ಚಿಕ್ಕಮಗಳೂರು: ದತ್ತಪೀಠದಲ್ಲಿ ಕೆಲವರು ಪದೇ ಪದೇ ಗೊಂದಲ ಹಾಗೂ ಅಶಾಂತಿ ಸೃಷ್ಟಿ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ಕಾನೂನು ರೀತ್ಯಾ ಕ್ರಮ ತೆಗೆದುಕೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಜಿಲ್ಲಾ ಕಾರ್ಯದರ್ಶಿ ಟಿ.ರಂಗನಾಥ್ ಆಗ್ರಹಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೀಠಕ್ಕೆ ಆಗಮಿಸಿದ ಕೆಲವು ಸಂಘಟನೆಯ ಮುಸಲ್ಮಾನರು ರೋಟಿಬಾಜಿ ತಯಾರಿಸಿ ಮೆರವಣಿಗೆ ಮೂಲಕ ಘೋಷಣೆಗಳನ್ನು ಕೂಗುತ್ತ ದತ್ತಪೀಠದ ಗುಹೆ ಒಳಗೆ ಹೋಗಲು ಪ್ರಯತ್ನಿಸಿ ಮಾಮಾಜುಗ್ನಿಯವರಿಗೆ ಪಾತೇಹ ಪೂಜೆ ಸಲ್ಲಿಸಲು ಮುಂದಾಗಿದ್ದರು ಎಂದು ದೂರಿದರು.
ಈ ವ್ಯಕ್ತಿಗಳು ತಮ್ಮದೇ ಇಚ್ಛಾನುಸಾರ ಪೂಜೆ ಮಾಡುವುದಾದಲ್ಲಿ ನಾಗೇನಹಳ್ಳಿಯ ಬಾಬಾ ಬುಡನ್ ದರ್ಗಾಕ್ಕೆ ಹೋಗಿ ಮಾಡಬಹುದು. ಇದಕ್ಕೆ ನಮ್ಮ ಆಕ್ಷೇಪವಿಲ್ಲ. ಈ ವ್ಯಕ್ತಿಗಳು ಮುಜರಾಯಿ ಅಧಿಕಾರಿಗಳ ಜೂತೆ ಏರು ದನಿಯಲ್ಲಿ ಮಾತನಾಡಿದ್ದು ಇದು ತಪ್ಪು. ಈ ವ್ಯಕ್ತಿಗಳು ದತ್ತಪೀಠ ಎಲ್ಲಿದೆ ಹಾಗೂ ಬಾಬಾ ಬುಡನ್ ದರ್ಗಾ ಎಲ್ಲಿದೆ ಎಂಬುದನ್ನು ತಾಲೂಕು ಕಚೇರಿ ಮತ್ತು ಜಿಲ್ಲಾಧಿಕಾರಿಗಳಲ್ಲಿ ಹೋಗಿ ಕೇಳಿದರೆ ಅದರ ಬಗ್ಗೆ ಸೂಕ್ತ ಮಾಹಿತಿ ಮುಕ್ತವಾಗಿ ಪಡೆಯಬಹುದಾಗಿದೆ ಎಂದರು.
ಆದರೆ ಮುಸಲ್ಮಾನರು ಹೇಳುತ್ತಿರುವ ಹಾಗೆ ದಾದಾ ಹಯಾತ್ ಮೀರ್ ಖಲಂದರ್ ಮತ್ತು ಮಾಮಾಜುಗ್ನಿಯವರ ಸಮಾಧಿಗಳು ಎಂದು ಹೇಳುತ್ತಿದ್ದು ಅದು ಸತ್ಯಕ್ಕೆ ದೂರವಾಗಿರುತ್ತದೆ. ಏಕೆಂದರೆ ದಾದಾ ಹಯಾತ್ ಮೀರ್ ಖಲಂದರ್ ಅವರ ಮತ್ತು ಮಾಮ ಜುಗ್ನಿಯವರ ಸಮಾಧಿಗಳು ದತ್ತಪೀಠದಲ್ಲಿರದೆ ಬೇರೆ ಬೇರೆ ಕಡೆ ಇರುತ್ತದೆ ಎಂದು ತಿಳಿಸಿದರು.
