ಜಿಲ್ಲೆ

ದಕ್ಷಿಣದಲ್ಲಿ ಯಾತ್ರೆಗೆ ಭವ್ಯ ಸ್ವಾಗತ

ಬೀದರ್: ಹಳ್ಳಿಗಳಿಂದ ಕೂಡಿದ ಬೀದರ್ ದಕ್ಷಿಣದಲ್ಲಿ ವಿಜಯ ಸಂಕಲ್ಪ ರಥಯಾತ್ರೆ ಅದ್ದೂರಿಯಾಗಿ ನಡೆಯಿತು. ಕಮಠಾಣ ಹತ್ತಿರದ ಪಶು ವೈದ್ಯಕೀಯ ವಿವಿ ಬಳಿ ಕೆಎಸ್ಐಐಡಿಸಿ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ ನೇತೃತ್ವದಲ್ಲಿ ಸ್ಥಳೀಯ ಮುಖಂಡರು, ಕಾರ್ಯಕರ್ತರು ಯಾತ್ರೆಗೆ ಜೆಸಿಬಿ ಮೂಲಕ ಹೂವಿನ ಸುರಿಮಳೆಗೈದು ಕ್ಷೇತ್ರಕ್ಕೆ ಸ್ವಾಗತಿಸಿದರು. ಕಮಠಾಣದಲ್ಲಿ ಬೃಹತ್ ಹಾರವನ್ನು ಕ್ರೇನ್ ಮೂಲಕ ಹಾಕಿ, ಪುಷ್ಪಾರ್ಚನೆ ಮಾಡಿ ಜೈಕಾರ ಮೊಳಗಿಸಿದರು. ಅಲ್ಲಿಂದ ಕಾಡವಾದ, ಬಗದಲ್ ತಾಂಡಾ, ಬಗದಲ್ ಮೂಲಕ ಮನ್ನಾಎಖೇಳ್ಳಿಯಲ್ಲಿ ರೋಡ್ ಶೋ ನಡೆಸಲಾಯಿತು. ಚಾಂಗಲೇರ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆಯಲಾಯಿತು. ನಂತರ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿಗೆ ಯಾತ್ರೆ ತೆರಳಿತು. ಎಲ್ಲೆಡೆ ಕಾರ್ಯಕರ್ತರು ಅದ್ದೂರಿ ಸ್ವಾಗತ ನೀಡಿ ಬರಮಾಡಿಕೊಂಡರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಾನಾ ಕಡೆ ಜೆಸಿಬಿ ಮೂಲಕ ಪುಷ್ಪಾರ್ಚನೆ ಮಾಡಲಾಯಿತು. ದಕ್ಷಿಣ ಮಂಡಲ ಅಧ್ಯಕ್ಷ ರಾಜರಡ್ಡಿ ಶಾಬಾದ್, ಪ್ರಮುಖರಾದ ಜಗನ್ನಾಥ ಪಾಟೀಲ್ ಸಿರಕಟನಳ್ಳಿ, ಸುರೇಶ ಮಾಶೆಟ್ಟಿ, ಕುಶಾಲ ಯಾಬಾ, ಸಂತೋಷ ಜಗದಾಳೆ ಇತರರಿದ್ದರು.

ಹಲವರು ಬಿಜೆಪಿ ಸೇರ್ಪಡೆ

ದಕ್ಷಿಣ ಕ್ಷೇತ್ರದ ಯಾತ್ರೆಯಲ್ಲಿ ಕಾಂಗ್ರೆಸ್, ಜೆಡಿಎಸ್ ತೊರೆದು ಹಲವರು ಬಿಜೆಪಿ ಸೇರಿದರು. ನಾಗಭೂಷಣ ಕಮಠಾಣ, ಅಶೋಕ ಪಾಟೀಲ್ ಸಂಗೊಳಗಿ, ಹಣಮಂತರಾಯ ಮೈಲಾರಿ, ವೈಜಿನಾಥ ಕಾಡವಾದೆ, ವೀರಶೆಟ್ಟಿ ಚಿಟಗುಪ್ಪ, ಬಸವರಾಜ ಕ್ಯಾಸಾ, ಸಿದ್ದು ನಾಗಭೂಷಣ, ಮಲ್ಲಿಕಾರ್ಜುನ ಪಾಟೀಲ್ ಸೇರಿ 300ಕ್ಕೂ ಅಕ ಜನ ಬಿಜೆಪಿಗೆ ಜೈ ಎಂದರು. ಮಾಜಿ ಸಿಎಂ ಜಗದೀಶ ಶೆಟ್ಟಿರ್, ಡಾ.ಶೈಲೇಂದ್ರ ಬೆಲ್ದಾಳೆ ಅವರು ಪಕ್ಷದ ಧ್ವಜ ನೀಡಿ ಬರಮಾಡಿಕೊಂಡರು.