ಬಾಗಲಕೋಟೆ ನಗರದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜಿನ ವಿಶೇಷ ಅಽಕಾರಿ ಡಾ.ಬಿ.ಎಚ್.ನಾರಾಯಣಿ ಅವರನ್ನು ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ನಾಗರಾಹ ಹದ್ಲಿ ಸನ್ಮಾನಿಸಿದರು. 
ಜಿಲ್ಲೆ

ತ್ವರಿತಗತಿಯಲ್ಲಿ ಕಾರ್ಯ

ಬಾಗಲಕೋಟೆ: ಜಿ¯್ಲೆಯಲ್ಲಿ ಸ್ಥಾಪನೆಯಾಗಲಿರುವ ನೂತನ ಸರ್ಕಾರಿ ವೈದ್ಯಕೀಯ ಕಾಲೇಜಿನ ಕುರಿತು ಸರ್ಕಾರದಿಂದ ನೇಮಕಗೊಂಡಿರುವ ವಿಶೇಷ ಅಽಕಾರಿ ಡಾ.ಬಿ.ಎಚ್.ನಾರಾಯಣಿ ಅವರನ್ನು ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ನಾಗರಾಹ ಹದ್ಲಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಡಾ.ಬಿ.ಎಚ್.ನಾರಾಯಣಿ ಮಾತನಾಡಿ, ಈ ಭೇಟಿಯಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣದ ಪ್ರಗತಿ, ಮೂಲಸೌಕರ್ಯದ ಅಭಿವೃದ್ಧಿ, ಭೂಮಿಯ ಗುರುತು, ಅಽಸೂಚನೆ ಪ್ರಕ್ರಿಯೆ ಮತ್ತು ಶೈಕ್ಷಣಿಕ ಮೂಲ ಸೌಲಕರ್ಯ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಸ್ಥಳೀಯ ಆಡಳಿತದೊಂದಿಗೆ ಸಮನ್ವಯ ಸಾಽಸಿ ಮತ್ತು ಶಾಸಕ ಎಚ್.ವೈ.ಮೇಟಿ ಅವರ ಮಾರ್ಗದರ್ಶನದಲ್ಲಿ ಕಾಮಗಾರಿ ನಿರ್ವಹಣೆ ಮತ್ತು ಅನುಷ್ಠಾನದಲ್ಲಿ ತ್ವರಿತಗತಿಯ ಯೋಜನೆಗಳನ್ನು ರೂಪಿಸಲಾಗವುದು, ತ್ವರಿತಗತಿಯಲ್ಲಿ ಕಾರ್ಯ ನಡೆಯಲಿದ ಎಂದು ತಿಳಿಸಿದರು.

ಕಾಂಗ್ರೆಸ್ ಜಿ¯್ಲÁ ಸಂಯೋಜಕ ಶ್ರೀಧರ ನೀಲನಾಯಕ, ಎಸ್ಟಿ ಘಟಕದ ಬ್ಲಾಕ್ ಅಧ್ಯಕ್ಷ ಶಂಕರ ನಾಯಕ, ಒಬಿಸಿ ಘಟಕದ ಬ್ಲಾಕ್ ಅಧ್ಯಕ್ಷ ಅಜೇಯ ಕಪಾಟೆ, ವಿಜಯ ಮುಳ್ಳೂರ, ಸುನೀಲ ಬಾಲಗಾವಿ ಇತರರು ಇದ್ದರು.