಗಳನ್ನು ನಾವು ತೋರಿಸುತ್ತೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಸೈಯದ್ ನಿಜಾಮುದ್ದೀನ್, ಸಲೀಂ ಅಲಿ, ಅರಬಾಜ್, ಮಹಮದ್ ಅತೀಖ್ ಉಪಸ್ಥಿತರಿದ್ದರು.