ಚಿಕ್ಕಮಗಳೂರಿನ ಆಜಾದ್‌ಪಾರ್ಕ್ ವೃತ್ತದಲ್ಲಿ ಶುಕ್ರವಾರ ರಾತ್ರಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಆಯೋಜಿಸಿದ್ದ ೨೫ನೇ ವರ್ಷದ ದತ್ತಜಯಂತಿ ಶೋಭಾಯಾತ್ರೆಯ ಧಾರ್ಮಿಕ ಸಭೆಯನ್ನು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಪೀಠಾಧಿಪತಿ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ, ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಸಿದರು. ಚಕ್ರವರ್ತಿ ಸೂಲಿಬೆಲೆ, ಪ್ರಭಂಜನ್ ಸೂರ್ಯ, ಶ್ರೀಕಾಂತ್ ಪೈ ಮತ್ತಿತರರಿದ್ದರು. 
ಜಿಲ್ಲೆ

ದತ್ತಪೀಠದ ಮುಕ್ತಿಗಾಗಿ ಒಂದಾಗಿರುವುದು ಶ್ಲಾಘನೀಯ

ಚಿಕ್ಕಮಗಳೂರು: ಹಲವು ದೇವರುಗಳನ್ನು ಪೂಜಿಸುವವರು ಇದ್ದರೂ ಸಹ ದತ್ತಪೀಠದ ಮುಕ್ತಿಗೆ ತಮ್ಮ ವೈರುಧ್ಯಗಳನ್ನು ಬದಿಗಿಟ್ಟು ಒಗ್ಗಟ್ಟಾಗಿರುವುದು ಶ್ಲಾಘನೀಯ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.

ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಶುಕ್ರವಾರ ರಾತ್ರಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಆಯೋಜಿಸಿದ್ದ ೨೫ನೇ ವರ್ಷದ ದತ್ತಜಯಂತಿ ಶೋಭಾಯಾತ್ರೆಯ ಧಾರ್ಮಿಕ ಸಭೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಶೋಭಾಯಾತ್ರೆಯಲ್ಲಿ ಸೇರಿದ್ದ ಹಿಂದೂ ಯುವಕ ಯುವತಿಯರು ಈ ಕಾರ್ಯಕ್ರಮ ಮುಗಿದ ನಂತರವೂ ತಮ್ಮ ಒಗ್ಗಟ್ಟನ್ನು ಜೀವಂತಾಗಿಟ್ಟುಕೊಳ್ಳಬೇಕು. ಹಿಂದೂ ಎಂದರೇ ನಾಚಿಕೆ ಪಡುವ ಸಂಸ್ಕೃತಿಯಿAದ ಮೈಕೊಡವಿ ನಾನೊಬ್ಬ ಹಿಂದೂ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಂತಾಗಬೇಕು ಎಂದರು.

ಅನೇಕ ಧರ್ಮಗಳು ಪ್ರಾಣಿಗಳನ್ನು ಕಡಿದು ರಕ್ತದ ಒಕುಳಿಯನ್ನು ಹರಿಸಿ ಹಬ್ಬ ಆಚರಿಸಿದರೇ ಹಿಂದೂ ಧರ್ಮದವರು ಹೋಳಿ ಎರಚಿ ಸಂಭ್ರಮಿಸಿ, ವಸುದೈವಕುಟುಬಕಂ ಎಂದು ಭೋದಿಸಿದ ಹಿಂದೂ ಧರ್ಮದಲ್ಲಿ ಹುಟ್ಟಿರುವುದಕ್ಕೆ ಹೆಮ್ಮೆ ಪಡೆಬೇಕು ಎಂದು ಹೇಳಿದರು.

ಜಗತ್ತಿನ ಹಲವು ನಾಗರಿಕತೆಗಳು, ಪರಂಪರೆಗಳು ಅಳಿದುಹೋದರು ಸಹ ಹಿಂದೂ ಸಂಸ್ಕೃತಿ ಇಂದಿಗೂ ಜೀವಂತವಿದೆ. ಹಿಂದೂ ಧರ್ಮದಲ್ಲಿ ಸತ್ತನಂತರ ಪಂಚಭೂತಗಳಲ್ಲಿ ಲೀನವಾಗಿ ಪುರ್ನಜನ್ಮವಾಗಿ ಹುಟ್ಟುವ ಪವಿತ್ರ ನಂಬಿಕೆಯಿರುವ ಧರ್ಮ ನಮ್ಮದು. ಇದರ ಬಗ್ಗೆ ನಾವೆಲ್ಲರೂ ಹೆಮ್ಮೆ ಪಡೆಬೇಕಿದೆ ಎಂದರು.

