ಬೀದರ್: ಗ್ರಾಪಂ ಚುನಾವಣೆ ಫಲಿತಾಂಶ ನಂತರ ಹಲವು ರೋಚಕ ಸಂಗತಿಗಳು ಹೊರಬಿದ್ದಿವೆ. ಒಂದೆಡೆ ಪತಿ, ಪತ್ನಿ ಗೆಲುವಿನ ನಗೆ ಬೀರಿದರೆ, ಇನ್ನೊಂದೆಡೆ ಇಬ್ಬರೂ ಸೋಲುಂಡು ಮಂಕಾಗಿದ್ದಾರೆ. ಬೀದರ್ ತಾಲೂಕಿನ ಬರೂರ್ ಗ್ರಾಮದ ವಾಡ್೯ 3ರಲ್ಲಿ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪತಿ ಎಂ.ಡಿ.ಬಾಬಾ ಹಾಗೂ ಇದೇ ವಾಡ್೯ನಲ್ಲಿ ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಪತ್ನಿ ಮಿಸ್ಬಾರೊಹಿ ಗೆಲುವು ಸಾಧಿಸಿದ್ದಾರೆ. ಜನವಾಡಾ ಗ್ರಾಮದಲ್ಲಿ ಪತಿ, ಪತ್ನಿ ಇಬ್ಬರೂ ಪರಾಭವಗೊಂಡಿದ್ದಾರೆ. ವಾಡ್೯ 6ರಲ್ಲಿ ಎಸ್ಸಿ ಮಹಿಳಾ ಮೀಸಲು ಕ್ಷೇತ್ರದಿಂದ ಹಿಂದಿನ ಅಧ್ಯಕ್ಷೆಯಾಗಿದ್ದ ಜೈಶ್ರೀ ಹಾಗೂ ವಾಡ್೯ 5ರಲ್ಲಿ ನಿಂತಿದ್ದ ಪತಿ ಪ್ರಕಾಶ ಸೋತಿದ್ದಾರೆ.