ಸಂಬರಗಿ: ದರೂರ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಕ್ಕೆ ಈಚೆಗೆ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಶಾಸಕ ಲಕ್ಷ$್ಮಣ ಸವದಿ ನೇತೃತ್ವದಲ್ಲಿ ಅಧ್ಯರಾಗಿ ಶಿವಗೌಡ ಅಣ್ಣಪ್ಪ ಬಸಗೌಡರ, ಉಪಾಧ್ಯರಾಗಿ ಸಿದಗೌಡ ಭೀಮಗೌಡ ಪಾಟೀಲ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಹರೀಶ ಕಾಂಬಳೆ ತಿಳಿಸಿದರು.
ನಿರ್ದೇಶಕರಾದ ರವೀಂದ್ರ ಕಲ್ಲೋಳಿ, ಶಶಿಕಾಂತ ಮಾಯಣ್ಣವರ, ಶ್ರೀಕಾಂತ ಅಸ್ಕಿ, ಸಂಜಯ ಮದಬಾವಿ, ಕಸ್ತೂರಿ ರಾಮಗೌಡ ಗುಮತಾಜ, ಸುರೆಖಾ ಅಜಿತಕುಮಾರ ಸೌಂದತಿ, ಮಲ್ಕೇಶ ದಳವಾಯಿ, ಭೂಪಾಲ ಕಾಂಬಳೆ, ಅಶೋಕ ಖೇಮಲಾಪುರ, ಶಂಕರ ತರಗಿ ಹಾಗೂ ಮುಖಂಡರಾದ ಮಹೇಶ ಢವಳೇಶ್ವರ, ಮಹಾದೇವ ಬಸಗೌಡರ, ಜಗದಿಶ ದಳವಾಯಿ, ಗುರಲಿಂಗ ಗುಮತಾಜ, ಮಹೇಶ ಚೌಗಲಾ, ಬಸವರಾಜ ಮಠದ ಇತರರಿದ್ದರು. ಸಹಾಯಕ ಚುನಾವಣೆ ಅಧಿಕಾರಿಯಾಗಿ ಆಶಾ ಬಿರಾದಾರ ಕಾರ್ಯನಿರ್ವಹಿಸಿದರು.