ರಬಕವಿ ಮಹಾದೇವ ಹಾಗೂ ಮಲ್ಲಿಕಾರ್ಜುನ ದೇವರ ಜಾತ್ರೆ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ಸಾರ್ವಜನಿಕರ ಅನ್ನ ದಾಸೋಹಕ್ಕೆ ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದ ಶ್ರೀ ಗುರುಸಿದ್ಧೇಶ್ವರ ಶ್ರೀಗಳು ಚಾಲನೆ ನೀಡಿದರು. ಟ್ರಸ್ಟ್ ಅಧ್ಯಕ್ಷ ಬಾಲಚಂದ್ರ ಉದಮಿ, ಎಂ.ಎಸ್. ಬದಾಮಿ ಇದ್ದರು. 
ಜಿಲ್ಲೆ

ದಾನಗಳಲ್ಲಿ ಶ್ರೇಷ್ಠವಾದ ದಾನ ಅನ್ನದಾನ

ರಬಕವಿ/ಬನಹಟ್ಟಿ: ಭಗವಂತ ನಮಗೆ ಕೊಟ್ಟ ಅನ್ನದಲ್ಲಿ ಸ್ವಲ್ಪ ಪ್ರಮಾಣದಲ್ಲಿಯಾದರೂ ಹಸಿದ ಹೊಟ್ಟೆಗೆ ಅನ್ನದಾನ ಮಾಡಬೇಕು ಎಂದು ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದ ಶ್ರೀ ಗುರುಸಿದ್ಧೇಶ್ವರ ಶ್ರೀಗಳು ತಿಳಿಸಿದರು.
ರಬಕವಿ ಮಹಾದೇವ ಹಾಗೂ ಮಲ್ಲಿಕಾರ್ಜುನ ದೇವರ ಜಾತ್ರೆ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ಸಾರ್ವಜನಿಕರ ಅನ್ನ ದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲೂ ಇಂದು ಅನೇಕರಿಗೆ ಅನ್ನದ ಕೊರತೆ ಇದೆ. ಅಂಥಹ ಹಸಿದ ಹೊಟ್ಟೆಗಳಿಗೆ ಆರ್ಥಿಕವಾಗಿ ಸಬಲರಿದ್ದವರು ಒಂದಿಷ್ಟು ದಾನ ಮಾಡಿ ಪುಣ್ಯ ಕಟ್ಟಿಕೊಳ್ಳಬೇಕು ಎಂದರು.
ಟ್ರಸ್ಟ್ ಅಧ್ಯಕ್ಷ ಬಾಲಚಂದ್ರ ಉಮದಿ, ಸಾಹಿತಿ ಎಂ. ಎಸ್. ಬದಾಮಿ, ದಾದಾಸಾಹೇಬ ನಾಡಗೌಡಪಾಟೀಲ, ಸಂಜು ಅಮ್ಮಣಗಿಮಠ, ದಯಾನಂದ ಬಾಗಲಕೋಟಮಠ ಇತರರಿದ್ದರು.