ಜಿಲ್ಲೆ

ಥ್ರೋ ಬಾಲ್ ಪಂದ್ಯದಲ್ಲಿ ಕೆಲಸೂರು ಪ್ರಥಮ

 ಮೈಸೂರು ತಂಡಕ್ಕೆ ದ್ವಿತೀಯ ಸ್ಥಾನ

ಗುಂಡ್ಲುಪೇಟೆ : ತಾಲೂಕಿನ ಕೆಲಸೂರು ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಅತಿಥೇಯ ಕೆಲಸೂರು ತಂಡ ಪ್ರಥಮ ಹಾಗೂ ಮೈಸೂರು ತಂಡ ದ್ವಿತೀಯ ಸ್ಥಾನ ಗಳಿಸಿತು. ಪ್ರಥಮ ಬಹುಮಾನ ಪಡೆದ ಕೆಲಸೂರು ತಂಡಕ್ಕೆ ಆಕರ್ಷಕ ಟ್ರೋಫಿ ಮತ್ತು 20,000 ರೂ. ನಗದು ಬಹುಮಾನ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 10,000 ರೂ. ನಗದು ಮತ್ತು ಟ್ರೋಫಿ ವಿತರಣೆ ಮಾಡಲಾಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ 20 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಬಹುಮಾನ ವಿತರಣೆ ಸಂದರ್ಭ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಕುಮಾರ್, ಶಿಕ್ಷಕಿ ಲತೀಷ್ಯಾ ಚಿನ್ನಪ್ಪ, ಮುಖಂಡರಾದ ಲಿಂಗರಾಜು, ಕುಮಾರ್, ಸಿದ್ದರಾಜು, ಚನ್ನನಾಯಕ್, ಮಹದೇವ, ಸಿದ್ದು, ಸುರೇಶ್ ಮತ್ತು ಗ್ರಾಮಸ್ಥರು ಇದ್ದರು.