ಮೀನಾ ನಾಗರಾಜ್ 
ಜಿಲ್ಲೆ

ದತ್ತಮಾಲಾ ಅಭಿಯಾನಕ್ಕೆ ಷರತ್ತು ಬದ್ಧ ನಿಬಂಧನೆ

ನಿತ್ಯಾನಂದ ಎಸ್.ಎನ್.

ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕು ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ನ. ೪ರಿಂದ ೧೦ ರವರೆಗೆ ಶ್ರೀರಾಮಸೇನೆ ಕಾರ್ಯಕರ್ತರು ಚಿಕ್ಕಮಗಳೂರು ನಗರದ ಶಂಕರಮಠ ಹಾಗೂ ಇತರೆ ಕಡೆಗಳಲ್ಲಿ ದತ್ತಮಾಲಾ ಧಾರಣೆ ಹಾಗೂ ದತ್ತಮಾಲಾ ಅಭಿಯಾನ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಕೆಲ ನಿಬಂಧನೆಗಳನ್ನು ವಿಧಿಸಲಾಗಿದೆ.

ನಗರದ ಶಂಕರ ಮಠದ ಬಳಿಯಿಂದ ಸ್ವಂತ ವಾಹನಗಳಲ್ಲಿ ಶ್ರೀ ಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾಕ್ಕೆ ತೆರಳಿ ಪಾದುಕೆ ದರ್ಶನ, ಹೋಮ, ಪೂಜೆ, ಧಾರ್ಮಿಕ ಸಭೆ ನಡೆಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ನಾಗಾಸಾಧುಗಳು, ವಿವಿಧ ಮಠಾಧೀಶರು ಮತ್ತು ದತ್ತಮಾಲಾಧಾರಿಗಳು ಸುಮಾರು ೩೦೦೦ ರಿಂದ ೩೫೦೦ ಜನ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಾಗೂ ಸಾರ್ವಜನಿಕ ಶಾಂತಿಪಾಲನೆ ದೃಷ್ಟಿಯಿಂದ ಕಾರ್ಯಕ್ರಮದ ಸಂಘಟಕರು ಹಾಗೂ ಪ್ರತಿಯೊಬ್ಬ ಸಾರ್ವಜನಿಕರಿಗೆ ಕೆಲವು ಷರತ್ತುಬದ್ದ ನಿಬಂಧನೆಗಳನ್ನು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೊರಡಿಸಿದ್ದಾರೆ.

ಕಾರ್ಯಕ್ರಮಕ್ಕೆ ಬಳಸುವ ಯಾವುದೇ ಧಾರ್ಮಿಕ ಸಂಸ್ಥೆ, ಸ್ಥಳದಲ್ಲಿ ಸದರಿ ಸಂಸ್ಥೆ, ಸ್ಥಳ ಯಾರ/ಯಾವ ಅಧೀನದಲ್ಲಿದೆ ಎಂಬುದನ್ನು ತಿಳಿದು ಅವರಿಗೆ ಕಾರ್ಯಕ್ರಮದ ಮಾಹಿತಿಯನ್ನು ಪೂರ್ವ ಯೋಜಿತವಾಗಿ ನೀಡಿ, ಸೂಕ್ತಾನುಸಾರ ಅನುಮತಿ ಪಡೆದುಕೊಳ್ಳಬೇಕು. ಕಾರ್ಯಕ್ರಮಕ್ಕೆ ಬಳಸುವ ಧಾರ್ಮಿಕ ಸಂಸ್ಥೆ, ಸ್ಥಳದಲ್ಲಿ ಅವುಗಳ ಕಟ್ಟುಪಾಡು, ಪದ್ಧತಿ, ನೀತಿ ನಿಯಮಗಳಿಗೆ ಮತ್ತು ಷರತ್ತುಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕು. ಕಾರ್ಯಕ್ರಮದ ಅವಧಿಯಲ್ಲಿ ಯಾವುದೇ ರೀತಿಯ ಮಾರಕಾಸ್ತç, ಶಸ್ತಾçಸ್ತç, ಆಯುಧಗಳನ್ನು ಹಾಗೂ ದೈಹಿಕವಾಗಿ ಹಿಂಸೆಯನ್ನುAಟು ಮಾಡುವ ಯಾವುದೇ ಸಲಕರಣೆಯನ್ನು ಹಿಡಿದು ಓಡಾಡುವುದು ಹಾಗೂ ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ಯಾವುದೇ ರೀತಿಯ ಸ್ಫೋಟಕ, ಸಿಡಿಮದ್ದುಗಳ ಸಾಗಾಣಿಕೆ-ದಾಸ್ತಾನು ಹಾಗೂ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಯಾವುದೇ ಖಾಸಗಿ/ಸಾರ್ವಜನಿಕ ಆಸ್ತಿ ಪಾಸ್ತಿಗಳನ್ನು ಹಾನಿಗೊಳಿಸುವ ಮತ್ತು ವಿರೂಪಗೊಳಿಸುವ ಎಲ್ಲ ರೀತಿಯ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಯಾವುದೇ ರೀತಿಯ ಬಂದ್, ಪ್ರತಿಭಟನೆ, ಮುಷ್ಕರ, ಪ್ರತಿಕೃತಿ ದಹನ, ಪ್ರದರ್ಶನ ಹಾಗೂ ಪೂರಕ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ.

ದತ್ತಮಾಲಾಧಾರಣೆ ಹಾಗೂ ಧಾರ್ಮಿಕ ಸಭೆಗಳ ಸಮಯ ಸ್ಥಳ, ಮಾರ್ಗ ಇತ್ಯಾದಿ ವಿವರಗಳನ್ನು ಮತ್ತು ನೇತೃತ್ವ ವಹಿಸುವ ಸಂಘಟಕರು/ಸAಯೋಜಕರ ವಿವರಗಳನ್ನು ಮುಂಚಿತವಾಗಿ ಆಯಾ ತಹಸೀಲ್ದಾರರಿಗೆ ಮತ್ತು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿ ಸದರಿ ಅಧಿಕಾರಿಗಳು ನಿಗದಿಪಡಿಸುವ ಮಾರ್ಗ, ಸ್ಥಳ, ಸಮಯದ ಬಗ್ಗೆ ಸೂಕ್ತ ಅನುಮತಿ ಪಡೆದು ಅದರಂತೆ ಕ್ರಮವಹಿಸಬೇಕು ಎಂದು ತಿಳಿಸಿದ್ದಾರೆ.

ಕಾರ್ಯಕ್ರಮದ ಯಾವುದೇ ಸಂದರ್ಭದಲ್ಲೂ ಯಾವುದೇ ವ್ಯಕ್ತಿ ಧರ್ಮ, ಕೋಮು, ಜಾತಿ ಪಂಥ, ಸರ್ಕಾರ ಸಂಸ್ಥೆಗಳು, ಸಂಘಟನೆಗಳು, ಸ್ಥಳಗಳು ಹಾಗೂ ಕಾರ್ಯನಿರತ ಅಧಿಕಾರಿ/ಸಿಬ್ಬಂದಿ ವಿರುದ್ಧ ಅಥವಾ ನಿಂದಿಸುವAತಹ ಯಾವುದೇ ಘೋಷಣೆ, ಭಾಷಣ ಪ್ರಕಟಣೆಗಳು ಅವಾಚ್ಯ ಶಬ್ದಗಳ ಬಳಕೆ, ಆವೇಶಕಾರಿ/ಪ್ರಚೋದನಾಕಾರಿ ಭಾಷಣ, ಹಾಡು, ಗಾಯನ, ಪ್ರದರ್ಶನ, ಪ್ರಕಟಣೆಗಳ ಬಳಕೆ, ಭಿತ್ತಿಪತ್ರ, ಧ್ವಜ, ಬ್ಯಾನರ್, ಇತ್ಯಾದಿ ರೂಪಗಳಲ್ಲಿ ಪ್ರಚುರಪಡಿಸುವ, ಕೂಗುವ ಅಥವಾ ಬಿತ್ತರಗೊಳಿಸುವ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.