ಪವನ್ ಆಚಾರ್ಯ ನೀರ್ಚಾಲು ಬೆಂಗಳೂರು
ಹನ್ನೊಂದು ವರ್ಷಗಳ ನಂತರ (ಏ.1ರಿಂದ) ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೀರಿನ ದರ ಶೇ.3 ಹೆಚ್ಚಳಗೊಳಿಸಿದರೂ ನಗರವಾಸಿಗಳು ತಲೆಕೆಡಿಸಿಕೊಂಡಿಲ್ಲ. ಏಪ್ರಿಲ್ ಕೊನೆಯ ವಾರದಲ್ಲಿ ಕಾವೇರಿ ನೀರಿಗಾಗಿ 8,060 ಅರ್ಜಿಗಳು ಸಲ್ಲಿಕೆಯಾಗಿರುವುದು ಇದಕ್ಕೆ ನಿದರ್ಶನ.
ಇತ್ತೀಚಿನ ದಿನಗಳಲ್ಲಿ ಎಲ್ಲ ವಸ್ತುಗಳು ಬೆಲೆ ಏರಿಕೆ ಕಾಣುತ್ತಿದ್ದು, ನೀರಿನ ದರ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿರುವುದು ಜನರನ್ನು ಅಲುಗಾಡಿಸಿಲ್ಲ ಎಂಬಂತೆ ಭಾಸವಾಗುತ್ತಿದೆ. 2024ರ ನವೆಂಬರ್ನಿಂದ ಏಪ್ರಿಲ್ ತನಕ 39,866 ಅರ್ಜಿಗಳು ಸಲ್ಲಿಕೆಯಾಗಿದ್ದು, 31 ಸಾವಿರಕ್ಕೂ ಹೆಚ್ಚು ಗ್ರಾಹಕರಿಗೆ ಡಿಮಾಂಡ್ ನೋಟ್ ವಿತರಿಸಲಾಗಿದೆ. ವಿವಿಧ ಕಾರಣಗಳಿಂದ 4 ಸಾವಿರ ಅರ್ಜಿಗಳನ್ನು ಬಾಕಿ ಉಳಿಸಲಾಗಿದ್ದು, ಕಾವೇರಿ ಸಂಪರ್ಕ ಯೋಜನೆ ಯಶಸ್ವಿಯಾಗಿ ಸಾಗುತ್ತಿದೆ. ಕಾವೇರಿ ಸಂಪರ್ಕ ಅಭಿಯಾನ ಸೇರಿ ಹಲವು ಜಾಗೃತಿ ಕಾರ್ಯಕ್ರಮಗಳ ಲವಾಗಿ 6 ತಿಂಗಳಲ್ಲಿ ಸುಮಾರು 14 ಸಾವಿರ ಹೊಸ ಸಂಪರ್ಕಗಳನ್ನು ನೀಡಲಾಗಿದೆ. ಇದರಿಂದ ನೀರಿನ ದರ ಏರಿಕೆ ಕಂಡರೂ ಸಂಪರ್ಕದಲ್ಲಿ ಇಳಿಕೆ ಇಲ್ಲ ಎಂಬುದು ಸಾಭೀತಾಗಿದೆ.
ವರದಿಗಳ ಪ್ರಕಾರ ಬೆಂಗಳೂರಿನಲ್ಲಿ ಸರಾಸರಿ ತಲಾ ಕಾವೇರಿ ನೀರಿನ ಬಳಕೆ ದಿನಕ್ಕೆ 108 ಲೀಟರ್ ಆಗಿದೆ. 4&5 ಸದಸ್ಯರ ಸರಾಸರಿ ಕುಟುಂಬವು ತಿಂಗಳಿಗೆ ಸುಮಾರು 15,000 ಲೀಟರ್ಗಳನ್ನು ಬಳಸುತ್ತದೆ. ಅಂತಹ ಕುಟುಂಬಕ್ಕೆ, ಹೊಸ ನೀರಿನ ಶುಲ್ಕ 166 ರೂ.ಆಗಿರುತ್ತದೆ. ಮೊದಲ 8,000 ಲೀಟರ್ಗಳಿಗೆ ಪ್ರತಿ ಕಿಲೋಲೀಟರ್ಗೆ 8.5 ರೂ.ದರವಿದ್ದರೆ, ಮುಂದಿನ 7,000 ಲೀಟರ್ಗಳಿಗೆ 14 ರೂ.ದರದಲ್ಲಿ ವಿಧಿಸಲಾಗುತ್ತದೆ. ಮೀಟರ್ ವೆಚ್ಚ ಮತ್ತು ಇತರ ಶುಲ್ಕಗಳನ್ನು ಪರಿಗಣಿಸಿ, ಮನೆಯ ಒಟ್ಟು ಮಾಸಿಕ ಬಿಲ್ ಸುಮಾರು 250&270 ರೂ.ಆಗಿರುತ್ತದೆ. ತಿಂಗಳಿಗೆ 15,000 ಲೀಟರ್ಗಳನ್ನು ಬಳಸುವ ಅಪಾರ್ಟ್ಮೆಂಟ್ಗಳಿಗೆ ಒಟ್ಟು 400-&500 ರೂ.ಮಾಸಿಕ ಬಿಲ್ ಬರುತ್ತದ್ದು, ಇದು ಮೇ ಬಿಲ್ಲಿನ ಒಂದು ಚಿತ್ರಣವಾಗಿದೆ.
