ಜಿಲ್ಲೆ

ದಂಡಗುಂಡ ಬಸವಣ್ಣ ಮಹಾರಾಜ್ ಕಿ ಜೈ

ಚಿತ್ತಾಪುರ: ಶ್ರಾವಣ ನಡುವಿನ ಸೋಮವಾರ ನಿಮಿತ್ತ ದಂಡಗುAಡದಲ್ಲಿ ಅಸಂಖ್ಯಾತ ಭಕ್ತರ ಜೈಘೋಷದ ಮಧ್ಯೆ ವೈಭವದಿಂದ ಮಹಾಮಹಿಮಾಶಾಲಿ ಶ್ರೀ ಬಸವಣ್ಣನ ರಥೋತ್ಸವ ನೆರವೇರಿತು.

ಬೆಳಗ್ಗೆ ಶ್ರೀ ಬಸವಣ್ಣನಿಗೆ ವಿಶೇಷ ಪೂಜೆ, ಅಭಿಷೇಕ, ಸಹಸ್ರ ಬಿಲ್ವಾರ್ಚನೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಗ್ರಾಮ ಸೇರಿ ವಿವಿಧ ಹಳ್ಳಿಗಳ ಅಪಾರ ಭಕ್ತರು ಪಾದಯಾತ್ರೆ ಮೂಲಕ ದೇವಸ್ಥಾನಕ್ಕೆ ಆಗಮಿಸಿ ಬಸವಣ್ಣನಿಗೆ ನೈವೇದ್ಯ ಸಮರ್ಪಿಸಿದರು. ಇನ್ನು ನಸುಕಿನ ಜಾವದಿಂದಲೇ ಜನರು ದೇವರ ದರ್ಶನಕ್ಕಾಗಿ ಸರದಿ ಸಾಲಿನಲ್ಲಿ ನಿಂತಿದ್ದರು. ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಪಲ್ಲಕ್ಕಿ ಉತ್ಸವ ನಡೆಯಿತು.
ಸಂಜೆ ಗ್ರಾಮದ ಪ್ರಮುಖರ ಮನೆಯಿಂದ ಕುಂಭ, ಕಳಸ ಮೆರವಣಿಗೆ ಮೂಲಕ ದೇಗುಲಕ್ಕೆ ಆಗಮಿಸಿದವು. ಬಳಿಕ ದೇವಸ್ಥಾನದ ಆವರಣದಲ್ಲಿ ಪೂಜ್ಯರು ಹಾಗೂ ಪ್ರಮುಖರ ಸಾನ್ನಿಧ್ಯದಲ್ಲಿ ಭವ್ಯ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಅಪಾರ ಭಕ್ತರು ಜೈಘೋಷಗಳೊಂದಿಗೆ ರಥವನ್ನು ಎಳೆದು ಪುನೀತರಾದರು. ದಂಡಗುAಡ ಬಸವಣ್ಣ ಮಹಾರಾಜ್ ಕಿ ಜೈ.. ಬಸವಣ್ಣನಿಗೆ ಜಯವಾಗಲಿ.. ಜೈ ಜೈ ಬಸವ ಸೇರಿ ವಿವಿಧ ಘೋಷಗಳು ಮೊಳಗಿದವು. ಜನರು ಬಾಳೆಹಣ್ಣು, ಉತ್ತತ್ತಿ(ಕಾರಿಕ), ನಾಣ್ಯಗಳನ್ನು ರಥಕ್ಕೆ ಎಸೆದು ಭಕ್ತಿ ಸಮರ್ಪಿಸಿದರು. ರಥೋತ್ಸವದ ಉದ್ದಕ್ಕೂ ಬಾಜಾ-ಭಜಂತ್ರಿ, ಡೊಳ್ಳು ಕುಣಿತ, ಪುರವಂತರ ಆಟಗಳು, ಬಣ್ಣಬಣ್ಣದ ಕೊಡೆಗಳು, ಧರ್ಮದ ಧ್ವಜಗಳು ಗಮನಸೆಳೆದವು. ಅಳ್ಳೊಳ್ಳಿಯ 10ನೇ ತರಗತಿಯ ವಿದ್ಯಾರ್ಥಿ ವಿಜ್ಞೇಶ ಎಂಬಾತ ತನ್ನ ತಂದೆ ಕುಡಿತ ಬಿಡಬೇಕು. ನನಗೆ ಸರ್ಕಾರಿ ನೌಕರಿ ಸಿಗಬೇಕೆಂದು ಬಾಳೆಹಣ್ಣಿನ ಮೇಲೆ ಬರೆದು ತೇರಿಗೆ ಎಸೆದು ಪ್ರಾರ್ಥಿಸಿರುವುದು ವಿಶೇಷವಾಗಿತ್ತು.

ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಬಿಜೆಪಿ ಕಲಬುರಗಿ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್, ದೇವಸ್ಥಾನ ಸಮಿತಿ ಅಧ್ಯP್ಷÀ ಭಾಗಣ್ಣಗೌಡ ಸಂಕನೂರ, ಪ್ರಮುಖರಾದ ಚಂದ್ರಶೇಖರ ಅವಂಟಿ, ಭೀಮರಾಯಗೌಡ ಚಾಮನೂರ, ಭೀಮಣ್ಣ ಸಾಲಿ, ರಾಜಶೇಖರ ಪಾಟೀಲ್ ಸಂಕನೂರ, ಬಸವರಾಜಗೌಡ ಭಾಸರೆಡ್ಡಿ, ಮಹಾಂತಗೌಡ ಪಾಟೀಲ್, ಅಜಯರೆಡ್ಡಿಗೌಡ ಸಂಕನೂರ, ಹಣಮಂತ ಸಂಕನೂರ, ನಿಂಗಣ್ಣಗೌಡ ಭೀಮನಳ್ಳಿ, ಪ್ರಸಾದ ಅವಂಟಿ, ವಿಶ್ವಾರಾಧ್ಯಗೌಡ ಕರದಾಳ, ಶಶಿಕಾಂತ ಪಾಟೀಲï ಬೆಳಗುಂಪಾ, ಶಾಂತಪ್ಪ ಚಾಳಿಕರ್ ಇತರರಿದ್ದರು. ಕರ್ನಾಟಕ ಮಾತ್ರವಲ್ಲದೆ ಆಂಧ್ರ, ಮಹಾರಾಷ್ಟç, ತಮಿಳನಾಡು ಸೇರಿ ವಿವಿಧೆಡೆಯಿಂದ ಅಪಾರ ಭಕ್ತರು ಉತ್ಸವದಲ್ಲಿ ಪಾಲ್ಗೊಂಡು ಪುನೀತರಾದರು.

ಸೂಕ್ತ ಬಂದೋಬಸ್ತ್, ಅಚ್ಚುಕಟ್ಟಾದ ಪಾರ್ಕಿಂಗ್: ಡಿವೈಎಸ್‌ಪಿ ಶಂಕರಗೌಡ ಪಾಟೀಲ್ ನೇತೃತ್ಬದಲ್ಲಿ ಸಿಪಿಐಗಳಾದ ಚಂದ್ರಶೇಖರ ತಿಗಡಿ, ನಟರಾಜ ಲಾಡೆ, ಪಿಎಸ್‌ಐಗಳಾದ ಶ್ರೀಶೈಲï ಅಂಬಾಟಿ, ಚಂದ್ರಾಮಪ್ಪ, ತಿರುಮಲೇಶ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಆರಕ್ಷಕರನ್ನು ನಿಯೋಜನೆ ಮಾಡಲಾಗಿತ್ತು. ಇದಲ್ಲದೆ ಅಚ್ಚುಕಟ್ಟಾದ ಪಾರ್ಕಿಂಗ್ ವ್ಯವಸ್ಥೆ ಗಮನಸೆಳೆಯಿತು. ದೇವಸ್ಥಾನದಿಂದ ಸುಮಾರು 1 ಕಿಮೀ ದೂರದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿತ್ತು. ಇದರಿಂದ ಸಂಚಾರ ದಟ್ಟಣೆಗೆ ಕಡಿವಾಣ ಬಿದ್ದಿತು. ಪೊಲೀಸರು ಹಾಗೂ ಟ್ರಸ್ಟ್ನವರ ಕಾರ್ಯಕ್ಕೆ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದರು.