ಜಿಲ್ಲೆ

ದಯೆಯ ಕೊರತೆಯಿಂದ ಭಯೋತ್ಪಾದನೆ ಹೆಚ್ಚಳ

ಕಂಪ್ಲಿ: ಆಧುನಿಕ ಜೀವನ ಶೈಲಿಯಿಂದಾಗಿ ನೈತಿಕತೆ ಕಣ್ಮರೆಯಾಗುತ್ತಿದೆ ಎಂದು ಸಂಪನ್ಮೂಲ ವ್ಯಕ್ತಿ ಸುನೀಲ್ ಮಾಲಿಪಾಟೀಲ್ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ಅಕ್ಕಮಹಾದೇವಿ ಮಹಿಳಾ ಮಂಡಳಿಯ ಅನುಭವ ಮಂಟಪದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತಿನಿಂದ ಆಯೋಜಿಸಿದ್ದ 179ನೇ ಮಹಾಮನೆ ಕಾರ್ಯಕ್ರಮದಲ್ಲಿ ‘ಶರಣರ ದೃಷ್ಟಿಯಲ್ಲಿ ನೈತಿಕತೆ ಕುರಿತು ಶನಿವಾರ ಉಪನ್ಯಾಸ ನೀಡಿದರು. ಮನೆಯಲ್ಲಿ ನೈತಿಕತೆ, ಸಂಸ್ಕಾರ, ಆಚಾರ-ವಿಚಾರ ಕಲಿಯದ ಮಕ್ಕಳನ್ನು ಹೆದರಿಸಲು ಶಾಲೆ, ಶಿಕ್ಷಕರು ಆಯುಧದಂತಾಗಿರುವುದು ವಿಪರ್ಯಾಸ. ಪ್ರಸ್ತುತ ದಿನಮಾನಗಳಲ್ಲಿ ಭಕ್ತಿ ವ್ಯವಹಾರವಾಗಿದೆ. ಜಗತ್ತಿನಲ್ಲಿ ದಯೆಯ ಕೊರತೆಯಿಂದಾಗಿ ಭಯೋತ್ಪಾದನೆ, ಯುದ್ಧ ಮಡೆಯುತ್ತಿವೆ ಎಂದು ತಿಳಿಸಿದರು.

ಸಾಂಗತ್ರಯ ಸಂಸ್ಕೃತ ಪಾಠಶಾಲೆಯ ಪ್ರಾಚಾರ್ಯ ಘನಮಠದಯ್ಯ ಹಿರೇಮಠ ಮಾತನಾಡಿ, ಮಕ್ಕಳು ತಂದೆ-ತಾಯಿ, ಗುರು-ಹಿರಿಯರ ಮಾತುಗಳನ್ನು ಪಾಲಿಸಿದರೆ ಸಂಸ್ಕಾರವಂತರಾಗಲು ಸಾಧ್ಯ ಎಂದರು.

ಪರಿಷತ್ತಿನ ತಾಲೂಕು ಅಧ್ಯಕ್ಷ ಜಿ.ಪ್ರಕಾಶ್, ಕಾರ್ಯಾಧ್ಯಕ್ಷ ಬಂಗಿ ದೊಡ್ಡಮಂಜುನಾಥ, ಅಕ್ಕಮಹಾದೇವಿ ಮಹಿಳಾ ಮಂಡಳಿ ಅಧ್ಯಕ್ಷೆ ಮುಕ್ಕುಂದಿ ಶಿವಗಂಗಮ್ಮ, ಶಿಕ್ಷಕ ಕೆ.ವಿಷ್ಣು, ಪ್ರಮುಖರಾದ ಅಶೋಕ ಕುಕನೂರ, ಎಚ್.ನಾಗರಾಜ, ಬಿ.ಎಂ.ರುದ್ರಯ್ಯ, ಎಸ್.ಡಿ.ಬಸವರಾಜ, ಎಸ್.ಶಾಮಸುಂದರರಾವ್, ಬಿ.ಎಂ.ಪುಷ್ಪಾ, ಕಲ್ಗುಡಿ ನಾಗರತ್ನಾ, ಸಂತೋಷ ಸೋಗಿ, ಮಡಿವಾಳ ಹುಲುಗಪ್ಪ, ಬಡಿಗೇರ ಜಿಲಾನ್‌ಸಾಬ್, ಸಜ್ಜೇದ ವೀರಭದ್ರಪ್ಪ, ಕೆ.ಯಂಕಾರೆಡ್ಡಿ, ಉಗಾದಿ ಬಸವರಾಜ, ಚಂದ್ರಯ್ಯ ಸೊಪ್ಪಿಮಠ, ಸಂಗಮೇಶ ಕಂದಕೂರು ಇತರರಿದ್ದರು.