filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 46; 
ಜಿಲ್ಲೆ

ಥಗ್‌ಲೈಪ್ ಸಿನಿಮಾ ಬಿಡುಗಡೆಗೆ ವಿರೋಧ

ಚಿತ್ರದುರ್ಗ: ರಾಜ್ಯದಲ್ಲಿ ಕಮಲ್‌ಹಾಸನ್ ನಟನೆಯ‘ಥಗ್‌ಲೈಪ್’ಸಿನಿಮಾ ಬಿಡುಗಡೆ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡ) ಕಾರ‌್ಯ ಕರ್ತರು ನಗರದ ವೀರ ವನಿತೆ ಒನಕೆ ಓಬವ್ವ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ನಟ- ರಾಜಕಾರಣಿ ಕಮಲ್‌ಹಾಸನ್ ಅವರು,ತಮಿಳಿನಿಂದ ಕನ್ನಡ ಭಾಷೆ ಉಗಮವಾಗಿದೆ ಎಂಬ ತಪ್ಪು ಮತ್ತು ದುರುದ್ದೇಶಪೂರಿತ ಹೇಳಿಕೆ ನೀಡಿರುವುದು ಖಂಡನೀಯ. ಇಂಥ ಸುಳ್ಳು ಮತ್ತು ಆಧಾರರಹಿತ ಹೇಳಿಕೆ ಕನ್ನಡ ಭಾಷೆಯ ಶ್ರೀಮಂತ ಇತಿಹಾಸ,ಸಂಸ್ಕೃತಿ ಮತ್ತು ಸ್ವಾಭಿಮಾನಕ್ಕೆ ತೀವ್ರ ಅಘಾತವನ್ನು ಉಂಟು ಮಾಡಿದೆ.

ಕನ್ನಡಿಗರಿಂದ ತೀವ್ರ ಖಂಡನೆ ಮತ್ತು ವಿರೋಧ ವ್ಯಕ್ತವಾದರೂ ಕಮಲ್‌ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆಯಾಚಿಸದೇ ಹೇಳಿಕೆಗೆ ಬದ್ಧವಾಗಿದ್ದೇನೆ ಎಂದಿರುವುದು ಕನ್ನಡಿಗರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜೂನ್ 5ರಂದು ನಿಗದಿಯಾಗಿರುವ ಅವರ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆಯಾಗದಂತೆ ನಾವು ತಡೆಯುತ್ತೇವೆ. ಈ ಚಿತ್ರದ ವಿತರಕರು ತಮ್ಮ ಹೂಡಿಕೆ ರಕ್ಷಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಸಿನಿಮಾ ಬಿಡುಗಡೆಗೆ ಸಹಕಾರ ನೀಡದಂತೆ ಕರ್ನಾಟಕ ವಾಣಿಜ್ಯ ಮಂಡಳಿ,ಕನ್ನಡ ಚಿತ್ರರಂಗ ಮತ್ತು ರಾಜ್ಯ ಸರ್ಕಾರವನ್ನು ಕಾರ‌್ಯಕರ್ತರು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ವೇದಿಕೆ ಜಿಲ್ಲಾಧ್ಯಕ್ಷ ಟಿ.ರಮೇಶ್,ವಿಜಯಕುಮಾರ್,ರಾಜಪ್ಪ,ಪಿ.ರಮೇಶ್,ಎಸ್.ಬಿ.ಗಣೇಶ್,ಆರ್.ಬಿ.ಲಕ್ಷ್ಮಣ,ನೀಲಕಂಠ,ಜಿ.ಘ ನಶ್ಯಾಮ್, ಪ್ರಸಾದ್‌ ಮಲ್ಲ,ರಮೇಶ್,ರಾಮು,ರಾಮಕೃಷ್ಣಪ್ಪ,ದಾದಾಪೀರ್,ಚಂದ್ರಕಲಾ,ದ್ರಾಕ್ಷಾಯಣಿ,ಮಂಜುಳಾ,ಸುಮಾ,ಅಂಬಿಕಾ, ಮನು, ಮಹದೇವಯ್ಯ,ಉಮೇಶ್, ರಮೇಶ್,ಎಚ್.ಜಯಪ್ಪ,ಪ್ರಶಾಂತ್‌ರೆಡ್ಡಿ,ಕಾರ್ತಿಕ,ರಾಜೀವ್,ರುದ್ರೇಶ್ ಇತರರು ಪ್ರತಿಭಟನೆಯಲ್ಲಿ ಇದ್ದರು.