ದಾದಾ ಹಯಾತ್ ಖಲಂದರ್ ಅವರು ಕೆಲವು ದಿನಗಳು ಮಾತ್ರ ದತ್ತಪೀಠದಲ್ಲಿದ್ದು ನಂತರ ಸಂಚಾರ ಹೊರಟು ಅವರ ಕೊನೆಗಾಲದಲ್ಲಿ ಮಹಾರಾಷ್ಟçದ ವಾಶೀಂ ಜಿಲ್ಲೆಯ ಲಾವಾನ ಎಂಬ ಊರಿನ ಪಕ್ಕದ ಊರಾದ ಮಂಗ್ರೂಲ್ ಪೀರ್ ಎಂಬಲ್ಲಿದ್ದು ಅಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಅಲ್ಲಿಯೇ ಅವರ ಸಮಾಧಿಯಿರುತ್ತದೆ. ಅದೇ ರೀತಿ ಮಾಮಾಜುಗ್ನಿ ಅವರ ಸಮಾಧಿಯು ತಮಿಳುನಾಡಿನ ತಿರುಚನಾಪಲ್ಲಿಯಲ್ಲಿರುತ್ತದೆ. ಆದ್ದರಿಂದ ಈ ವ್ಯಕ್ತಿಗಳು ಅಲ್ಲಿಗೆ ಹೋಗಿ ಯಾವುದೇ ರೀತಿಯ ಫಾತೇಹ ಹಾಗೂ ಪೂಜಾ ವಿಧಿ ವಿಧಾನಗಳನ್ನು ಮಾಡಲಿ ಎಂದರು.
ಕೋಮು ಪ್ರಚೋದನೆಗೆ ಅವಕಾಶ ಮಾಡಿ ಕೊಡುತ್ತಿರುವ ಇಂಥ ಬೇಜವಾಬ್ದಾರಿ ಮೇಲ್ಕಂಡ ಅಧಿಕಾರಿ ಹಾಗು ಅವರ ತಂಡದ ಮೇಲೆ ತಕ್ಷಣವೇ ಕಾನೂನು ಕ್ರಮ ಕೈಗೊಳ್ಳುವಂತೆ ಸಂಭAದಪಟ್ಟ ಅಧಿಕಾರಿಗಳು ಹಾಗು ರಾಜ್ಯಸರ್ಕಾರ ಇವರ ಮೇಲೆ ಕಾನೂನು ಕ್ರಮ ಜರಗಿಸಿ ನಮ್ಮ ದರ್ಗಾ ಸಂಸ್ಥೆಯಿAದ ವರ್ಗಾವಣೆ ಮಾಡಿ ಬೇರೆ ದೇವಸ್ಥಾನದ ಸಂಸ್ಥೆಗೆ ಕಳುಹಿಸಬೇಕು ಎಂದು ಆಗ್ರಹಿಸಿದರು.
ಅಲ್ಲಿ ಹೋಗಿ ಅವರು ಅವರ ಇಚ್ಛೆಯಂತೆ ವಿಧಿವಿಧಾನಗಳನ್ನು ಜಾರಿಗೆ ತರಬಹುದು ನಮಗೆ ಏನು ಅಭ್ಯಂತರವಿಲ್ಲ ಮತ್ತು ನಮ್ಮ ದರ್ಗಾ ಸಂಸ್ಥೆ ಆಚರಣೆಗಳನ್ನು ನಿರ್ವಹಿಸಲು ಹಿಂದಿನAತೆ ಶಾಖಾದ್ರಿಗಳ ಸಮಿತಿಯನ್ನು ರಚನೆ ಮಾಡಲಿ. ಇಲ್ಲವಾದರೆ ಕೋರ್ಟ್ ನ ತೀರ್ಮಾನ ಬರುವವರೆಗೆ ಜಾತ್ಯತೀತ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಜಾತ್ಯತೀತ ಸಮಿತಿಯನ್ನು ತಕ್ಷಣವೇ ರಚನೆ ಮಾಡಬೇಕು ಎಂದು ರಾಜ್ಯಸರ್ಕಾರಕ್ಕೆ ಒತ್ತಾಯಿಸುತ್ತೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿಎಚ್‌ಪಿ ಬಜರಂಗದಳದ ಉಪಾಧ್ಯಕ್ಷ ಯೋಗೀಶ್ ರಾಜ್ ಅರಸ್, ಶಿವಣ್ಣ ಕುಪ್ಪೇನಹಳ್ಳಿ, ಅಮಿತ್, ಪಾಪಣ್ಣ ಉಪಸ್ಥಿತರಿದ್ದರು.