ಚಿಕ್ಕಮಗಳೂರು ತಾಲೂಕಿನ ದತ್ತಪೀಠದಲ್ಲಿ ದತ್ತಜಯಂತಿ ಹಿನ್ನೆಲೆಯಲ್ಲಿ ನಡೆದ ಶ್ರೀದತ್ತಾತ್ರೇಯ ಮಹಾಮಂತ್ರ ಯಾಗದ ಪೂರ್ಣಾಹುತಿಯಲ್ಲಿ ಕಡೂರು ಯಳನಾಡು ಮಠದ ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ, ಸರ್ವಧರ್ಮ ಪೀಠದ ಶ್ರೀ ಜಯಬಸವಾನಂದ ಸ್ವಾಮೀಜಿ, ಬೀರೂರು ರಂಭಾಪುರಿ ಶಾಖಾಮಠದ ಶ್ರೀ ರುದ್ರಮುನಿ ಸ್ವಾಮೀಜಿ, ಹುಣಸಘಟ್ಟದ ಹಾಲಸ್ವಾಮಿ ಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಎಂಎಲ್‌ಸಿ ಸಿ.ಟಿ.ರವಿ, ಶ್ರೀರಾಮಸೇನೆ ರಾಷ್ಟಿçÃಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಭಾಗಿಯಾಗಿದ್ದರು. 
ಜಿಲ್ಲೆ

ದತ್ತಜಯಂತಿಗೆ ವೈಭವದ ತೆರೆ

ಚಿಕ್ಕಮಗಳೂರು: ಎಲ್ಲೆಲ್ಲೂ ಮೊಳಗುತ್ತಿದ್ದ ಶ್ರೀರಾಮ, ಆಂಜನೇಯನ ಜಪ. ಕೇಸರಿ ಶಲ್ಯ ಧರಿಸಿ ಇರುಮುಡಿ ಹೊತ್ತು ದತ್ತಪೀಠಕ್ಕೆ ತೆರಳಿ ಸರದಿ ಸಾಲಿನಲ್ಲಿ ದತ್ತಪಾದುಕೆ ದರ್ಶನ ಪಡೆಯುತ್ತಿದ್ದ ದತ್ತಮಾಲಾಧಾರಿಗಳು. ಇದು ದತ್ತಪೀಠದಲ್ಲಿ ದತ್ತಜಯಂತಿಯ ಕೊನೆಯ ದಿನ ಕಂಡು ಬಂದ ಮನಮೋಹಕ ದೃಶ್ಯಗಳು.

ಚಂದ್ರದ್ರೋಣ ಪರ್ವತದ ತಪ್ಪಲಿನಲ್ಲಿರುವ ಶ್ರೀಗುರು ದತ್ತಾತ್ರೇಯ ಪೀಠದಲ್ಲಿ ದತ್ತ ಜಯಂತಿ ಕಾರ್ಯಕ್ರಮಕ್ಕೆ ಶನಿವಾರ ಅದ್ಧೂರಿ ತೆರೆ ಬಿದ್ದಿದೆ. ೧೨ ಸಾವಿರಕ್ಕೂ ಹೆಚ್ಚು ದತ್ತಮಾಲಾಧಾರಿಗಳು ದತ್ತಪೀಠಕ್ಕೆ ತೆರಳಿ ದತ್ತಪಾದುಕೆ ದರ್ಶನ ಪಡೆದು ಧನ್ಯರಾದರು.

ದತ್ತಜಯಂತಿ ಅಂಗವಾಗಿ ಇಡೀ ದತ್ತಪೀಠದ ಆವರಣ ಕೇಸರಿಮಯವಾಗಿತ್ತು. ಎಲ್ಲೆಡೆಯೂ ಕೇಸರಿ ಧ್ವಜಗಳು ಹಾಗೂ ಭಾಗವಧ್ವಜಗಳು ರಾರಾಜಿಸುತ್ತಿದ್ದವು. ಇನ್ನು ದತ್ತ ಭಕ್ತರ ಘೋಷಣೆಗಳು ಎಲ್ಲೆಡೆಯೂ ಮಾರ್ಧನಿಸುತ್ತಿದ್ದವು. ದತ್ತಪಾದುಕೆ ದರ್ಶನ ಪಡೆದ ಭಕ್ತರು ಪ್ರಸಾದ ಸ್ವೀಕರಿಸಿ ತೆರಳುತ್ತಿದ್ದ ದೃಷ್ಯ ಸಾಮಾನ್ಯವಾಗಿತ್ತು.

ಬೆಳಗ್ಗೆ ಆರು ಗಂಟೆಯಿAದಲೇ ದತ್ತಮಾಲಾಧಾರಿಗಳು ದತ್ತಪೀಠಕ್ಕೆ ತೆರಳಿ ದತ್ತಪಾದುಕೆ ದರ್ಶನ ಪಡೆಯಲಾರಂಭಿಸಿದರು. ಆದರೆ ಬೆಳಗ್ಗೆ ೧೧.೩೦ರವರಗೆ ದತ್ತಪೀಠಕ್ಕೆ ಆಗಮಿಸುತ್ತಿದ್ದ ಭಕ್ತರ ಸಂಖ್ಯೆ ಕಡಿಮೆಯಿತ್ತು. ಆದರೆ ೧೨ ಗಂಟೆ ಬಳಿಕ ದತ್ತಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದಾಗಿ ಒಂದು ಕಿಲೋಮೀಟರ್‌ವರೆಗೂ ಸರದಿ ಸಾಲು ಕಂಡು ಬಂದಿತು.

ಜೈಬಜರAಗಿ, ಜೈಶ್ರೀರಾಮ್ ಎಂಬ ಘೋಷಣೆ ಕೂಗುತ್ತಾ ಸರದಿಯ ಸಾಲಿನಲ್ಲಿ ತೆರಳಿದ ಭಕ್ತರು ಗುಹೆಯೊಳಗೆ ತೆರಳಿ ದತ್ತಾತ್ರೇಯರ ಪಾದುಕೆಗಳಿಗೆ ನಮಸ್ಕರಿಸಿ, ಹಿಂದಿರುಗಿ ಅನಸೂಯ ಗದ್ದುಗೆಗೆ ನಮಸ್ಕರಿಸಿ ತೀರ್ಥಪ್ರಸಾದ ಪಡೆದು ಹೊರಗಡೆ ಬರುವಾಗ ಮಧ್ಯದಲ್ಲಿ ದತ್ತಾತ್ರೇಯರ ಪ್ರಸಾದವನ್ನು ಸ್ವೀಕರಿಸಿದರು.