ಸಕಲೇಶಪುರ; ಹಿಂದೂ ಸಂಸ್ಕೃತಿಯನ್ನು ಮಕ್ಕಳಿಗೆ ತಿಳಿಸಲು ಪೋಷಕರು ವಿಫಲರಾಗಿರುವುದೆ ಹಿಂದು ಯುವಜನತೆ ದಾರಿತಪ್ಪಲು ಕಾರಣವಾಗಿದೆ ಎಂದು ಅರಕಲಗೂಡು ತಾಲೂಕು ಬಸವಪಟ್ಟಣದ ತೋಟಧಾರ್ಯ ಸಂಸ್ಥಾನ ಮಠದ ಶ್ರೀ ಸ್ವತಂತ್ರ್ಯಬಸವಲಿಂಗ ಸ್ವಾಮಿಜಿ ಹೇಳಿದರು.
ಭಾನುವಾರ ರಾತ್ರಿ ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದ ಆವರಣದಲ್ಲಿ ಭಜರಂಗದಳ ಹಾಗೂ ವಿಶ್ವಹಿಂದುಪರಿಷತ್ ಹಮ್ಮಿಕೊಂಡಿದ್ದ ದತ್ತಜಯಂತಿ ಪ್ರಯುಕ್ತ ಸಂಕೀರ್ತನ ಯಾತ್ರೆಯ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದು ಹಿಂದೂ ಸಂಸ್ಕೃತಿ,ಸಂಸ್ಕಾರ,ಹಿಂದೂ ಧರ್ಮಗ್ರಂಥಗಳಲ್ಲಿನ ಸಾರವನ್ನು ಮಕ್ಕಳಿಗೆ ಭೋಧಿಸುವ ತುರ್ತು ಅಗತ್ಯವಿದೆ. ಧರ್ಮದಲ್ಲಿನ ಸಾರವನ್ನು ಅರಿಯದ ಯುವಜನತೆಯಿಂದಾಗಿ ಸಮಾಜದಲ್ಲಿ ಸ್ವೇಚ್ಚಚಾರ ಅತಿಯಾಗಿದೆ. ಇದು ಅನ್ಯ ಧರ್ಮಿಯರು ನಮ್ಮ ಸಮಾಜದ ಮೇಲೆ ಅಕ್ರಮಣ ಮಾಡಲು ಕಾರಣವಾಗಿದೆ ಎಂದರು.
ದುಶ್ಚಟ ಹಾಗೂ ದ್ವೇಷಮುಕ್ತ ಸಮಾಜ ನಿರ್ಮಾಣಕ್ಕಾಗಿ ಹಿಂದೂ ಸಂಸ್ಕೃತಿಯನ್ನು ಎತ್ತಿಹಿಡಿಯುವ ಕೆಲಸವಾಗ ಬೇಕಿದೆ. ಹಿಂದೂಗಳು ಈಗ ಸಂಕೀರ್ಣ ಸಮಸ್ಯೆ ಎದುರಿಸುತ್ತಿದ್ದು ನಾವು ಈಗ ಎಚ್ಚೇತ್ತುಕೊಳ್ಳದಿದ್ದರೆ ಮುಂದಿನ ಜನಾಂಗ ತೀವ್ರ ಸಮಸ್ಯೆ ಎದುರಿಸಲಿದೆ.ಹಿಂದೂಗಳಿಗೆ ಹಿಂದೂಗಳೆ ಮುಳುವು ಎನ್ನಲು ಸಿದ್ದರಾಮಯ್ಯ ಉದಾಹರಣೆ. ಅಲ್ಪಸಂಖ್ಯಾತರನ್ನು ಸಂತೋಷಗೊಳಿಸಲು ಹಿಂದೂ ಧರ್ಮವನ್ನು ದುರ್ಬಲಗೊಳಿಸುತ್ತಿರುವ ಸಿದ್ದರಾಮಯ್ಯನವರು ಒರ್ವ ಸಿದ್ದರಾಮುಲ್ಲಖಾನ್ ಎಂಬುವುದರಲ್ಲಿ ಯಾವುದೆ ತಪ್ಪಿಲ್ಲ. ಪ್ರಪಂಚದಲ್ಲಿರುವುದು ಏಕೈಕ ಹಿಂದೂ ದೇಶ ನಮ್ಮದು ನಮ್ಮ ದೇಶದ ಏಕತೆಗೆ ಭಂಗ ಬಂದಾಗ ಒಂದಾಗಿ ಹೋರಾಟ ನಡೆಸದಿದ್ದರೆ ಉಳಿಗಾಲವಿಲ್ಲ. ಇತ್ತಿಚ್ಚಿನ ದಿನಗಳಲ್ಲಿ ಅನ್ಯಧರ್ಮಿಯರು ದಲಿತರನ್ನು ಎತ್ತಿಕಟ್ಟುವ ಮೂಲಕ ಹಿಂದೂ ಸಮಾಜವನ್ನು ವ್ಯವಸ್ಥಿತವಾಗಿ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಹಿಂದೂ ಧರ್ಮದಲ್ಲಿ ಎಂದಿಗೂ ಜಾತಿ ಪದ್ದತಿ ಇಲ್ಲ. ದಲಿತರು ಇದಕ್ಕೆ ಕಿವಿಗೂಡಬಾರದು. ಭಯೋತ್ಪಧನೆ ಮೂಲಕ ಹಿಂದೂ ಸಮಾಜವನ್ನು ಬೆದರಿಸುವ ಕೆಲಸವಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಕ್ಕರ್ ಬಾಂಬ್ ಸಿಡಿಸುವ ದೇಶವಿದ್ರೋಹಿ ಕೆಲಸ ನಡೆಸಿದವರು ಹಾಗೂ ಅದಕ್ಕೆ ಸಹಕರಿಸಿದವರನ್ನು ಪತ್ತೆಮಾಡಿ ಶಿಕ್ಷೆ ವಿಧಿಸ ಬೇಕು. ಈ ಮೂಲಕ ಭಯೋತ್ಪಧನೆಯನ್ನು ಪರಿಣಾಮಕಾರಿಯಾಗಿ ಮಟ್ಟಹಾಕಲು ಸಾಧ್ಯ ಎಂದರು.
ವಿಶ್ವಹಿಂದೂಪರಿಷತ್ ಸಹಕಾರ್ಯಧರ್ಶಿ ಶರಣ್‌ಪಂಪ್‌ವೆಲ್ ಮಾತನಾಡಿ, ದತ್ತಪೀಠ ಹೋರಾಟಕ್ಕೆ ಮೂರು ದಶಕಗಳ ಇತಿಹಾಸವಿದೆ. ದತ್ತಪೀಠದಲ್ಲಿ ಮೂರುಹೊತ್ತು ಹಿಂದೂಗಳು ಪೂಜೆಮಾಡಲು ಅರ್ಚಕರನ್ನು ನೇಮಿಸಲು ನ್ಯಾಯಾಲಯ ಅವಕಾಶಮಾಡಿಕೊಟ್ಟಿರುವುದು ಹೋರಾಟಕ್ಕೆ ಸಂದಜಯವಾಗಿದೆ. ಸುಮಾರು 33 ಸಾವಿರ ದೇವಸ್ಥಾನಗಳನ್ನು ಐದು ಶತಮಾನಗಳ ಕಾಲ ಮುಸ್ಲೀಂ ದೊರೆಗಳ ನಡೆಸಿದ ಆಳ್ವಿಕೆಯಲ್ಲಿ ಕಳೆದುಕೊಂಡಿದ್ದೆವೆ. ಸದ್ಯ ಈ ದೇವಸ್ಥಾನಗಳ ಜೀರ್ಣೋದ್ಧಾರ ನಡೆಸುವ ಸುವರ್ಣ ಯುಗ ಆರಂಭವಾಗಿದೆ. ಇಂದಿಗೂ ಹಿಂದೂ ಸಮಾಜವನ್ನು ಹತ್ತಿಕ್ಕಳು ಅನ್ಯಧರ್ಮದವರು ಲವ್‌ಜಿಹಾದ್,ಗೋಹತ್ಯೆ,ಭಯೋತ್ಪದನೆಯಂತಯ ಸವಾಲನ್ನು ಎಸೆದಿದ್ದು ಇವುಗಳನ್ನು ಸಮರ್ಥವಾಗಿ ಮೆಟ್ಟಿನಿಲ್ಲಲ್ಲು ನಮ್ಮ ಧರ್ಮದ ಸಂಸ್ಕೃತಿಯನ್ನು ಯುವಜನರಿಗೆ ತಿಳಿಸುವ ಕೆಲಸವಾಗ ಬೇಕಿದೆ. ಹಿಂದೂಗಳ ಒಳ್ಳೆಯತನವನ್ನು ದುರುಪಯೋಗ ಪಡಿಸಿಕೊಂಡು ಹಲವರು ಆಳ್ವಿಕೆ ನಡೆಸಿ ನಮ್ಮ ಸಂಸ್ಕೃತಿ,ಸಂಪತ್ತನ್ನು ದೋಚುವ ಕೆಲಸವನ್ನು ಕಳೆದ ಹಲವು ಶತಮಾನಗಳಿಂದ ನಡೆಸಿಕೊಂಡು ಬರುತ್ತಿದ್ದಾರದರು ಎಂದಿಗೂ ಅವರ ತಮ್ಮ ಕಾರ್ಯದಲ್ಲಿ ಯಶಸ್ವಿಯಾಗಿಲ್ಲ ಅದೇರೀತಿ ಹಿಂದೂ ಸಮಾಜವನ್ನು ಇಸ್ಲಾಂಮೀಕರಣ ನಡೆಸುವುದು ಅಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷೆತೆವಹಿಸಿದ್ದ ಕೆಸಗಾನಹಳ್ಳಿ ಹಿತೇಂದ್ರ ಮಾತನಾಡಿ, ಪ್ರಪಂಚದಲ್ಲಿ ಬಹುಸಂಖ್ಯಾತರು ಅಲ್ಪಸಂಖ್ಯಾತರಿಂದ ಹಿಂಸೆಗೊಳಗಾಗುತ್ತಿರುವುದು ನಮ್ಮ ದೇಶದಲ್ಲಿ ಮಾತ್ರ. ಅಹಿಂಸೆ ಬಿಟ್ಟು ಹೋರಾಟಕ್ಕೆ ಇಳಿದಾಗ ಮಾತ್ರ ಅವರನ್ನು ಸಮರ್ಥವಾಗಿ ಮಟ್ಟಹಾಕಲು ಸಾಧ್ಯ. ಇಂತಹದೊಂದು ಮನಸ್ಥಿತಿಯನ್ನು ಯುವಜನತೆಯಲ್ಲಿ ಭಿತ್ತಬೇಕಾಗಿರುವುದು ಇಂದಿನ ತುರ್ತು ಅಗತ್ಯ ಎಂದರು. ದೇಶದಲ್ಲಿ ಭ್ರೀಟಿಷರ, ಒಡೆದು ಆಳುವ ನೀತಿಯಿಂದಾಗಿ ನಾವು ಇಂದಿಗೂ ಒಂದಾಗಿ ಹೋಗಲು ಸಾಧ್ಯವಾಗುತ್ತಿಲ್ಲ. ಹಿಂದೂಗಳಲ್ಲಿನ ಜಾತಿತಾರತಮ್ಯ ನೀತಿಯನ್ನು ತೊಡೆದು ಒಂದಾಗಿ ಬಧುಕಿದಾಗ ಮಾತ್ರ ಅನ್ಯಧರ್ಮಿಯರ ಕಾರ್ಯಸಾಧನೆ ಸಾಧ್ಯವಾಗುವುದಿಲ್ಲ ಎಂದರು. ಹಿಂದೂ ಸಮಾಜ ಒಗ್ಗೋಡಿಸಲು ಹೋರಾಟ ನಡೆಸುತ್ತಿರುವ ವ್ಯಕ್ತಿಗಳ್ಯಾರು ಆರ್ಥೀಕವಾಗಿ ಶ್ರೀಮಂತರಲ್ಲ ಅವರಿಗೆ ಆರ್ಥಿಕವಾಗಿ ಬಲಾಢ್ಯವಾಗಿರುವ ಹಿಂದೂ ಸಹೋದಾರರು ಸಹಕಾರ ನೀಡಬೇಕು ಎಂದರು.
ಕಾರ್ಯಕ್ರಮದ ಅಂಗವಾಗಿ ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಗುರುವೇಗೌಡ ಕಲ್ಯಾಣ ಮಂಟಪದವರೆಗೆ ದತ್ತಾಮಾಲಾದಾರಿಗಳಿಂದ ಬೃಹತ್ ಮೆರವಣಿಗೆ ನಡೆಯಿತು. ಮಹಿಳೆಯರು ಮಕ್ಕಳು ಸಹ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.
ಕಾರ್ಯಕ್ರಮದಲ್ಲಿ ಎಂ.ಎಸ್ ನಾಗೇಂದ್ರ ಸೇವಾ ಪ್ರತೀಷ್ಠಾನದ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ, ದಲಿತ ಮುಖಂಡ ಮಳಲಿ ಶಿವಣ್ಣ, ನಿವೃತ್ತ ಕೃಷಿಅಧಿಕಾರಿ ಶ್ರೀನಿವಾಸ್,ಉದ್ಯಮಿ ಮಂಜುನಾಥ್,ಟಿಎಪಿಸಿಎಂಎಸ್ ಅಧ್ಯಕ್ಷ ಶಶಿಕುಮಾರ್, ಹಿಂದೂಪರ ಸಂಘಟನೆಯ ಮುಖಂಡರಾದ ಕೌಶಿಕ್, ಶ್ರೀಜಿತ್, ಮಂಜುಕಬ್ಬಿನಗದ್ದೆ, ಕಾರ್ತಿಕ್ ಮುಂತಾದವರಿದ್ದರು.