ಜಿಲ್ಲೆ

ಥಂಡಿ ಜತೆಗೆ ವರುಣನ ಅಬ್ಬರ

Yadgir


ಯಾದಗಿರಿ: ಬಂಗಾಳಕೊಲ್ಲಿಯಲ್ಲಿ ಸೃಷ್ಠಿಯಾದ ಮಾಂಡೌಸ್ ಚಂಡಮಾರುತದ ಎಫೆಕ್ಟ್ ಗಿರಿಜಿಲ್ಲೆಯಲ್ಲಿ ಆಗಿದ್ದು, ಕಳೆದೆರಡು ದಿನಗಳಿಂದ ಮೋಡ ಕವಿತ ವಾತಾವರಣ ಮುಂದುವರೆದು, ಸೋಮವಾರ ಜಿಲ್ಲಾದ್ಯಂತ ಮಳೆ ಸುರಿದಿದೆ.

ಕೊರೆವ ಚಳಿಗೆ ಬೆಚ್ಚಿಬಿದ್ದಿರುವ ಜನತೆ ಇದೀಗ ಮಳೆಯ ಅಬ್ಬರದಿಂದ ಹೌಹಾರುವಂತಾಗಿದ್ದು, ವಾತಾವರಣದಲ್ಲಿ ಬದಲಾವಣೆಯಾದ ಕಾರಣ ಪುಟ್ಟ ಮಕ್ಕಳು ಮತ್ತು ವೃದ್ಧರ ಆರೋಗ್ಯದಲ್ಲಿ ಏರುಪೇರಾಗುವ ಭೀತಿ ಜನರಲ್ಲಿ ಕಾಡುತ್ತಿದೆ. ಭಾನುವಾರ ರಾತ್ರಿ ಅಲ್ಪ ಪ್ರಮಾಣದಲ್ಲಿ ಮಳೆಯಾಗಿದ್ದು, ಸೋಮವಾರ ಮಧ್ಯಾಹ್ನ 2 ರಿಂದ ಸತತ 5 ತಾಸುಗಳ ಕಾಳ ಎಡೆಬಿಡದೆ ಮಳೆ ಸುರಿಯಿತು. ಇದು ಜನತೆಗೆ ಮಳೆಗಾಲದ ಅನುಭವ ನೀಡಿತು.

ಅಕಾಲಿಕವಾಗಿ ಸುರಿದ ಮಳೆಯಿಂದಾಗಿ ಜಿಲ್ಲೆಯ ಗ್ರಾಮೀಣ ಭಾಗದ ರೈತರು ಪರೇಶಾನ್ ಅನುಭವಿಸುವಂತಾಗಿದೆ. ಸಧ್ಯ ಜಮೀನಿನಲ್ಲಿ ಹತ್ತಿ, ತೊಗರಿ ರಾಶಿ ಭರ್ಜರಿಯಾಗಿ ನಡೆದಿದೆ. ಅಲ್ಲದೆ ಕಳೆದೊಂದು ವಾರದಿಂದ ಮಾರುಕಟ್ಟೆಗೆ ತೊಗರಿ ಬರುತ್ತಿದೆ. ಎಲ್ಲೆಡೆ ಕೂಲಿ ಕಾಮರ್ಿಕರನ್ನು ಕರೆತಂದು ತೊಗರಿ ಹಾಗೂ ಹತ್ತಿ ಬಿಡಿಸುವಲ್ಲಿ ರೈತರು ಮಗ್ನರಾಗಿದ್ದಾರೆ. ಆದರೆ ದಿಢೀರ್ ಸುರಿದ ಮಳೆಯಿಂದ ಅನ್ನದಾತರು ತೊಂದರೆ ಅನುಭಸುವಂತಾಯಿತು.ಮಾಂಡೌಸ್

ಚಂಡಮಾರುತದ ಕಾರಣ ಜಿಲ್ಲೆಯಲ್ಲಿ ಚಳಿ ವಿಪರೀತವಾಗಿದೆ. ಬೆಳಗ್ಗೆ 10 ಗಂಟೆಯಾದರೂ, ಸೂರ್ಯನ ಕಿರಣಗಳು ಚುರುಕುಗೊಳ್ಳುತ್ತಿಲ್ಲ. ಹೀಗಾಗಿ ಜನತೆ ಮಂಕಿಕ್ಯಾಪ್, ಮೌಫ್ಲರ್ ಹಾಗೂ ಶ್ವೆಟ್ಟರ್ಗಳಿಗೆ ಮೊರೆ ಹೋಗುವಂತಾಗಿದೆ.