ಇಎಂಐ ಸೌಲಭ್ಯ: ಕಾವೇರಿ ನೂತನ ಸಂಪರ್ಕದ "ಪ್ರೋರೇಟಾ' ಶುಲ್ಕವನ್ನು ಕಂತುಗಳ ಮೂಲಕ ಪಾವತಿಸಲು ಜಲಮಂಡಳಿ ಹೊಸ ಯೋಜನೆ ರೂಪಿಸಿದ್ದು, ಶ್ರೀದಲ್ಲೇ ಅನಿಷ್ಠಾನಗೊಳ್ಳಲಿದೆ. ಸಣ್ಣ ನಿವೇಶನದಾರರಿಗೆ ಈ ಯೋಜನೆ ಲಪ್ರದವಾಗಿದ್ದು, 600 ಚದರ ಅಡಿ ವಿಸ್ತೀರ್ಣದಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಮಾತ್ರ ಈ ಸೌಲಭ್ಯ ಲಭ್ಯವಿರುತ್ತದೆ. ಇಷ್ಟು ವಿಸ್ತೀರ್ಣದಲ್ಲಿ ಮನೆ ನಿರ್ಮಿಸಿದವರು 2,900 ರೂ.ಠೇವಣಿ ಹಾಗೂ ಡಿಮಾಂಡ್ ನೋಟ್ ಬಂದಾಗ 1000 ರೂ.ಪಾವತಿಸಿದರೆ, ಕಾವೇರಿ ಸಂಪರ್ಕ ಶ್ರೀ ಸಿಗಲಿದೆ. ಉಳಿಕೆ ಹಣವನ್ನು 12 ಕಂತುಗಳಲ್ಲಿ ಪಾವತಿಸಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಣಕ್ಕೆ ಕಾವೇರಿ ಹರಿವು ಹೆಚ್ಚು!: ಬೆಂಗಳೂರಿನ ನಾಲ್ಕು ವಲಯಗಳ ಪೈಕಿ ದಣ ವಲಯದಲ್ಲಿ ಅತಿ ಹೆಚ್ಚು (14,000)ಅರ್ಜಿಗಳು ಸಲ್ಲಿಕೆಯಾಗಿದ್ದು, 6,000 ಮನೆಗಳಿಗೆ ನೀರಿನ ಸಂಪರ್ಕ ನೀಡಲಾಗಿದೆ. ಪೂರ್ವ ವಲಯದಲ್ಲಿ 12 ಸಾವಿರ ಅರ್ಜಿ ಸಲ್ಲಿಕೆಯಾಗಿದ್ದು, 2 ಸಾವಿರ ಸಂಪರ್ಕ ನೀಡಲಾಗಿದೆ. ಪಶ್ಚಿಮದಲ್ಲಿ 10 ಸಾವಿರಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದು, 3,000 ಮನೆಗಳಿಗೆ ನೀರಿನ ಸಂಪರ್ಕ ನೀಡಲಾಗಿದೆ. 6 ತಿಂಗಳಲ್ಲಿ 4 ವಲಯಗಳಿಂದ ಪ್ರೋರೇಟಾ ಶುಲ್ಕ 210 ಕೋಟಿ ರೂ.ಸಂಗ್ರಹವಾಗಿದೆ. ಶುಲ್ಕ ಸಂಗ್ರಹದಲ್ಲೂ ದಣ ವಲಯ ಮುಂದಿದೆ.