ಜಿಲ್ಲೆ

ದಂಪತಿ ಕೊಲೆ ಐವರ ಬಂಧನ

ಕಲಬುರಗಿ: ಶುಕ್ರವಾರ ಮಧ್ಯರಾತ್ರಿ ಕಮಲಾಪುರ ತಾಲೂಕಿನ ದಿನಸಿ(ಕೆ) ತಾಂಡಾದ ಮನೆಯಂಗಳದಲ್ಲಿ ನಡೆದಿದ್ದ ದಂಪತಿ ಮಾರುತಿ ಜಾಧವ್ (42) ಮತ್ತು ಶಾರದಾಬಾಯಿ (35) ಕೊಲೆ ಪ್ರಕರಣವನ್ನು 48 ಗಂಟೆಗಳಲ್ಲಿ ಭೇದಿಸಿದ ಪೊಲೀಸರು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮುಖ್ಯ ಆರೋಪಿ ಮಹೇಶ ಸೇರಿ ಟೋಬು ಅಲಿಯಾಸ್ ಸದಾಶಿವ ರಾಠೋಡ್, ಸಂತೋಷ ರಾಠೋಡ್, ರವಿ ರಾಠೋಡ್, ಯೇಸು ರಾಠೋಡ್ ಎಂಬುವರನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿಮಿ ಮರಿಯಮ್ ಜಾಜರ್್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೊಲೆಗೀಡಾದ ದಂಪತಿ ಮಗಳಿಗೆ ಟೋಬು ಮತ್ತು ಮಹೇಶ ಚುಡಾಯಿಸಿದ್ದರಿಂದ ಮಾರುತಿ ದೂರು ನೀಡಿದ್ದ. ಮಹೇಶ ಆಕೆಯನ್ನು ಪ್ರೀತಿಸುತ್ತಿದ್ದ. ಮದುವೆ ವಿಷಯದಲ್ಲಿ ಭಿನ್ನಾಭಿಪ್ರಾಯ ಮೂಡಿದಾಗ ಪೋಕ್ಸೋ ಅಯಡಿ ಅತ್ಯಾಚಾರ ಕೇಸ್ ದಾಖಲಾಗಿತ್ತು. ತಿರುಗಿ ಬಿದ್ದಿರುವ ಪ್ರೀತಿಸಿದಾಕೆಯನ್ನು ಮುಗಿಸಲು ಮಹೇಶ ಹೊಂಚು ಹಾಕಿದ್ದ ಎನ್ನಲಾಗಿದೆ.
ಗ್ರಾಮೀಣ ಸಿಪಿಐ ಶಂಕರಗೌಡ ಪಾಟೀಲ್ ನೇತೃತ್ವದ ತಂಡದಲ್ಲಿರುವ ಪಿಎಸ್ಐಗಳಾದ ಭೀಮರಾಯ ಪಾಟೀಲ್, ಹುಸೇನ್ ಬಾಷಾ, ಕಮಲಾಪುರ ಮತ್ತು ಮಹಾಗಾಂವ ಠಾಣೆ ಸಿಬ್ಬಂದಿ ಕುಪೇಂದ್ರ, ರಾಜೇಂದ್ರಕುಮಾರ ರಡ್ಡಿ, ಕಿಶನ್ ಜಾಧವ್, ಗುರುನಾಥ ರಡ್ಡಿ, ಶರಣಬಸಪ್ಪ, ರಮೇಶ, ರಾಜಶೇಖರ, ಅಶೋಕ ಕಾಯರ್ಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ತಂಡದ ಕಾರ್ಯವನ್ನು ಎಸ್ಪಿ ಡಾ.ಜಾಜರ್್ ಶ್ಲಾಘಿಸಿದರು. ಬಂಧಿತರನ್ನು ವಿಚಾರಣೆ ನಡೆಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಕಮಲಾಪುರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ದಿನಸಿ ತಾಂಡಾದಲ್ಲಿ ನಡೆದಿದ್ದ ಜೋಡಿ ಕೊಲೆಗೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಸೇರಿ ಐವರನ್ನು ಬಂಧಿಸಲಾಗಿದೆ. ಘಟನೆ ನಡೆದ 48 ಗಂಟೆಗಳಲ್ಲಿ ಪೊಲೀಸರು ಕಾಯರ್ಾಚರಣೆ ನಡೆಸಿದ್ದಾರೆ.
| ಡಾ.ಸಿಮಿ ಮರಿಯಮ್ ಜಾರ್ಜ್​
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