ವಿರಾಜಪೇಟೆ: ಮಗ್ಗುಲದ ಲಿಟರ್ ಸ್ಕಾಲರ್ಸ್ ಅಕಾಡೆಮಿ ಶಾಲಾ ವತಿಯಿಂದ ಸೋಮವಾರ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಉಚಿತ ದಂತ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
ವಿರಾಜಪೇಟೆ ದಂತ ವೈದ್ಯಕೀಯ ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ. ಜಿತೇಶ್‌ಜೈನ್ ನೇತೃತ್ವದ ತಂಡ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಲಿಟರ್ ಸ್ಕಾಲರ್ಸ್ ಅಕಾಡೆಮಿಯ 70 ವಿದ್ಯಾರ್ಥಿಗಳು, ನಿರ್ಮಲ ರಮಣ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಲಿಟರ್ ಸ್ಕಾಲರ್ಸ್ ಅಕಾಡೆಮಿ ಸಂಸ್ಥೆ ಅಧ್ಯಕ್ಷೆ ಪೂಜಾ ಸಜೀ, ಕಾರ್ಯದರ್ಶಿ ಪ್ರತಿಮಾ ರಂಜಾನ್, ಮುಖ್ಯ ಶಿಕ್ಷಕಿ ಮಿರಾ ಪೂಣಚ್ಚ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.