ಮಂಗಳೂರು: ಆಳ ಸಮುದ್ರ ಮೀನುಗಾರಿಕೆ ಮುಗಿಸಿ ದಕ್ಕೆಗೆ ಬಂದ ಮೀನುಗಾರರಿಗೆ ಹೇರಳ ಪ್ರಮಾಣದಲ್ಲಿ ಕಪ್ಪು, ಬಿಳಿ ಬಣ್ಣ ಹಾಗೂ ದೇಹದಲ್ಲಿ ಮುಳ್ಳುಗಳಿಂದ ಕೂಡಿದ ಮೀನು ಲಭ್ಯವಾಗಿದೆ. ಇದಕ್ಕೆ ಸ್ಥಳೀಯರು ಕರೊನಾ ಮೀನು ಎಂದು ಹೆಸರಿಸಿ ವಿಡಿಯೋ ಮಾಡಿ ಹರಿಯಬಿಟ್ಟಿದ್ದಾರೆ.
ಈ ಮೀನು ಸಿಗುವುದು ಹೊಸತಲ್ಲ.
ಆಗಾಗ ಬಹಳಷ್ಟು ಪ್ರಮಾಣದಲ್ಲಿ ಸಿಗುತ್ತವೆ. ಅದನ್ನು ತಿನ್ನಲು ಉಪಯೋಗಿಸುವುದಿಲ್ಲ. ನಾಯಿ, ಬೆಕ್ಕುಗಳ ಆಹಾರ ತಯಾರಿಕೆಗೆ ಬಳಸುತ್ತಾರೆ. ಕರೊನಾ ವ್ಯಾಪಕವಾಗಿ ಹರಡುತ್ತಿರುವ ಈ ಅವಧಿಯಲ್ಲಿ ಇದನ್ನು ವಿಡಿಯೋ ಮಾಡಿರುವ ಸಾಧ್ಯತೆ ಇದೆ ಎಂದು ಮೀನುಗಾರ ಮಜೀದ್ ಬಂದರ್ ತಿಳಿಸಿದ್ದಾರೆ.