ಜಿಲ್ಲೆ

ದಂಪತಿ ಹತ್ಯೆ,ಇಬ್ಬರ ಬಂಧನ

ಚಿತ್ರದುರ್ಗ:ಚಿತ್ರದುರ್ಗ ತಾಲೂಕು ಬೊಮ್ಮಕ್ಕನಹಳ್ಳಿಯಲ್ಲಿ ಗುರುವಾರ ಸಂಜೆ ನಡೆದಿದ್ದ ದಂಪತಿ ಕೊಲೆ ಆರೋಪಿತರ ಪೈಕಿ,ಮಲ್ಲಿಕಾ ರ್ಜುನ್ ಮತ್ತು ರಘುರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ಮಂಜುನಾಥ್ ಸೇರಿದಂತೆ ಇತರೆ ಆರೋಪಿತರ ಪತ್ತೆ ಕಾರ‌್ಯ ಮುಂದು ವರಿದಿದೆ ಎಂದು ಎಸ್‌ಪಿ ರಂಜಿತ್‌ಕುಮಾರ್‌ಬಂಡಾರು ತಿಳಿಸಿದ್ದಾರೆ. ಗ್ರಾಮದ ಹನುಮಂತಪ್ಪ(48)ಹಾಗೂ ಅವರ ಪತ್ನಿ ತಿಪ್ಪಮ್ಮ(45)ರನ್ನು ಅವರ ಜಮೀನಿನಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ತುರುವನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.