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಪೀಠಾಧಿಪತಿ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಮಾತನಾಡಿ, ಭಾರತ ದೇಶ ಪಾಶ್ಯಾತ್ಯ ಸಂಸ್ಕೃತಿಯ ಗ್ರಹಣಕ್ಕೆ ಒಳಗಾಗಿ ಮೂಲ ಸಂಸ್ಕೃತಿಯನ್ನು ಮರೆಯುವ ಪರಿಸ್ಥಿತಿ ಬಂದಿರುವುದು ವಿಷಾಧನೀಯ. ಆಧುನಿಕ ಮಾಧ್ಯಮಗಳಿಂದ ಕೌಟುಂಬಿಕತೆ ಛಿದ್ರವಾಗಿ ಭಾರತೀಯತೆಯ ಗೌರವ ಹಾಳಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪಕ್ಕದ ಶತೃರಾಷ್ಟçಗಳಾದ ಪಾಕಿಸ್ತಾನ, ಚೀನಾ, ಬಾಂಗ್ಲಾದೇಶಗಳು ಶಸ್ತಾçಸ್ತçಗಳ ಮೂಲಕ ನಮ್ಮ ದೇಶವನ್ನು ಗೆಲ್ಲಲಾಗದೆ ಮಾಧಕ ವಸ್ತುಗಳ ಸಾಗಣೆ, ವಿದ್ರೋಹಿಗಳನ್ನು ದೇಶದೊಳಗೆ ನುಗ್ಗಿಸುವುದು, ಜಿಹಾದ್ ತಂತ್ರಗಳ ಮೂಲಕ ಷಡ್ಯಂತರ ರೂಪಿಸುತ್ತಿದ್ದಾರೆ. ಶತೃಗಳನ್ನು ಸಮರ್ಥವಾಗಿ ಹಿಮ್ಮೆಟ್ಟಿಸಲು ಸನಾತನ ಸಂಸ್ಕೃತಿಯಡಿ ಎಲ್ಲ ಹಿಂದೂ ಧರ್ಮಿಯರು ಒಂದಾಗಬೇಕಿದೆ ಎಂದು ಕರೆ ನೀಡಿದರು.

ಹಿಂದೂ ಸಮಾಜದ ಜಾಗೃತಿಗಾಗಿ ದತ್ತಪೀಠದಂತಹ ಅಭಿಯಾನಗಳು ದೇಶದಲ್ಲಿ ಪ್ರಮುಖಪಾತ್ರವಹಿಸಿದ್ದು, ಮುಂದಿನ ದಿನಗಳಲ್ಲಿ ಮಧುರ, ಕಾಶಿ ಸೇರಿದಂತೆ ವಿವಿಧ ಧರ್ಮಕ್ಷೇತ್ರಗಳ ರಕ್ಷಣೆಗಾಗಿ ದೇಶಾದ್ಯಂತ ಅಭಿಯಾನಗಳು ನಡೆದು ಜನಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.

ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸನಾತನ ಧರ್ಮ ಎಂಬುದು ಹುಟ್ಟಿಲ್ಲದ ಸ್ವಯಂಭೋ ಧರ್ಮವಾಗಿದೆ. ಅದಕ್ಕೆ ಎಂದಿಗೂ ಸಾವಿಲ್ಲ. ತಾವೂ ಬದುಕಿ ಇತರರಿಗೆ ಬದುಕಲು ಬಿಡುವ ಉದಾತ್ತಾ ಸಂದೇಶಗಳನ್ನು ಹೊಂದಿರುವ ಅತ್ಯಂತ ಪವಿತ್ರವಾದ ಧರ್ಮ ಹಿಂದೂ ಧರ್ಮವಾಗಿದೆ. ಅದರ ರಕ್ಷಣೆಗೆ ಹಿಂದೂ ಧರ್ಮಿಯರು ತಮ್ಮ ಭಿನ್ನತೆ ಗಳನ್ನು ಬದಿಗಿಟ್ಟು ಹೋರಾಟಕ್ಕೆ ಮುಂದಾಗಬೇಕಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಭಾರತ ದೇಶದಲ್ಲಿ ಧರ್ಮಜಾಗೃತಿ ಮೊಳಕೆಯೊಡೆಯುತ್ತಿದ್ದು, ಅದು ಹೆಮ್ಮರವಾಗಿ ಬೆಳೆದು ಹಿಂದೂ ಧರ್ಮಿಯರನ್ನು ಒಗ್ಗಟ್ಟಾಗಿಸಬೇಕಿದೆ. ಭಾರತದ ರಾಜಕಾರಣಿಗಳು ಪಕ್ಷಭೇದ ಮರೆತು ಸಂಸ್ಕೃತಿ ರಕ್ಷಣೆಗೆ ಕಟಿಬದ್ಧö್ದರಾಬೇಕಿದೆ ಎಂದರು.

ಭಜರAಗದಳದ ದಕ್ಷಿಣ ಪ್ರಾಂತ ಸಂಯೋಜಕ ಪ್ರಭಂಜನ್ ಸೂರ್ಯ ಮಾತನಾಡಿ, ವಿಶ್ವ ಹಿಂದೂ ಪರಿಷತ್, ಭಜರಂಗದಳ ನಡೆಸಿದ ಹೋರಾಟದ ಫಲವಾಗಿ ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕ, ತ್ರಿಕಾಲ ಪೂಜೆ ನಡೆಯುತ್ತಿದೆ. ನಮ್ಮ ಹೋರಾಟ ಇಲ್ಲಿಗೆ ಮುಗಿಯುವುದಿಲ್ಲ. ದತ್ತಪೀಠ ಸಂಪೂರ್ಣವಾಗಿ ಹಿಂದೂಗಳ ತಕ್ಕೆಗೆ ಬರುವವರೆಗೂ ಹೋರಾಟ ಮುಂದೂವರೆಯಲಿದೆ ಎಂದರು.

ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾ ಅಧ್ಯಕ್ಷ ಶ್ರೀಕಾಂತ್ ಪೈ, ಮುಖಂಡರಾದ ಯೋಗೀಶ್ ರಾಜ್ ಅರಸ್, ಸಿ.ಡಿ.ಶಿವಕುಮಾರ್, ಆಟೋ ಶಿವಣ್ಣ, ಅಮಿತ್ ಗೌಡ, ವಿನಯ್ ಬಣಕಲ್, ವಕೀಲ ಜಗದೀಶ್ ಬಾಳಿಗ, ಶಶಾಂಕ್ ಹೇರೂರು, ಜಗನ್ನಾಥ ಶಾಸ್ತಿç ಉಪಸ್ಥಿತರಿದ್ದರು.