ಜಿಲ್ಲೆ

ದಕ್ಷ ಪಿ.ಯು. ಕಾಲೇಜಿನಲ್ಲಿ ನಾಟಕ

ಮೈಸೂರು: ಅದಮ್ಯ ರಂಗಶಾಲೆ, ದಕ್ಷ ಪಿ.ಯು. ಕಾಲೇಜು ಹಾಗೂ ಸ್ಪಂದನ ಸಾಂಸ್ಕೃತಿಕ ಪರಿಷತ್‌ನಿಂದ ಫೆ.14ರಂದು ನಗರದ ಹೂಟಗಳ್ಳಿಯ ದಕ್ಷ ಪಿ.ಯು. ಕಾಲೇಜಿನಲ್ಲಿ ಪಿಯು ಪಠ್ಯಾಧಾರಿತ ನಾಟಕ ಪ್ರದರ್ಶನವಿದೆ ಎಂದು ಅದಮ್ಯ ರಂಗಶಾಲೆಯ ಕಾರ್ಯದರ್ಶಿ ಚಂದ್ರು ಮಂಡ್ಯ ತಿಳಿಸಿದ್ದಾರೆ.
ಪ್ರಥಮ ಮತ್ತು ದ್ವಿತೀಯ ಪಿಯುಸಿ ಪಠ್ಯವಾಗಿರುವ ಡಾ.ಬೆಸಗರಹಳ್ಳಿ ರಾಮಣ್ಣ, ಪಿ.ಲಂಕೇಶ್, ಡಾ.ವೀಣಾ ಶಾಂತೇಶ್ವರ ಹಾಗೂ ಡಾ.ಎಚ್.ನಾಗವೇಣಿ ಅವರ ನಾಲ್ಕು ಕತೆಗಳ ರಂಗರೂಪ ಪ್ರದರ್ಶನ ನಡೆಯಲಿದೆ. ಅಂದು ಸಂಜೆ 5.30ಕ್ಕೆ ಪ್ರಾದೇಶಿಕ ಹೆಚ್ಚುವರಿ ಆಯುಕ್ತ ಪಿ. ಶಿವರಾಜು ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದು, ದಕ್ಷ ಪಿ.ಯು. ಕಾಲೇಜಿನ ಅಧ್ಯಕ್ಷ ಡಾ.ಪಿ. ಜಯಚಂದ್ರರಾಜು ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದ್ದಾರೆ.
ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಟಿ. ಸತೀಸ್ ಜವರೇಗೌಡ ಆಶಯ ನುಡಿಗಳನ್ನಾಡುವರು. ಸಹಾಯಕ ಪೊಲೀಸ್ ಆಯುಕ್ತ ಜಿ.ಎಸ್. ಗಜೇಂದ್ರ ಪ್ರಸಾದ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜೆ. ಗೋವಿಂದರಾಜು, ದಕ್ಷ ಪಿಯು ಕಾಲೇಜಿನ ಪ್ರಾಂಶುಪಾಲ ಎಂ. ಅಭಿಷೇಕ್ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.